ಹುಬ್ಬಳ್ಳಿ,ಸೆ.30- ತಮಿಳುನಾಡಿಗೆ ಕಾವೇರಿ ಮ್ಯಾನೇಜ್ಮೆಂಟ್ ಪ್ರಾಧಿಕಾರ ಮತ್ತೇ ನೀರು ಬಿಡಬೇಕು ಎಂಬ ಆದೇಶ ಕುರಿತು ನಾವು ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಈ ಕುರಿತು ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಬಹಳ ನೋವು ತಂದಿದ್ದು ಮತ್ತೇ ಕಾವೇರಿ ನಿರ್ವಹಣ ಅಭಿವೃದ್ಧಿ ಪ್ರಾಕಾರ ಮತ್ತೇ ನೀರು ಬಿಡಸಲು ಆದೇಶ ಮಾಡಿದ್ದು ನಿಜ. ಆದರೆ ಇದರಿಂದ ನಮಗೂ ಸಮಸ್ಯೆ ಎದುರಾಗಿದೆ ಎಂದರು.
ಈ ಕುರಿತು ನಿನ್ನೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಶಿವರಾಜ್ ಪಾಟೀಲ್, ರವೀಂದ್ರ, ಶೆಟ್ಟಿ ಅವರ ಜೊತೆ ಚರ್ಚೆ ಮಾಡಲಾಗಿದ್ದು ಅವರ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ.
ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!
ಏನೆಲ್ಲಾ ಕಾನೂನು ತೊಡಕು ಇವೆ ಆ ಬಗ್ಗೆ ಮಾಹಿತಿ ಪಡೆಯಲಾಗಿದೆ ಸರಿಯಾಗಿ ಮತ್ತು ಮನವರಿಕೆ ಆಗುವಂತೆ ನಮ್ಮ ಸಮಸ್ಯೆಗೆ ಏನು ಪರಿಹಾರ ಆ ಬಗ್ಗೆ ಸಹ ಮಾಹಿತಿ ಪಡೆಯಲಾಗಿದೆ ಎಂದ ಅವರು ರಾಜ್ಯದ ಹಿತಾಸಕ್ತಿಗೋಸ್ಕರ ಮಾಡುತ್ತೇವೆ ಆದರೆ ಕೇಂದ್ರ ಸರ್ಕಾರ ಮೌನ ಸರಿಯಲ್ಲ ಸಂಕಷ್ಟ ಸೋತ್ರ ಕಂಡು ಹಿಡಿಯಬೇಕಾಗಿದೆ , ಈಗಲಾದರು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶ ಮಾಡಬೇಕು ಎಂದು ಒತ್ತಯಿಸಿದರು. ಕೆಆರ್‍ಎಸ್ ಹಾಗು ಕವೇರಿ ಜಲಾನಯನ ಭಾಗದ ಜಲಾಶಯದಲ್ಲಿ ನೀರು ಕಡಿಮೆ ಇದೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಸಂಕಷ್ಟ ಸೋತ್ರವೇ ಇದಕ್ಕೆ ಪರಿಹಾರ ಆದ್ದರಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ಬರಬೇಕು ಎಂದರು.
ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗೆ ಕೇಂದ್ರ ಕಾನೂನು ಆಯೋಗದ ಚಿಂತನೆ ಇನ್ನು ಕೇಂದ್ರ ಸರ್ಕಾರ ಹಾಗೂ ಕಾನೂನು ಆಯೋಗದೇಶದಲ್ಲಿ ಏಕಕಾಲದಲ್ಲಿ ಚಿಂತನೆ ಮಾಡಿದ್ದು ಸರಿಯಲ್ಲಲೋಕಸಭಾ ಚುನಾವಣೆ ಮುಂದೂಡಲು ಈ ಹುನ್ನಾರ ಎಂದು ಗಂಭೀರ ಸ್ವರೂಪದ ಆರೋಪ ಮಾಡಿದರು.
ಲೋಕಸಭೆ ಅವ ಸಹ ಮುಂದೂಡುವ ಷಡ್ಯಂತ್ರ ಮಾಡಿದೆ ಎಂದ ಅವರು ನಾಲ್ಕು ವರ್ಷಗಳ ಏನು ಮಾಡಿದರಿ ಈಗ ಚುನಾವಣೆ ಬಂದಾಗ ಏಕೆ ಕೇಂದ್ರದ ಈ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚುನಾವಣಾ ಆಯೋಗ ಎಚ್ಚರಿಕೆ ಹೆಜ್ಜೆ ಇಡಬೇಕು ಎಂದು ಸಹ ಅವರು ಸಲಹೆ ನೀಡಿದರು. ಮುಖಂಡರಾದ ಮಹೇಂದ್ರ ಸಿಂಘಿ, ವಸಂತ ಲದ್ವಾ ಮುಂತಾದವರು ಇದ್ದರು.