Friday, November 22, 2024
Homeಜಿಲ್ಲಾ ಸುದ್ದಿಗಳು | District Newsಒಟಿಪಿ ಬಳಸಿಕೊಂಡು ಹಣ ವಂಚನೆ : ಅಂಚೆ ಇಲಾಖೆ ಉದ್ಯೋಗಿ ಅರೆಸ್ಟ್

ಒಟಿಪಿ ಬಳಸಿಕೊಂಡು ಹಣ ವಂಚನೆ : ಅಂಚೆ ಇಲಾಖೆ ಉದ್ಯೋಗಿ ಅರೆಸ್ಟ್

ತುಮಕೂರು,ಡಿ.25- ಆನ್ಲೈನ್ ಒಟಿಪಿ ಬಳಸಿಕೊಂಡು ಜನರ 5.28 ಲಕ್ಷ ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಪಾವಗಡದ ನ್ಯಾಯದಗುಂಟೆ ವಿಭಾಗದ ಅಂಚೆ ಇಲಾಖೆಯ ಉದ್ಯೋಗಿಯನ್ನು ತುಮಕೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆಂಧ್ರದ ಕಡಪ ಜಿಲ್ಲೆಯ ರಾಯ ಚೋಟಿ ತಾಲ್ಲೂಕಿನ ಸಂಬೆಪಲ್ಲಿ ಮೂಲದ ಮುಂಗಾರ ವಂಶಿಕೃಷ್ಣ (28) ಬಂತ ಆರೋಪಿ.

ಈತ ಪಾವಗಡ ತಾಲ್ಲೂಕಿನ ನ್ಯಾಯದಗುಂಟೆ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 2019ರ ಜುಲೈ 11ರಿಂದ 2019 ಆಗಸ್ಟ್ 26ರವರೆಗೆ ಅಂಚೆ ಕಚೇರಿಯಿಂದ ತನಗೆ ನೀಡಿದ್ದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಐಪಿಪಿಬಿ (ಇಂಡಿಯನ್ ಪೊಸ್ಟಲ್ ಪೇಮೆಂಟ್ ಬ್ಯಾಂಕ್ ) ಖಾತೆಗಳ ಮೂಲಕ ಗ್ರಾಹಕರ ಖಾತೆಗಳಿಗೆ ವರ್ಗಾಯಿಸಿ, ಅಲ್ಲಿಂದ ಒಟಿಪಿಯ ಮೂಲಕ 5 ಲಕ್ಷಕ್ಕಿಂತ ಹೆಚ್ಚು ಹಣ ತನ್ನ ಖಾತೆಗೆ ಹಣ ವರ್ಗಾ ಯಿಸಿಕೊಂಡಿದ್ದರೆನ್ನಲಾಗಿದೆ.

ರಾಮಮಂದಿರ ಪ್ರತಿಷ್ಠಾಪನೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಆಹ್ವಾನ

ಈ ಸಂಬಂಧ 5.28 ಲಕ್ಷ ರೂ. ವಂಚಿಸಿರುವುದಾಗಿ 2021ರ ಜುಲೈನಲ್ಲಿ ಶಿರಾ ಉಪ ವಿಭಾಗದ ಅಂಚೆ ನಿರೀಕ್ಷಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸೈಬರ್ ವಿಭಾಗದ ಜಿಲ್ಲಾ ಪೊಲೀಸ್ ವರಿಷ್ಟಾಕಾರಿ ಕೆ.ವಿ. ಅಶೋಕ್ ವಿ. ಮರಿಯಪ್ಪ ಹಾಗೂ ತುಮಕೂರು ಉಪ ವಿಭಾಗದ ಡಿವೈಎಸ್ಪಿ ಕೆ.ಆರ್. ಚಂದ್ರಶೇಖರ್ ಮಾರ್ಗದರ್ಶನ ದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.

RELATED ARTICLES

Latest News