ಗದಗ,ಡಿ.17- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲಾ ಪ್ರವಾಸದ ವೇಳೆ 2 ಹೆಲಿಪ್ಯಾಡ್‍ಗಳಿಂದಾಗಿ ಪೈಲಟ್ ಗೊಂದಲಕ್ಕೊಳಗಾದ ಪ್ರಸಂಗ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿರುವ ಗದಗಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿ ಕಾಫ್ಟರ್‍ನಲ್ಲಿ ಪ್ರಯಾಣಿಸಿದರು. ಗದಗ್‍ನಲ್ಲಿ ಹೆಲಿಕಾಫ್ಟರ್ ಲ್ಯಾಂಡಿಂಗ್ ಮಾಡುವಾಗ ಒಂದೇ ಸ್ಥಳದಲ್ಲಿ 2 ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗಿತ್ತು.
ಪೈಲಟ್ ಮೊದಲು ಸಿಗುವಂತಹ ಚಿಕ್ಕದಾದ ಹೆಲಿಪ್ಯಾಡ್‍ನಲ್ಲಿ ಹೆಲಿಕಾಫ್ಟರ್ ಅನ್ನು ಲ್ಯಾಂಡ್ ಮಾಡಲು ಮುಂದಾದರು. ಭೂಮಿಗೆ ಕೇವಲ ನಾಲ್ಕೈದು ಅಡಿಗಳ ಅಂತರದಲ್ಲಿದ್ದಾಗ ಇದು ನಿಗದಿತ ಹೆಲಿಪ್ಯಾಡ್ ಅಲ್ಲ ಎಂದು ಮನವರಿಕೆಯಾಗಿ ಮತ್ತೆ ಟೇಕ್ ಆಫ್ ಆಗಿದ್ದು ಕೆಲವೇ ಮೀಟರ್‍ಗಳ ಅಂತರದಲ್ಲಿ ಮತ್ತೊಂದು ಹೆಲಿಪ್ಯಾಡ್‍ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು
ಪೈಲಟ್ ಗೊಂದಲಕ್ಕೊಳಗಾಗಿದ್ದರಿಂದ ಕೆಲಕಾಲ ಅಧಿಕಾರಿಗಳು ಗಲಿಬಿಲಿಗೀಡಾಗಿದ್ದರು. ಆದರೆ ನಿಗದಿತ ಹೆಲಿಪ್ಯಾಡ್‍ನಲ್ಲೇ ಸಿದ್ದರಾಮಯ್ಯನವರ ಹೆಲಿಕಾಫ್ಟರ್ ಲ್ಯಾಂಡ್ ಆದ್ದರಿಂದ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು. ಹೆಲಿಪ್ಯಾಡ್‍ಗೆ ಸಚಿವ ಎಚ್.ಕೆ.ಪಾಟೀಲ್, ಜಿಲ್ಲೆಯ ಶಾಸಕರುಗಳು ಆಗಮಿಸಿ ಮುಖ್ಯಮಂತ್ರಿಯವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್‍ರ ಮನೆಯಿಂದ ತೆರಳುವಾಗ ಸಿದ್ದರಾಮಯ್ಯ ಎಡವಿದ್ದು ಕಂಡುಬಂದಿತು.