Thursday, May 9, 2024
Homeರಾಷ್ಟ್ರೀಯಜಮ್ಮು-ಕಾಶ್ಮೀರದಲ್ಲಿ ಭಾರೀ ಚಳಿ, ಹೆಪ್ಪುಗಟ್ಟಿದ ದಾಲ್ ಸರೋವರ

ಜಮ್ಮು-ಕಾಶ್ಮೀರದಲ್ಲಿ ಭಾರೀ ಚಳಿ, ಹೆಪ್ಪುಗಟ್ಟಿದ ದಾಲ್ ಸರೋವರ

ಶ್ರೀನಗರ,ಡಿ.25-ಜಮ್ಮು ಕಾಶ್ಮೀರದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು ಮಂಜಿನಿಂದ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ ವಾಹನ ಸಂಚಾರವೂ ವಿರಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೆಯುತ್ತಿರುವ ಚಳಿಯಿಂದ ಶ್ರೀನಗರದ ಪ್ರಸಿದ್ಧ ದಾಲ್ ಸರೋವರ ಹೆಪ್ಪುಗಟ್ಟಿದೆ.ಮರಗಳು ಮಂಜಿನಿಂದ ಆವೃತವಾಗಿದ್ದು, ಜಗದ್ವಿಖ್ಯಾತ ಅಮರನಾಥ ಯಾತ್ರೆಯ ಆರಂಭ ಸ್ಥಾನ ಪಹಲ್ಗಾಂನಲ್ಲಿ ಅತಿ ಕನಿಷ್ಠ ಉಷ್ಣಾಂಶ ಮೈನಸ್ 3.9 ಡಿ.ಸೆ.ನಷ್ಟು ದಾಖಲಾಗಿದೆ. ಉಳಿದಂತೆ ಗುಲ್ಮಾರ್ಗ್‍ನಲ್ಲಿ – 3.5 ಡಿ.ಸೆ., ಕುಪ್ವಾರ – 2.7 ಡಿ.ಸೆ., ಶ್ರೀನಗರ – 2.1 ಡಿ.ಸೆ., ಖಾಸಿಗುಂಡ್ – 2.0 ಡಿ.ಸೆ.ನಷ್ಟು ಉಷ್ಣಾಂಶ ದಾಖಲಾಗಿದೆ.

ಇನ್ನು ರಾಜಸ್ಥಾನದ ವಾಯವ್ಯ ಹಾಗೂ ಪಶ್ಚಿಮ ಭಾಗದಲ್ಲಿ ಭಾರೀ ಚಳಿ ಕಾಣಿಸಿಕೊಂಡಿದೆ.ಹಿಮಾಚಲ ಪ್ರದೇಶ ,ಜಾಖಂಡ್ ಹಲವು ಭಾಗಗಳಲ್ಲಿ ಮಂಜು ಸುರಿಯುತ್ತಿದೆ.ಇನ್ನು ದಕ್ಷಿಣದ ಊಟಿಯಲ್ಲಿ ಶೂನ್ಯಕ್ಕೆ ತಾಪಮಾನ ಇಳಿದಿದೆ.ಸದಾ ಹಸಿರಿನಿಂದ ಕಂಗೊಳಿಸುವ ತಮಿಳುನಾಡಿನ ಪ್ರಸಿದ್ಧ ಗಿರಿಧಾಮ ಉದಕಮಂಡಲ (ಊಟಿ)ಯಲ್ಲಿ ಮರಗಿಡ ಕಟ್ಟಡಗಳು ಬಿಳಿಯ ಹೊದಿಕೆ ಹೊದ್ದುಕೊಂಡಿತ್ತು.

ಸಾಗರ ತೀರದಲ್ಲಿ ಈರುಳ್ಳಿಯಲ್ಲಿ ಮೂಡಿಬಂದ ಸಾಂತಾಕ್ಲಾಸ್

ಭಾನುವಾರ ಉಷ್ಣಾಂಶ 1 ಡಿಗ್ರಿ ಸೆಲ್ಷಿಯಸ್‍ಗೆ ಇಳಿದಿದ್ದರೆ, ಅಲ್ಲಿದ ಕೇವಲ 3 ಕಿ.ಮೀ ದೂರದ ತಲಕುಂಡ ಪ್ರದೇಶದಲ್ಲಿ ಉಷ್ಣಾಂಶ ಶೂನ್ಯಕ್ಕೆ ತಲುಪಿತ್ತು. ಹೀಗಾಗಿ ಇಡೀ ಪ್ರದೇಶ ತೆಳುವಾದ ಹಿಮದ ಹೊದಿಕೆ ಹೊದ್ದು ಪ್ರವಾಸಿಗರನ್ನು ಭಾರೀ ಪ್ರಮಾಣದಲ್ಲಿ ಆಕರ್ಷಿಸಿತು.

ಈ ನಡುವೆ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಕುಸಿದ ಕಾರಣ ಕೆಲ ಪ್ರವಾಸಿಗರು ಬೆಳಗ್ಗೆ 8.30ರವರೆಗೂ ಹೋಟೆಲ್‍ನಿಂದ ಹೊರಗೆ ಬರಲಾಗದೇ ಪರದಾಡುವಂತೆಯೂ ಆಯಿತು.ಪ್ರತಿವರ್ಷ ಅಕ್ಟೋಬರ್‍ನಿಂದ -ಫೆಬ್ರವರಿ ಅವಧಿಯಲ್ಲಿ ನೀಲಗಿರಿ ತಪ್ಪಲಿನಲ್ಲಿ ಈ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಯುವುದು ಸಾಮಾನ್ಯ.

RELATED ARTICLES

Latest News