ಕೊಪ್ಪಳ, ಡಿ.24-ಹನುಮಂತನ ಜನ್ಮಸ್ಥಳ ಎಂದು ಪ್ರಸಿದ್ದಿ ಪಡೆದಿರುವ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ ಮನೆ ಮಾಡಿದೆ. ಹನುಮ ಜಯಂತಿ ಅಂಗವಾಗಿ ಹನುಮಮಾಲೆದಾರಿಗಳು ಇಂದು ವಿಸರ್ಜನೆ ಕಾರ್ಯ ವೇಳೆ ಶ್ರೀರಾಮ-ಆಂಜನೇಯನ ನಾಮ ಘೋಷ ಮೊಳಗಿದೆ ನೆರೆಯ ಆಂಧ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಯಿಂದ ಲಕ್ಷಾಂತರ ಹನುಮ ಭಕ್ತರು ಆಗಮಿಸಿದ್ದಾರೆ.
ಜಿಲ್ಲಾಡಳಿತ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದ್ದು ರಾತ್ರಿ ಅಂಜನಾದ್ರಿಬೆಟ್ಟಕ್ಕೆ ಅಳವಡಿಸಿದ್ದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು. ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಪ್ರಧಾನಿ ನರೇಂದ್ರ ಮೋದಿ, ಪುನೀತ್ ರಾಜ್‍ಕುಮಾರ್ ಭಾವಚಿತ್ರ ಹಿಡಿದು ಆಗಮಿಸಿ ಜೈ ಕಾರ ಕೂಗಿದರು.
ಅತಿಯಾದ ತುಷ್ಟೀಕರಣಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಚ್ಚರ : ಜೋಶಿ
ಚಾತುರ್ಮಾಸದಲ್ಲಿ ರಾವಣನ ವಿರುದ್ಧ ಯುದ್ದಕ್ಕೆ ಹೋಗಲು ಹನುಮ ಸಂಕಲ್ಪವನ್ನು ಮಾಡಿ ತಪಸ್ಸು ಮಾಡುತ್ತಾನೆ. ಇದೇ ಕಾರಣಕ್ಕೆ ಹನುಮನ ಭಕ್ತರು ಚಾತುರ್ಮಾಸದ ಸಮಯದಲ್ಲಿ ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಸಂಕಲ್ಪ ಮಾಡಿ ಹನುಮ ಮಾಲೆಯನ್ನು ಧರಿಸುತ್ತಾರೆ.
ಇಂದು ವಿಸರ್ಜನೆಗಾಗಿ ಆಗಮಿಸಿ ಪೋಜೆ ಸಲ್ಲಿಸುತ್ತಿದ್ದಾರೆ.ಕೊಪ್ಪಳ ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆ ಅಂಜನಾದ್ರಿ ಬೆಟ್ಟದಲ್ಲಿ ನೀರು,ಉಪಹಾರ ವ್ಯವಸ್ಥೆ ಮಾಡಿತ್ತು ಆದರೆ ಭಕ್ತರ ತಂಡವು ಪವಸಾದ ವಿನಿಯೋಗ ಮಾಡಿ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು.