ಹುಬ್ಬಳ್ಳಿ,ಡಿ.25-ಮುಂದಿನ 2024 ಲೋಕಸಭೆ ಚುನಾವಣೆಯಲ್ಲಿ ನಾನು ಧಾರವಾಡ ಲೋಕಸಭೆ ಕ್ಷೇತ್ರದಿಂದಲ್ಲೇ ಸ್ಪರ್ದಿಸುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಗು ಗಣಿ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿನ ನನ್ನ ಜನರಿ ಹಿಂದೆ ಆಶೀರ್ವಾದ ಮಾಡಿದ್ದಾರೆ. ಮುಂದೆಯೂ ಆಶೀರ್ವಾದ ಮಾಡ್ತಾರೆ. ನಾನು ಈ ಬಗ್ಗೆ ಪದೇ ಪದೇ ಹೇಳಲ್ಲ ಎಂದರು.
ಧಾರವಾಡ ಕ್ಷೇತ್ರದಿಂದ ಲಿಂಗಾಯತರಿಗೆ ಕೊಡಬೇಕೆಂಬ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೋಶಿ ಅವರು ಇಲ್ಲಿನ ಸಂಸದನಾಗಿ ಜನಕಲ್ಯಾಣಕ್ಕೆ ದುಡಿದಿದ್ದೇನೆ ದೇಶಮಟ್ಟದಲ್ಲಿ ನಿಸ್ವಾರ್ಥ ಕಾಯಕ ಮಾಡುತ್ತಿದ್ದೇನೆ ಜನರ ನಂಬಿಕೆ ಉಳಿಸಿಕೊಂಡಿದ್ದಾನೆ ಎಂದರು.
ಬಿಜೆಪಿ ರಾಜ್ಯ ಪದಾ„ಕಾರಿಗಳ ವಿಚಾರದಲ್ಲಿ ಅಪಸ್ವರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರನ್ನು ನೇಮಕ ಮಾಡಿದ್ದಾರೆ ನನಗೆ ಮಾಹಿತಿ ಇಲ್ಲ. ರಾಜ್ಯಾದ್ಯಕ್ಷರು ಮತ್ತು ಇತರ ನಾಯಕರು ಸೇರಿ ಪಟ್ಟಿ ರೆಡಿ ಮಾಡಿದ್ದಾರೆ. ಎಲ್ಲ ಜಿಲ್ಲೆಗಳಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪದಾ„ಕಾರಿಗಳ ಆಯ್ಕೆಯಾಗಿದೆ. ಬೇರೆ ಬೇರೆ ಕಾರಣದಿಂದಾಗಿ ಧಾರವಾಡಕ್ಕೆ ಪ್ರಾತಿನಿಧ್ಯತೆ ಸಿಕ್ಕಿರಲಿಕ್ಕಿಲ್ಲ ಎಂದರು.
ಸಾಗರ ತೀರದಲ್ಲಿ ಈರುಳ್ಳಿಯಲ್ಲಿ ಮೂಡಿಬಂದ ಸಾಂತಾಕ್ಲಾಸ್
ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ರನ್ನ ಬೂಟ್ ಕ್ಕಿಂತ ಕಡೆ ಮಾಡಿದ್ದಾರೆಂದು ಲೇವಡಿ ಐ.ಎನ್.ಡಿ.ಯ ಮೈತ್ರಿಯಲ್ಲಿ ಗೊಂದಲವಿದೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಲು ಇನ್ನು ಒಪ್ಪಿಲ್ಲ. ರಾಹುಲ್ ಗಾಂ„ ಅವರೇ ಒಪ್ಪಿಲ್ಲ ಎಂದರು.ನಿತೀಶ್,ಲಾಲು,ಅಕಿಲೇಶ್ ಮತ್ತಿತರರು ವಿಬಿನ್ನ ಹೇಳಿಕೆ ನೀಡುತ್ತಿದ್ದರೆ ಇನ್ನು ಮುಂದೆಯೂ ಹೊಸ ನಾಟಕ ನೋಡಬಹುದು ಎಂದು ಟೀಕಿಸಿದರು.