Sunday, April 28, 2024
Homeರಾಜ್ಯನಾನು ದೇಶದ್ರೋಹಿನೋ, ಪ್ರೇಮಿನೋ ಅನ್ನೋದನ್ನ ತಾಯಿ ತೀರ್ಮಾನ ಮಾಡುತ್ತಾಳೆ : ಪ್ರತಾಪ್ ಸಿಂಹ

ನಾನು ದೇಶದ್ರೋಹಿನೋ, ಪ್ರೇಮಿನೋ ಅನ್ನೋದನ್ನ ತಾಯಿ ತೀರ್ಮಾನ ಮಾಡುತ್ತಾಳೆ : ಪ್ರತಾಪ್ ಸಿಂಹ

ಮೈಸೂರು, ಡಿ.24- ನಾನು ಪ್ರತಾಪಸಿಂಹ ದೇಶದ್ರೋಹಿನೋ,? ದೇಶಪ್ರೇಮಿನೋ ? ಬೆಟ್ಟದಲ್ಲಿ ಕುಳಿತ ಚಾಮುಂಡಿ ತಾಯಿ, ಬ್ರಹ್ಮಗಿರಿಯಲ್ಲಿ ಕುಳಿತ ಕಾವೇರಮ್ಮ ತೀರ್ಮಾನ ಮಾಡುತ್ತಾಳೆ. ಕರ್ನಾಟಕದಲ್ಲಿ ನನ್ನ ಓದುಗರು ತೀರ್ಮಾನಿಸುತ್ತಾರೆ. ಕಳೆದ ಒಂಬತ್ತು ವರ್ಷದಿಂದ ನನ್ನ ಕೆಲಸ ನೋಡಿರುವ ಮೈಸೂರು, ಕೊಡಗು ಜನ ಉತ್ತರ ಕೊಡುತ್ತಾರೆ. 2024 ರ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತೀರ್ಪು ನೀಡುತ್ತಾರೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಬಳಿಕ ಮೈಸೂರುಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅದನ್ನು ಬಿಟ್ಟು ಬೇರೆ ಏನಾದರೂ ಕೇಳಿ ಎಂದಿದ್ದಾರೆ.

ಪ್ರತಾಪ ಸಿಂಹ ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎನ್ನುವುದು ಬೆಟ್ಟದ ಚಾಮುಂಡಿ ತಾಯಿ ಹಾಗೂ ಕೊಡಗಿನ ಕಾವೇರಿ ತಾಯಿಗೆ ಗೊತ್ತು. ನನ್ನ ಲೇಖನಗಳನ್ನು ಓದಿದ ಓದುಗರಿಗೆ ಗೊತ್ತು. ಇದಕ್ಕೆಲ್ಲಾ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಈ ವಿಚಾರದಲ್ಲಿ ಇಷ್ಟು ಮಾತ್ರವೇ ಹೇಳುತ್ತೇನೆ. ಆ ಬಗ್ಗೆ ಇನ್ನೇನೂ ಕೇಳಬೇಡಿ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದಕ್ಕೆ ಕೇಳಿದ ಪ್ರಶ್ನೆಗೆ, ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯವರು ಸರ್ಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್‍ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ದೇಶಕ್ಕೆ ಒಬ್ಬರೇ ಪ್ರಧಾನಿ ಇರುವುದು. ದೇಶದಲ್ಲಿ 29 ಜನ ಮುಖ್ಯಮಂತ್ರಿಗಳಿದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ಬಿಡಿ ಎಂದು ಕಿಡಿಕಾರಿದರು. ನಾನು 2000 ಕೊಟ್ಟೆ, ಕರೆಂಟ್ ಕೊಟ್ಟೆ ಅಂತೀರಿ ಬಿಲ್ ಇವರ ಮನೆಯಿಂದ ಕೊಟ್ರಾ? ನಾನ್ ಮಾಡಿದೆ ಮಾಡಿದೆ ಅಂತೀರಲ್ಲಾ ನಿಮ್ ಮನೆಯಿಂದ ದುಡ್ ತಂದ್ರಾ? ಅವರ ಮಾತಿಗೆ ಅರ್ಥವೇ ಇಲ್ಲ. ಅವರು ವಿವೇಚನಾರಹಿತವಾಗಿ ಮಾತನಾಡುತ್ತಾರೆ. ಪ್ರಧಾನಿ ಅವರು, ಏರ್ ಫೋರ್ಸ್ ಒಂದರಲ್ಲಿ ಅವರು ಓಡಾಡುತ್ತಾರೆ. ಸರ್ಕಾರದ ವಿಮಾನದಲ್ಲಿ ಅವರು ಓಡಾಡುತ್ತಾರೆ. ಪ್ರೈವೇಟ್ ಜೆಟ್ ಅಲ್ಲಿ ಚೇಲಾಗಳನ್ನ ಕೂರಿಸಿಕೊಂಡು ಓಡಾಡಲ್ಲ. ಅವರು ಸರ್ಕಾರದ ವಿಮಾನದಲ್ಲೇ ಓಡಾಡುವುದು.

