Monday, October 7, 2024
Homeರಾಜ್ಯಸಾಲುಸಾಲು ರಜೆ ಹಿನ್ನೆಲೆಯಲ್ಲಿ ತುಂಬಿತುಳುಕುತ್ತಿವೆ ರಾಜ್ಯದ ಪ್ರವಾಸಿ ತಾಣಗಳು

ಸಾಲುಸಾಲು ರಜೆ ಹಿನ್ನೆಲೆಯಲ್ಲಿ ತುಂಬಿತುಳುಕುತ್ತಿವೆ ರಾಜ್ಯದ ಪ್ರವಾಸಿ ತಾಣಗಳು

ಬೆಂಗಳೂರು,ಡಿ.25- ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆಯ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿವೆ. ಮೂರು ದಿನಗಳ ಸರಣಿ ರಜೆ ಪ್ರವಾಸಕ್ಕೆ ಪ್ರೇರೇಪಣೆ ನೀಡಿದರೆ ಸಂಭವನೀಯ ಕೋವಿಡ್ ಸೋಂಕಿನ ಆತಂಕವು ಮತ್ತೊಂದು ಕಾರಣವಾಗಿದೆ.

ಇತ್ತೀಚೆಗೆ ಜೆಎನ್1 ಉಪತಳಿ ಆಧಾರಿತ ಕೋವಿಡ್ ಸೋಂಕು ನಿಧನವಾಗಿ ಏರಿಕೆ ಕಾಣುತ್ತಿದೆ. ಸದ್ಯಕ್ಕೆ ರಾಜ್ಯ ಸರ್ಕಾರ ಯಾವುದೇ ನಿರ್ಬಂಧಗಳನ್ನು ವಿಸಿಲ್ಲವಾದರೂ ಪರಿಸ್ಥಿತಿ ಹೀಗೆ ಮುಂದುವರೆದರೆ ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಪ್ರವಾಸಕ್ಕೆ ಕಡಿವಾಣ ಬೀಳಲಿದೆ ಎಂಬ ಆತಂಕ ಮನೆ ಮಾಡಿದೆ. ಹೀಗಾಗಿ ಕ್ರಿಸ್‍ಮಸ್ ಹಾಗೂ ರಜೆಯ ಅವಕಾಶಗಳನ್ನು ಬಳಸಿಕೊಂಡು ಪ್ರವಾಸಿಗರು ಪ್ರಮುಖ ತಾಣಗಳಿಗೆ ದಾಂಗುಡಿ ಇಡುತ್ತಿದ್ದಾರೆ.

ಮೈಸೂರು, ಚಿಕ್ಕಮಗಳೂರು, ಕೊಡಗು, ಕರಾವಳಿಯಂತಹ ಹಸಿರು ತಾಣಗಳು ಮತ್ತು ಆಕರ್ಷಣೀಯ ಪ್ರವಾಸಿ ಕೇಂದ್ರಗಳು ಹೆಚ್ಚು ಜನ ಆಕರ್ಷಣೀಯ ಬಿಂದುಗಳಾಗಿವೆ. ಮೈಸೂರು ಮೃಗಾಲಯಕ್ಕೆ ನಿನ್ನೆ ಒಂದೇ ದಿನ 40 ಸಾವಿರ ಪ್ರವಾಸಿಗರು ಭೇಟಿ ನೀಡುವ ಮೂಲಕ ದಾಖಲೆ ನಿರ್ಮಾಣವಾಗಿದೆ.

ಸಾಗರ ತೀರದಲ್ಲಿ ಈರುಳ್ಳಿಯಲ್ಲಿ ಮೂಡಿಬಂದ ಸಾಂತಾಕ್ಲಾಸ್

ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆ ಹೋಟೆಲ್, ರೆಸ್ಟೋರೆಂಟ್‍ಗಳು ತುಂಬಿ ತುಳುಕುತ್ತಿವೆ. ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ಏರಿಕೆ ಮಾಡಿದರೂ ಕೂಡ ತಲೆ ಕೆಡಿಸಿಕೊಳ್ಳದೆ ಪ್ರವಾಸಿಗರು ಗುಳೇ ಹೋದಂತೆ ಸಾಲು ಸಾಲು ಪ್ರಯಾಣ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದ ಬಿಜಾಪುರ, ಉತ್ತರಕನ್ನಡ, ಬೆಳಗಾವಿ, ಕಲಬುರ್ಗಿ, ಚಿತ್ರದುರ್ಗದಂತಹ ಐತಿಹಾಸಿಕ ಪ್ರವಾಸಿ ಕೇಂದ್ರಗಳಿಗೂ ಕೂಡ ಇದರ ಭೇಟಿ ನೀಡುವ ಪ್ರಮಾಣ ಹೆಚ್ಚಾಗಿದೆ.

ಈ ಹಿಂದೆ 2019ರಿಂದ ಸುಮಾರು ಎರಡುಮೂರು ವರ್ಷಗಳ ಕಾಲ ಕೋವಿಡ್‍ನಿಂದಾಗಿ ನಿರ್ಬಂಧಗಳು ಜಾರಿಯಾಗಿ ಪ್ರವಾಸೋದ್ಯಮ ಪೆಟ್ಟು ತಿಂದಿತ್ತು. 2022ರಲ್ಲಿ ನಿರ್ಬಂಧಗಳು ಸಡಿಲವಾಗಿದ್ದವು. ಕೋವಿಡ್ ಯುಗಾಂತ್ಯವಾಯಿತು ನಿರ್ಬಂಧಗಳು ಇರುವುದಿಲ್ಲ ಎಂಬ ನಿರೀಕ್ಷೆ ಇದ್ದಾಗಲೇ ಮತ್ತೊಮ್ಮೆ ಕೊರೋನ ಸೋಂಕು ಒಕ್ಕರಿಸಿದೆ.

ರಾಜ್ಯ ಸರ್ಕಾರ ಸದ್ಯಕ್ಕೆ ಯಾವುದೇ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳುತ್ತಿದೆ. ಆದರೆ ಪರಿಸ್ಥಿತಿ ಹೀಗೆ ಮುಂದುವರೆದು ವೈದ್ಯಕೀಯ ವ್ಯವಸ್ಥೆ ಮೇಲೆ ಒತ್ತಡ ಹೆಚ್ಚಾದರೆ ಸೋಂಕು ನಿಯಂತ್ರಣಕ್ಕೆ ನಿರ್ಬಂಧ ವಿಸುವುದು ಅನಿವಾರ್ಯ ಎಂದು ಹೇಳಲಾಗುತ್ತಿದೆ. ಸಾಧ್ಯ-ಸಾಧ್ಯತೆಗಳ ಹಿನ್ನಲೆಯಲ್ಲಿ ಜನ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಹಾತೊರೆದಂತೆ ಕಂಡುಬರುತ್ತಿದೆ.

RELATED ARTICLES

Latest News