Monday, November 25, 2024
Homeರಾಷ್ಟ್ರೀಯ | Nationalಕೋವಿಡ್ ಭಯ : ಆರೋಗ್ಯ ಇಲಾಖೆ ಉನ್ನತ ಮಟ್ಟದ ಸಭೆ

ಕೋವಿಡ್ ಭಯ : ಆರೋಗ್ಯ ಇಲಾಖೆ ಉನ್ನತ ಮಟ್ಟದ ಸಭೆ


ಬೆಂಗಳೂರು,ಡಿ.20- ಕೋವಿಡ್‍ನ ಸಂಭವನೀಯ 4ನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಪೂರ್ವ ತಯಾರಿ ಆರಂಭಿಸಿದ್ದು, ಇಂದು ಉನ್ನತ ಮಟ್ಟದ ಮಹತ್ವದ ಸಭೆ ನಡೆದಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು , ಹಿರಿಯ ಅಕಾರಿಗಳು, ತಂತ್ರಜ್ಞರು, ಐಸಿಎಂಆರ್, ನೀತಿ ಆಯೋಗ ಹಾಗೂ ಇತರ ವೈದ್ಯಕೀಯ ಸಂಸ್ಥೆಗಳ ಪ್ರಮುಖರ ಜೊತೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ. ಕರ್ನಾಟಕದಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆನ್‍ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕೋವಿಡ್ ಸೋಂಕಿನ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕಳೆದ ಆಗಸ್ಟ್‍ನಲ್ಲಿ ಕಾಣಿಸಿಕೊಂಡಿರುವ ಕೋವಿಡ್‍ನ ರೂಪಾಂತರಿ ಓಮಿಕ್ರಾನ್ ಬಿಎ.2.86 ನ ಉಪತಳಿ ಜೆಎನ್-1 ಸೋಂಕು ಈವರೆಗೂ 36 ದೇಶಗಳಲ್ಲಿ ಕಾಣಿಸಿಕೊಂಡಿದೆ. ಜಾಗತಿಕವಾಗಿ ದಿನವೊಂದಕ್ಕೆ ಸರಾಸರಿ 51,214 ಪ್ರಕರಣಗಳು ವರದಿಯಾಗುತ್ತಿವೆ.

ಭಾರತದಲ್ಲಿ ದಿನಕ್ಕೆ ಸರಾಸರಿ 310 ಪ್ರಕರಣಗಳು ಕಂಡುಬಂದಿವೆ. ಜಾಗತಿಕ ಸೋಂಕಿನಲ್ಲಿ ಭಾರತದ ಪಾಲು 0.009ರಷ್ಟು ಎಂದು ಸಭೆಯಲ್ಲಿ ವಿವರಿಸಲಾಗಿದೆ. ಈವರೆಗೂ 2,16,51,693 ಸಕ್ರಿಯ ಪ್ರಕರಣಗಳು ವಿಶ್ವದಾದ್ಯಂತ ಚಾಲ್ತಿಯಲ್ಲಿವೆ. ಕಳೆದ 7 ದಿನಗಳಿಂದೀಚೆಗೆ 34,29,723 ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಏರಿಕೆ ತೀವ್ರಗೊಂಡಿದೆ. ಬ್ರೆಜಿಲ್‍ನಲ್ಲಿ 11.73 ಲಕ್ಷ ಸಕ್ರಿಯ ಪ್ರಕರಣಗಳಿದ್ದರೆ, ಅಮೆರಿಕಾದಲ್ಲಿ 9.89 ಲಕ್ಷ , ವಿಯಾಟ್ನಾಂನಲ್ಲಿ 9.39 ಲಕ್ಷ, ಮೆಕ್ಸಿಕೊದಲ್ಲಿ 4.14 ಲಕ್ಷ, ಜರ್ಮನಿಯಲ್ಲಿ 3.02 ಲಕ್ಷ, ಭಾರತದಲ್ಲಿ 2,311 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಭಾರತದಲ್ಲಿ ಕಳೆದ 2 ವಾರಗಳಿಂದೀಚೆಗೆ ಸೋಂಕು ಏರಿಕೆಯಾಗುತ್ತಿದ್ದು, ಡಿ.6 ರಂದು ದೈನಂದಿನ ಸೋಂಕಿನ ಪ್ರಕರಣ 115ರಷ್ಟಿದ್ದರೆ ಇಂದಿಗೆ ಅದು 614 ರಷ್ಟಾಗಿದೆ. ಸಕ್ರಿಯ ಪ್ರಕರಣಗಳು 587 ರಿಂದ 2,305 ರವರೆಗೂ ಹೆಚ್ಚಿವೆ. ದಿನೇ ದಿನೇ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದೈನಂದಿನ ಸೋಂಕಿನಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಅದರಲ್ಲೂ ನಿನ್ನೆಯ ದಿನ ಅತೀ ಹೆಚ್ಚಿನ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಇನ್ನು ರಾಜ್ಯಗಳ ಮಟ್ಟಿಗೆ ವಿಶ್ಲೇಷಿಸುವುದಾದರೆ ಕೇರಳದಲ್ಲಿ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, 2041 ಮಂದಿ ಒಟ್ಟು ಸೋಂಕಿತರಿದ್ದಾರೆ. ಕರ್ನಾಟಕದಲ್ಲಿ 2ನೇ ಅತಿ ಹೆಚ್ಚು ಸೋಂಕಿತರಿದ್ದು, 79 ಮಂದಿ ಬಾತರಾಗಿದ್ದಾರೆ. ತಮಿಳುನಾಡು 77, ಮಹಾರಾಷ್ಟ್ರ 35, ಗೋವಾ 23, ಪುದಿಚೇರಿ 20, ಗುಜರಾತ್ 12, ತೆಲಂಗಾಣ 9, ಪಂಜಾಬ್ 5, ದೆಹಲಿ 4, ಮಧ್ಯಪ್ರದೇಶ, ಜಾರ್ಖಂಡ್ ತಲಾ 2, ಉತ್ತರ ಪ್ರದೇಶದಲ್ಲಿ ಒಂದು ಕೋವಿಡ್ ಸೋಂಕು ಕಂಡುಬಂದಿದೆ.

ನಟಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಮಾಡಿದ ನಾಲ್ವರನ್ನು ಪತ್ತೆ ಹಚ್ಚಿದ ಪೋಲೀಸರು

ಅದರಲ್ಲೂ 5 ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿವೆ. ಒಟ್ಟು 16 ಮಂದಿ ಜೀವ ಕಳೆದುಕೊಂಡಿದ್ದಾರೆ.
ದೇಶದಲ್ಲೇ ಉತ್ತರ ಪ್ರದೇಶದ ನಂತರ ಕರ್ನಾಟಕ ಅತೀ ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ನಿನ್ನೆಯ ಒಂದೇ ದಿನ 1,122 ಮಂದಿಯನ್ನು ಪರೀಕ್ಷೆಗೊಳಪಡಿಸಿದ್ದು, ಅವರಲ್ಲಿ ಶೇ.2.41 ರಷ್ಟು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೇರಳ 1,099 ಮಂದಿಗೆ ಪರೀಕ್ಷೆ ನಡೆಸಿದ್ದು, ಶೇ.20.75 ರಷ್ಟು ಸೋಂಕಿತರು, ಮಹಾರಾಷ್ಟ್ರದಲ್ಲಿ 167 ಜನರನ್ನು ಪರೀಕ್ಷೆಗೊಳಪಡಿಸಿದರೆ ಶೇ. 7.78 ರಷ್ಟು, ಜಾರ್ಖಂಡ್‍ನಲ್ಲಿ 62 ಜನರನ್ನು ಪರೀಕ್ಷೆಗೊಳಪಡಿಸಿದರೆ ಶೇ. 3.23 ರಷ್ಟು, ಮಧ್ಯಪ್ರದೇಶದಲ್ಲಿ 42 ಜನರನ್ನು ಪರೀಕ್ಷೆಗೊಳಪಡಿಸಿದರೆ ಶೇ. 2.38 ರಷ್ಟು ಮಂದಿ ಸೋಂಕಿತರು ಕಂಡುಬಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತ್ಯಕ ಪರೀಕ್ಷೆಗಳಾಗಿದ್ದರೂ, ಸೋಂಕಿತರ ಸಂಖ್ಯೆ ಶೂನ್ಯವಾಗಿದೆ. ಕೇರಳದಲ್ಲಿ ಕಳೆದ ವಾರ 10 ಸಾವುಗಳು ವರದಿಯಾಗಿದೆ. ಶೇ. 93 ರಷ್ಟು ಸಕ್ರಿಯ ಪ್ರಕರಣಗಳಲ್ಲಿ ಸಾಧಾರಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಚೀನಾ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 131ಕ್ಕೆ ಏರಿಕೆ

ಕರ್ನಾಟಕದಲ್ಲಿ ಒಬ್ಬರು ಮಾತ್ರ ಮೃತಪಟ್ಟಿದ್ದು, ಉಳಿದ ಎಲ್ಲರೂ ಸಾಧಾರಣ ಆರೋಗ್ಯ ಸಮಸ್ಯೆಯಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 1 ಸಾವಿನ ಪ್ರಕರಣ ವರದಿಯಾಗಿದೆ. ಜೆನ್-1 ಉಪತಳಿಯ 20 ಪ್ರಕರಣಗಳು ಈವರೆಗೂ ವರದಿಯಾಗಿವೆ. ಅದರಲ್ಲಿ ಗೋವಾದಲ್ಲಿ 18, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ ಎಂದು ವಿವರಣೆ ನೀಡಲಾಗಿದೆ.

ಈ ಹಿಂದೆ ಪ್ರಧಾನಿಯವರ ನಿಯಿಂದ ದೇಶಾದ್ಯಂತ 4,135 ಆಮ್ಲಜನಕ ಉತ್ಪಾದನಾ ಘಟಕಗಳು, 4,16,857 ಆಮ್ಲಜನಕ ಸಿಲಿಂಡರ್‍ಗಳು, 896 ಸಂಗ್ರಹಣಾ ಟ್ಯಾಂಕುಗಳು, 1,13,186 ಆಕ್ಸಿಜನ್ ಕಾನ್ಸಟ್ರೇಂಟರ್‍ಗಳು, 52,853 ವೆಂಟಿಲೇಟರ್‍ಗಳನ್ನು ಒದಗಿಸಲಾಗಿತ್ತು. ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಒಂದು ಪ್ರಾಥಮಿಕ ಆರೋಗ್ಯ ಸೇವೆಯನ್ನು ಸಜ್ಜುಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

RELATED ARTICLES

Latest News