ದುಬೈ, ಡಿ. 19- ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು 2023ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ 2024ರ ವಿಶ್ವದ ಅತ್ಯಂತ ಶ್ರೀಮಂತ ಲೀಗ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದುಬೈನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಂಡಿರುವ ರಿಷಭ್ ಪಂತ್ ತಮ್ಮ ಸಂತಸವನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ಐಪಿಎಲ್ ಮಿನಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಬಹಳ ವರ್ಷಗಳಿಂದ ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ಹೆಬ್ಬಯಕೆ ಹೊಂದಿದ್ದೆ. ಹರಾಜಿನಲ್ಲಿ ಪಾಲ್ಗೊಳ್ಳುವುದರಿಂದ ತಂಡಕ್ಕೆ ಬೇಕಾದ ಆಟಗಾರರನ್ನು ಖರೀದಿ ಮಾಡಿಕೊಳ್ಳಲು ಸುಲಭವಾಗುತ್ತದೆ 'ಎಂದು ರಿಷಭ್ ಪಂತ್ ಹೇಳಿದ್ದಾರೆ.
ಸಾಮಾನ್ಯವಾಗಿ ನಾವು ಬಯಸದೆ ಇರುವಂತಹ ಕೆಲಸ ಮಾಡಲು ಮುಂದಾದಾಗ ನಾವು ಸಹಜವಾಗಿಯೇ ಆತಂಕಕ್ಕೊಳಗಾಗುತ್ತೇವೆ. ನಾನು ಒಬ್ಬ ಆಟಗಾರನಾಗಿ ರೂಪು ಗೊಳ್ಳಲು ಬಯಸುತ್ತೇನೆ. ಕ್ರಿಕೆಟ್‍ನಲ್ಲಿ ಇನ್ನೂ ಸಾಕಷ್ಟು ಕಲಿಯುವ ಅವಶ್ಯಕತೆ ಇದೆ, ಐಪಿಎಲ್ ಹರಾಜು ಪ್ರಕ್ರಿಯೆಯ ಟೇಬಲ್ ಬಳಿ ಎಷ್ಟು ಕ್ರಿಕೆಟಿಗರಿಗೆ ಕುಳಿತುಕೊಳ್ಳುವ ಭಾಗ್ಯ ಸಿಕ್ಕಿದಿಯೋ ಗೊತ್ತಿಲ್ಲ, ನನಗಂತೂ ಈ ಅವಕಾಶ ದೊರಕಿರುವುದರಿಂದ ತುಂಬಾ ರೋಮಾಂಚನಗೊಂಡಿದ್ದೇನೆ ಎಂದು ಪಂತ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ : ಪ್ರಿಯಾಂಕ್ ಖರ್ಗೆ
2022ರ ಡಿಸೆಂಬರ್‍ನಲ್ಲಿ ಡೆಹ್ರಾಡೂನ್‍ನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ತೀವ್ರತರವಾದ ಗಾಯಗಳಿಗೆ ಒಳಗಾಗಿದ್ದ ರಿಷಭ್ ಪಂತ್ ಅಂತಾರಾಷ್ಟ್ರೀಯ ಅಲ್ಲದೆ ಐಪಿಎಲ್ ಟೂರ್ನಿಯಿಂದಲೂ ದೂರ ಉಳಿದಿದ್ದರು. ಪಂತ್ ಅನುಪಸ್ಥಿತಿಯಲ್ಲಿ 2023ರ ಐಪಿಎಲ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಪಿಎಲ್ ವಿಜೇತ ನಾಯಕ ಡೇವಿಡ್ ವಾರ್ನರ್ ಮುನ್ನಡೆಸಿದ್ದರಾದರೂ ಪ್ಲೇಆಫ್ ತಲುಪುಲ್ಲಿ ಎಡವಿದ್ದರು.
ಹದಿನೇಳನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸಿಕೊಳ್ಳುವ ಮೂಲಕ ರಿಷಭ್‍ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬಹುತೇಕ ಆಡಲಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದ್ದಾರ.