ಬೆಂಗಳೂರು, ಡಿ.21- ದುಬೈನಲ್ಲಿ ನಡೆದ 2024ರ ಮಿನಿ ಹರಾಜಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸ್ಪಿನ್ನರ್‍ಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ತಂಡದ ಮಾಜಿ ಸ್ಪೋಟಕ ಆಟಗಾರ ಎಬಿಡಿ ವಿಲಿಯರ್ಸ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮದೇ ಆದ ಅಧಿಕೃತ ಯುಟೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಮಿಸ್ಟರ್ 360 ಬ್ಯಾಟರ್ ಎಬಿಡಿ ವಿಲಿಯರ್ಸ್ ಆರ್‍ಸಿಬಿ ತಂಡವು ಕಳೆದೆರಡು ಆವೃತ್ತಿಗಳ ಹಿಂದೆ ಶ್ರೇಷ್ಠ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್‍ರನ್ನು ಬಿಡುಗಡೆಗೊಳಿಸಿತ್ತು. ಆದರೆ ವಾನಿಂದು ಹಸರಂಗರನ್ನು ಖರೀದಿಸಿ ಸ್ಪಿನ್ ವಿಭಾಗವನ್ನು ಬಲಿಷ್ಠಗೊಳಿಸಿದ್ದರು.
ಆರ್‍ಸಿಬಿ ವಿರುದ್ಧ ದೊಡ್ಡ ಗಣೇಶ್ ಆಕ್ರೋಶ
ಆದರೆ 2024ರ ಮಿನಿ ಹರಾಜಿಗೂ ಮುನ್ನವೇ ಹಸರಂಗವನ್ನು ಬಿಡುಗಡೆ ಮಾಡಿದ ಆರ್‍ಸಿಬಿ ಫ್ರಾಂಚೈಸಿ ಮಿನಿ ಹರಾಜಿನಲ್ಲಿ ವಿಶ್ವ ಶ್ರೇಷ್ಠ ಬೌಲರ್‍ಗಳನ್ನು ಖರೀದಿಸುವಲ್ಲಿ ಎಡವಿದೆ ಎಂದು ಎಬಿಡಿವಿಲಿಯರ್ಸ್ ಹೇಳಿದ್ದಾರೆ.
ಆರ್‍ಸಿಬಿ ತಂಡದಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‍ಗಳಾದ ರಶೀದ್‍ಖಾನ್, ಯುಜ್ವೇಂದ್ರ ಚಹಲ್, ವಾನಿಂದು ಹಸರಂಗರಂತಹ ಸ್ಪಿನ್ನರ್‍ಗಳ ಸೇವೆಯನ್ನು ಹೊಂದಿರದ ಕಾರಣ 2024ರ ಐಪಿಎಲ್ ಟೂರ್ನಿಯಲ್ಲಿ ತವರಿನ ಅಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸ್ಪಿನ್ನರ್‍ಗಳ ಕೊರತೆ ಎದುರಿಸಲಿದೆ ಎಂದು ಹೇಳಿದರು.