ಗುಂಡಿಕ್ಕಿ ನಿವೃತ್ತ ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ಉಗ್ರರು

ಸಮವಸ್ತ್ರ ಸಂಹಿತೆ ತಂದಿದ್ದ ಉದ್ದೇಶ ಸಮಾನ ಮನಸ್ಥಿತಿಯಲ್ಲಿ ನಡೆಯಬೇಕು ಎನ್ನುವುದು ಬಡವ ಬಲ್ಲಿದ, ಮೇಲು ಕೀಳು, ಮುಸ್ಲಿಂ ಹಿಂದೂ ಬರಬಾರದು. ನಾವೆಲ್ಲ ಒಂದೇ ಎಂಬ ಭಾವ ಮೂಡಬೇಕು ಎಂಬ ಉದ್ದೇಶ. ಆದರೆ, ಅದನ್ನ ರಾಜಕಾರಣಕ್ಕೆ ಬಳಸುವುದು ಸರಿಯಲ್ಲ. ವಸ್ತ್ರ ಸಂಹಿತೆ ಎಲ್ಲರಲ್ಲೂ ಒಂದೇ ಎಂಬ ಭಾವ ಮೂಡಿಸುತ್ತದೆ ಎಂದು ಹಿಂಜಾಬ್ ನಿಷೇಧ ವಾಪಸ್ ಪಡೆಯುವುದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಚರ್ಚೆಗೆ ಬಗ್ಗೆ ಪ್ರತಿಕ್ರಿಯಿಸಿ, 2014ರಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತವಿತ್ತು. ಈ ವೇಳೆ ಅಲ್ಪ ಸಂಖ್ಯಾತರಿಗೆ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಯೂನಿವರ್ಸಿಟಿ ನಿರ್ಮಾಣ ಮಾಡಲು ಮುಂದಾಗಿದ್ದರು. ದೇವರಾಜ ಮಾರ್ಕೆಟ್ ವಿಚಾರ ಬಂದಾಗ ಸಿದ್ದರಾಮಯ್ಯ ಮಹರಾಜ ಏನ್ ಅವನ ದೊಡ್ಡು ಕೊಟ್ಟು ತಂದಿದ್ನಾ ಅಂದಿದ್ದರು. ಸಿದ್ದರಾಮಯ್ಯ ಅವರಿಗೆ ಅಭಿಮಾನ ಇರುವುದು ಟಿಪ್ಪುಗೆ ಹೊರೆತು, ರಾಜ ಮನೆತನಕ್ಕಲ್ಲ ಎಂಬುದು ಗೊತ್ತು ಎಂದು ಕಿಡಿಕಾರಿದರು.

ನಮಗೂ ಕೂಡ ಆ ಮನವರಿಕೆ ಬಂದಿದೆ. ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಪ್ರಸ್ತಾಪ ಮಾಡಲಾಗಿದೆ. ಕ್ಯಾಬಿನೇಟ್ ಅಲ್ಲಿ ಚರ್ಚಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ ಹೆಸರನ್ನ ಎಂದಿಗೂ ಬದಲಿಸಲು ಸಾಧ್ಯವಿಲ್ಲ ಎಂದರು.

ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಲೋಕಸಭೆಯ ಹಾಲ್ಗೆ ಜಿಗಿದು ಸ್ಮೋಕ್ ಬಾಂಬ್ ಸಿಡಿಸಿದ್ದರು. ಈ ಆರೋಪಿಗಳಿಗೆ ಸಂಸದ ಪ್ರತಾಪ್ ಸಂದರ್ಶಕರ ಪಾಸ್ ನೀಡಿದ್ದರು. ಇದು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಾಪ್ ಸಿಂಹ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಆದರೂ ಸಹ ಪ್ರತಾಪ್ ಸಿಂಹ ಇದುವರೆಗೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.

RELATED ARTICLES

Latest News