Monday, July 15, 2024
Homeರಾಷ್ಟ್ರೀಯಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ಮಕ್ಕಳ ಜೊತೆ ಸೇರಿ ಪತ್ನಿಯ ತಲೆ ಕಡಿದ ಪತಿ..!

ಬಂದಾ,ಸೆ.30- ಮಕ್ಕಳು ಹಾಗೂ ಪತಿಯೇ ಪತ್ನಿಯ ತಲೆ ಕಡಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಚಮ್ರಾಹ ಗ್ರಾಮದಲ್ಲಿ ನಡೆದಿದೆ.ಭೀಕರವಾಗಿ ಕೊಲೆಯಾದ ಮಹಿಳೆಯನ್ನು ಮಧ್ಯಪ್ರದೇಶದ ಛತ್ತರ್‍ಪುರ ಜಿಲ್ಲೆಯ ಪಹ್ರಾ ಗ್ರಾಮದ ನಿವಾಸಿ ರಾಮ್‍ಕುಮಾರ್ ಅಹಿರ್ವಾರ್ ಅವರ ಪತ್ನಿ ಮಾಯಾ ದೇವಿ ಎಂದು ಗುರುತಿಸಲಾಗಿದೆ.

ಮೊದಲು ಆಕೆಯನ್ನು ಕೊಲೆ ಮಾಡಿ ನಂತರ ರುಂಡ ಬೇರ್ಪಡಿಸಿ ಬೇರೊಂದು ಸ್ಥಳದಲ್ಲಿ ಬೀಸಾಡಿದ್ದರು ಎಂದು ಪೊಲೀಸ್ ವರಿಷ್ಠಾ„ಕಾರಿ ಅಂಕುರ್ ಅಗರ್ವಾಲ್ ಹೇಳಿದ್ದಾರೆ. ಶವವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾದ ಆಕೆಯ ಕುಟುಂಬ ಸದಸ್ಯರ ಮೇಲೆ ಅನುಮಾನ ಉಂಟಾಯಿತು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(30-09-2023)

ವಿಚಾರಣೆ ವೇಳೆ, ಪತಿ ರಾಮ್‍ಕುಮಾರ್, ಅವರ ಮಕ್ಕಳಾದ ಸೂರಜ್ ಪ್ರಕಾಶ್ ಮತ್ತು ಬ್ರಿಜೇಶ್ ಮತ್ತು ಸೋದರಳಿಯ ಉದಯಭಾನ್ ಅವರು ಮಹಿಳೆಯ ಕೊಲೆಗೆ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹೇಳಿದರು. ಮಾಯಾ ದೇವಿ ರಾಮ್‍ಕುಮಾರ್ ಅವರ ಎರಡನೇ ಪತ್ನಿ, ಮತ್ತು ಅವರ ಒಬ್ಬ ಮಗನೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದರು ಮತ್ತು ಇನ್ನೊಬ್ಬ ಮಗನೊಂದಿಗೆ ಇದೇ ರೀತಿಯ ವಿಷಯವನ್ನು ಪ್ರಾರಂಭಿಸಲು ಬಯಸಿದ್ದಳು.

ಇದರಿಂದ ಕುಪಿತಗೊಂಡ ನಾಲ್ವರು ಮಾಯಾದೇವಿಯನ್ನು ವಾಹನದಲ್ಲಿ ಚಾಮ್ರಾಹ ಗ್ರಾಮಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ, ಕೊಡಲಿಯಿಂದ ತಲೆ ಕೊಯ್ದಿದ್ದಾರೆ ನಂತರ ಅವಳ ನಾಲ್ಕು ಬೆರಳುಗಳನ್ನು ಕತ್ತರಿಸಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅಪರಾಧಕ್ಕೆ ಬಳಸಿದ್ದ ವಾಹನ ಮತ್ತು ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

RELATED ARTICLES

Latest News