Friday, November 22, 2024
Homeರಾಜ್ಯಕಾಂಗ್ರೆಸ್‍ಗೆ ತೀವ್ರ ಮುಜುಗರವನ್ನುಂಟುಮಾಡಿದ ಸಚಿವ ಶಿವಾನಂದ ಪಾಟೀಲ್ ಹೇಳಿಕೆ

ಕಾಂಗ್ರೆಸ್‍ಗೆ ತೀವ್ರ ಮುಜುಗರವನ್ನುಂಟುಮಾಡಿದ ಸಚಿವ ಶಿವಾನಂದ ಪಾಟೀಲ್ ಹೇಳಿಕೆ

ಬೆಂಗಳೂರು,ಡಿ.25- ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ಕಾಂಗ್ರೆಸ್‍ಗೆ ತೀವ್ರ ಮುಜುಗರ ಉಂಟು ಮಾಡಿದೆ. ಪ್ರತಿ ವರ್ಷ ಬರಗಾಲ ಬರಲಿ, ಸರ್ಕಾರ ಸಾಲಮನ್ನಾ ಮಾಡಲಿ ಎಂಬುದು ರೈತರ ಬಯಕೆಯಾಗಿದೆ ಎಂದು ಹೇಳಿರುವುದು ವಿರೋಧ ಪಕ್ಷದವರಷ್ಟೇ ಅಲ್ಲ ರೈತರ ಕೆಂಗಣ್ಣಿಗೂ ಗುರಿಯಾಗಿದೆ.

ಸರ್ಕಾರದ ಸೌಲಭ್ಯಗಳ ಬಗ್ಗೆ ಮಾತನಾಡುವ ಬದಲು ಉದ್ದಟತನದಿಂದ ಮಾತನಾಡುವ ಮೂಲಕ ಶಿವಾನಂದ ಪಾಟೀಲ್ ದುಡಿಯುವ ವರ್ಗವನ್ನು ಅಪಮಾನಿಸಿದ್ದಾರೆ ಎಂಬ ಆಕ್ರೋಶ ಕೇಳಿಬಂದಿದೆ. ಸ್ವಪಕ್ಷೀಯರಲ್ಲಿ ಸಚಿವರ ಹೇಳಿಕೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ನಾನೇ ಹೈಕಮಾಂಡ್. ಚುನಾವಣೆ ಗೆಲ್ಲಲು ನನಗೆ ಯಾರ ನೆರವು ಬೇಕಿಲ್ಲ ಎಂದು ವಿಧಾನಸಭೆ ಚುನಾವಣೆಯ ಮೊದಲೇ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು.

ಪ್ರತಿ ಬಾರಿಯೂ ಶಿವಾನಂದ ಪಾಟೀಲ್ ತಮ್ಮದೇ ಆದ ಶೈಲಿಯಲ್ಲಿ ಹೇಳಿಕೆಗಳನ್ನು ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಕಂಡುಬರುತ್ತಲೇ ಇದೆ. ಈ ಬಾರಿ ರೈತ ಸಮುದಾಯವನ್ನು ಕೆಣಕುವಂತಹ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮ ಆಪ್ತನಾಗಿರುವ ಶಿವಾನಂದ ಪಾಟೀಲ್, ಪಕ್ಷದ ಸಂಘಟನೆ, ಸಭೆಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆ.

ಸಾಲುಸಾಲು ರಜೆ ಹಿನ್ನೆಲೆಯಲ್ಲಿ ತುಂಬಿತುಳುಕುತ್ತಿವೆ ರಾಜ್ಯದ ಪ್ರವಾಸಿ ತಾಣಗಳು

ಈ ಮೊದಲು ಸಚಿವ ಸ್ಥಾನ ಸಿಗದೆ ಇದ್ದಾಗ ಭಿನ್ನಮತೀಯ ಹೇಳಿಕೆಗಳನ್ನು ನೀಡುತ್ತಲೇ ಮುಜುಗರ ಉಂಟು ಮಾಡಿದರು. ಸಚಿವ ಸ್ಥಾನ ಸಿಕ್ಕ ಬಳಿಕವೂ ಇಲಾಖೆಯ ಕೆಲಸ ಮಾಡಿದ್ದಕ್ಕಿಂತ ಹೆಚ್ಚಾಗಿ ಮುಜುಗರದ ಸನ್ನಿವೇಶ ಸೃಷ್ಟಿಸುವುದರಲ್ಲೇ ಶಿವಾನಂದ ಪಾಟೀಲ್ ಹೆಚ್ಚು ಸುದ್ದಿಯಲ್ಲಿದ್ದಾರೆ.

ಕಾಂಗ್ರೆಸ್‍ನ ಯಾವ ನಾಯಕರ ಮಾತಿಗೂ ಕಿಮ್ಮತ್ತಿನ ಬೆಲೆ ನೀಡದೆ ತಾವು ನಡೆದಿದ್ದೇ ದಾರಿ ಎಂಬ ಧೋರಣೆಯನ್ನು ರಾಜಕೀಯ ಮಾಡಿಕೊಂಡು ಬಂದಿರುವ ಪಾಟೀಲ್‍ರನ್ನು ಸಂಪುಟದಿಂದ ಕೈಬಿಟ್ಟು ಸಕ್ರಿಯವಾಗಿ ಕೆಲಸ ಮಾಡುವವರನ್ನು ಸೇರಿಸಿಕೊಳ್ಳಬೇಕೆಂಬ ಬೇಡಿಕೆ ಹಲವು ದಿನಗಳಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಅವರನ್ನು ಕೈಬಿಡುವುದರಿಂದ ಲಿಂಗಾಯಿತ ಸಮುದಾಯದ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಾಗಿದೆ.

RELATED ARTICLES

Latest News