ಬೆಂಗಳೂರು,ಡಿ.18- ಬಿಬಿಎಂಪಿ ಅಕ್ರಮ ಕಾಮಗಾರಿ ಕುರಿತು ರಚಿಸಲಾದ ಸಮಿತಿಯನ್ನು ರದ್ದುಪಡಿಸಿ ರಾಜ್ಯಸರ್ಕಾರ ಆದೇಶಿಸಿದೆ. ಕೋರ್ಟ್ ಸ್ಟೇ ನೀಡಿದ್ದ ಹಿನ್ನೆಲೆಯಲ್ಲಿ ಸಮಿತಿ ರದ್ದು ಮಾಡಿ ರಾಜ್ಯಸರ್ಕಾರ ಆದೇಶ ನೀಡಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕಾಮಗಾರಿಗಳಲ್ಲಿ ಆಗಿದೆ ಎನ್ನಲಾದ ಅಕ್ರಮಗಳ ಕುರಿತಾದ ದೂರಿನ ಸಂಬಂಧ ವಿವರವಾದ ತನಿಖೆಯನ್ನು ನಡೆಸಲು ರಚಿಸಲಾಗಿರುವ ತನಿಖಾ ಸಮಿತಿಗಳನ್ನು ರದ್ದುಪಡಿಸಲಾಗಿದೆ.
ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಉಗ್ರರ ಸ್ಲೀಪರ್‌ಸೆಲ್ ಆಗಿದೆ : ಯತ್ನಾಳ್
ಘನತ್ಯಾಜ್ಯ ನಿರ್ವಹಣೆ, ರಸ್ತೆ ಅಭಿವೃದ್ಧಿ, ಓಎಫ್‍ಸಿ ಕೇಬಲ್ ಅಳವಡಿಕೆ, ಬೃಹತ್ ನೀರು ಕಾಲುವೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎನ್ನಲಾದ ದೂರುಗಳ ಪ್ರಕರಣಗಳಲ್ಲಿ ಸ್ಥಳ ಮತ್ತು ದಾಖಲಾತಿಗಳ ಪರಾಮರ್ಶೆಯೊಂದಿಗೆ ಪರಿಪೂರ್ಣ ತನಿಖಾ ವರದಿಯನ್ನು 30 ದಿನಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸುವ ಸೂಚನೆಯೊಂದಿಗೆ 4 ತಜ್ಞರ ಪರಿಣಿತರ ತನಿಖಾ ಸಮಿತಿಗಳನ್ನು ರಚಿಸಿ ಆದೇಶಿಸಲಾಗಿತ್ತು. ಆದರೆ ಈಗ ಸಮಿತಿಯನ್ನು ರದ್ದು ಮಾಡಿ ರಾಜ್ಯಸರ್ಕಾರ ಆದೇಶಿಸಿದೆ.