Friday, May 17, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-12-2023)

ನಿತ್ಯ ನೀತಿ : ನಿಮ್ಮ ಭಾವನೆ ಅರ್ಥ ಮಾಡಿಕೊಂಡ ನಂತರವೂ ನಿಮ್ಮನ್ನು ನೋಯಿಸುವವರು ಎಂದಿಗೂ ನಿಮ್ಮವರಾಗಲು ಸಾಧ್ಯವಿಲ್ಲ.

ಪಂಚಾಂಗ ಶುಕ್ರವಾರ 22-12-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ಅಶ್ವಿನಿ / ಯೋಗ: ಪರಿಘ / ಕರಣ: ವಣಿಜ್

ಸೂರ್ಯೋದಯ : ಬೆ.06.37
ಸೂರ್ಯಾಸ್ತ : 05.59
ರಾಹುಕಾಲ : 10.30-12.00
ಯಮಗಂಡ ಕಾಲ : 3.00-4.30
ಗುಳಿಕ ಕಾಲ : 7.30-9.00

ರಾಶಿ ಭವಿಷ್ಯ
ಮೇಷ
: ಬಾಂಧವರ ಸಹಾಯದಿಂದ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಲಿದೆ.
ವೃಷಭ: ಷೇರು ವ್ಯವಹಾರದಲ್ಲಿ ಸಮಸ್ಯೆ ಅಥವಾ ನಷ್ಟ ಸಂಭವಿಸಬಹುದು. ಎಚ್ಚರಿಕೆಯಿಂದಿರಿ.
ಮಿಥುನ: ಕುಟುಂಬದಲ್ಲಿ ಅಸಮಾಧಾನದ ವಾತಾ ವರಣ ತಿಳಿಗೊಳ್ಳಲಿದೆ.

ಕಟಕ: ನಿಮ್ಮಲ್ಲಿನ ಒಳ್ಳೆಯ ತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುವರು.
ಸಿಂಹ: ಬಿಡುವಿಲ್ಲದ ಕೆಲಸಗಳ ನಡುವೆಯೂ ಇತರರಿಗೆ ನೆರವು ನೀಡುವಿರಿ.
ಕನ್ಯಾ: ದೈನಂದಿನ ಆಗುಹೋಗುಗಳ ಬಗ್ಗೆ ಹೆಚ್ಚು ಗಮನ ಹರಿಸಿ.

ತುಲಾ: ಸಾಮಾಜಿಕ ಕೆಲಸ-ಕಾರ್ಯಗಳಿಗೆ ಸಮಯ ಮೀಸಲಿಡುವಿರಿ.
ವೃಶ್ಚಿಕ: ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೈನಂದಿನ ಜೀವನದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಧನುಸ್ಸು: ಕಟ್ಟಡ ನಿರ್ಮಾಣ ಮಾಡುವವರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ ದೊರೆಯಲಿದೆ.

ಮಕರ: ಅನ್ಯರಿಗೆ ಸಹಾಯ ಮಾಡುವಾಗ ಯಾವುದೇ ಪ್ರತಿಫಲಾಪೇಕ್ಷೆಯನ್ನು ನಿರೀಕ್ಷಿಸದಿರಿ.
ಕುಂಭ: ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗಬಹುದು.
ಮೀನ: ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಬಹುದು. ದೃಢ ನಿರ್ಧಾರ ಕೈಗೊಳ್ಳಿ.

RELATED ARTICLES

Latest News