Friday, May 3, 2024
Homeಅಂತಾರಾಷ್ಟ್ರೀಯಚೀನಾ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 131ಕ್ಕೆ ಏರಿಕೆ

ಚೀನಾ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 131ಕ್ಕೆ ಏರಿಕೆ

ಬೀಜಿಂಗ್, ಡಿ. 20-ವಾಯುವ್ಯ ಚೀನಾದಲ್ಲಿ ಪ್ರಬಲ ಭೂಕಂಪನಲ್ಲಿ ಈವರೆಗೆ 131ಜನರು ಸಾವನ್ನಪ್ಪಿದ್ದು,ನಾಶಗೊಂಡಿರುವ ಮನೆಗಳ ಕೆಳಗೆ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರೆದಿದೆ.ಕಳೆದ 9 ವರ್ಷದಲ್ಲಿ ನಡೆದ ದೊಡ್ಡ ಭೂಕಂಪನ ಇದಾಗಿದ್ದು, ಚಳಿಗಾಲದಲ್ಲಿ ಬೆಚ್ಚನೆ ಮಲಗಿದ್ದವರು ಮಧ್ಯರಾತ್ರಿ ಕಂಪನದಿಂದ ಅವಶೇಷಗಳಡಿ ಸಮಾದಿಯಾಗಿದ್ದಾರೆ.

700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಹಲವರ ಪರಿಸ್ಥಿತಿ ಗಂಬೀರವಾಗಿದೆ. ಗನ್ಸು ಮತ್ತು ಕಿಂಗೈಪ್ರಾಂತ್ಯಗಳಲ್ಲಿ ರಸ್ತೆಗಳು ಹಾನಿಗೊಂಡಿದ್ದು ವಿದ್ಯುತ್‍ಸಂಪರ್ಕವೂ ನಾಶಗೊಂಡಿದೆ.

ಸಂವಹನ ಮಾರ್ಗಗಳನ್ನು ಸರಿಪಡಿಸಲು ಪ್ರಯತ್ನ ನಡೆದಿದ್ದು, ಕುಸಿದ ಕಟ್ಟಡಗಳಲ್ಲಿ ಬದುಕಿರುವವರಿಗಾಗಿ ತುರ್ತು ಕಾರ್ಯಚರಣೆ ಪಡೆ ನಿರಂತರ ಹುಡುಕುತ್ತಿದ್ದಂತೆ, ತಮ್ಮ ಮನೆಗಳನ್ನು ಕಳೆದುಕೊಂಡ ನೂರಾರು ಜನರು ತಣ್ಣನೆಯ ಚಳಿಗಾಲದ ರಾತ್ರಿಯನ್ನು ತರಾತುರಿಯಲ್ಲಿ ನಿರ್ಮಿಸಲಾದ ಟೆಂಟ್‍ಗಳಲ್ಲಿ ಕಳೆದಿದ್ದಾರೆ.

ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಅಪಮಾನ, ಪ್ರಧಾನಿ ಮೋದಿ ಬೇಸರ

ಹೆಚ್ಚಿನ ಮಾಹಿತಿ ಹೊರ ಜಗತ್ತಿಗೆ ತಿಳಿಯದಂತೆ ಕೆಲವೊಂದು ಗೊಪ್ಯತೆ ಕಾಪಾಡಲಾಗಿದ್ದು,ಸುಮಾರು 10 ಕಿ.ಮಿ ವ್ಯಾಪ್ತಿಯ ಪ್ರದೇಶ ಸಂಪೂರ್ಣ ನಾಶಗೊಂಡಿದೆ. ಇಲ್ಲಿಯವರೆಗೆ ಒಟ್ಟು 74 ಜನರನ್ನು ರಕ್ಷಿಸಲಾಗಿದ್ದು, 4,298 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಚೀನಾದ ತುರ್ತು ನಿರ್ವಹಣಾ ಸಚಿವಾಲಯ ತಿಳಿಸಿದೆ.

15.3 ಭೂಕಂಪವು ಗನ್ಸುದಲ್ಲಿ 155,393 ಮನೆಗಳಿಗೆ ಹಾನಿಯಾಗಿದೆ. ಹತ್ತಿರದ ಪ್ರದೇಶಗಳಿಂದ 736 ರಕ್ಷಕರನ್ನು ಮತ್ತು 2,042 ಅಗ್ನಿಶಾಮಕ ಸಿಬ್ಬಂದಿಯನ್ನು ಭೂಕಂಪ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗಿದೆ.2,000 ಹತ್ತಿ ಟೆಂಟ್‍ಗಳು, 5,000 ರೋಲ್‍ಅವೇ ಬೆಡ್‍ಗಳು, 5,000 ಓವರ್‍ಕೋಟ್‍ಗಳು ಮತ್ತು 10,000 ಕ್ವಿಲ್ಟ್‍ಗಳನ್ನು ಒಳಗೊಂಡಂತೆ ಮೂರನೇ ಬ್ಯಾಚ್ ಪರಿಹಾರ ಸಾಮಗ್ರಿಗಳನ್ನು ಗನ್ಸುಗೆ ಹಂಚಿಕೆ ಮಾಡಿರುವುದರಿಂದ ಹೆಚ್ಚಿನ ಪರಿಹಾರ ಸಾಮಗ್ರಿಗಳು ಸಹ ದಾರಿಯಲ್ಲಿವೆ ಎಂದು ಸಚಿವಾಲಯ ತಿಳಿಸಿದೆ.

ಭೂಕಂಪದಿಂದ ಪೀಡಿತರ ಮೂಲಭೂತ ಅಗತ್ಯಗಳನ್ನು ಬೆಂಬಲಿಸಲು ಒಟ್ಟು 133,500 ಪರಿಹಾರ ವಸ್ತುಗಳನ್ನು ಗನ್ಸು ಮತ್ತು ನೆರೆಯ ಕಿಂಗೈಪ್ರಾಂತ್ಯಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ. ಭೂಕಂಪದಿಂದ ತೀವ್ರ ಹಾನಿಗೊಳಗಾದ ಪ್ರದೇಶಗಳನ್ನು ಸಂಪರ್ಕಿಸುವ ಎಲ್ಲಾ ಗ್ರಾಮೀಣ ಹೆದ್ದಾರಿಗಳಲ್ಲಿ ಸಂಚಾರವನ್ನು ಪುನರಾರಂಭಿಸಲಾಗಿದೆ ಎಂದು ಹೇಳಿದೆ.

RELATED ARTICLES

Latest News