Wednesday, February 28, 2024
Homeಮನರಂಜನೆರಾಮಮಂದಿರ ಪ್ರತಿಷ್ಠಾಪನೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಆಹ್ವಾನ

ರಾಮಮಂದಿರ ಪ್ರತಿಷ್ಠಾಪನೆಗೆ ರಾಕಿಂಗ್ ಸ್ಟಾರ್ ಯಶ್‍ಗೆ ಆಹ್ವಾನ

ಬೆಂಗಳೂರು, ಡಿ. 25- ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮನ ವಿಗ್ರಹ ಪ್ರಾಣ ಪ್ರತಿಷ್ಠೆಯು ಅದ್ಧೂರಿಯಾಗಿ ನಡೆಯಲಿದ್ದು, ಸ್ಯಾಂಡಲ್‍ವುಡ್ ತಾರೆ ರಾಕಿಂಗ್ ಸ್ಟಾರ್ ಯಶ್‍ರನ್ನು ಆಮಂತ್ರಿಸಲಾಗಿದೆ.ಈ ಮಹೋನ್ನತ ಧಾರ್ಮಿಕ ಕಾರ್ಯಕ್ರಮಕ್ಕೆ ಈಗಾಗಲೇ ವಿವಿಧ ರಾಜ್ಯದ ನಾನಾ ರಾಜಕೀಯ ಮುಖಂಡರು, ಕಲಾವಿದರಿಗೂ ಆಮಂತ್ರಣ ಪತ್ರಿಕೆ ಕಳುಹಿಸಲಾಗಿದೆ.

ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಸೂಪರ್ ಸ್ಟಾರ್‍ಗಳಾದ ಅಮಿತಾಭ್‍ಬಚ್ಚನ್, ರಜನಿಕಾಂತ್, ಬಾಲಿವುಡ್‍ನ ರಣಬೀರ್ ಕಪೂರ್, ಅಲಿಯಾಭಟ್, ಅಕ್ಷಯ್ ಕುಮಾರ್, ಸನ್ನಿಡಿಯೋಲ್, ಅಜಯ್ ದೇವಗನ್, ಆಯುಷ್ಮಾನ್ ಖುರಾನ, ಟೈಗರ್ ಶ್ರಾಫ್, ಕಂಗನಾ ರಣಾವತ್‍ಗೂ ಆಮಂತ್ರಣ ನೀಡಲಾಗಿದೆ.

ಇತ್ತೀಚೆಗೆ ಸಾಕಷ್ಟು ಸದ್ದು ಮಾಡಿದ್ದ ಆದಿಪುರುಷ್ ಚಿತ್ರದಲ್ಲಿ ರಾಮನ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದ ಟಾಲಿವುಡ್‍ನ ತಾರೆ ಪ್ರಭಾಸ್‍ಗೂ ರಾಮ ವಿಗ್ರಹಣ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಬುಲಾವ್ ನೀಡಲಾಗಿದೆ.

ಯತ್ನಾಳ್ ಮಾತಿಗೆ ಯಾರೂ ಬೆಲೆಕೊಡಲ್ಲ : ಸಚಿವ ಮುರುಗೇಶ್ ನಿರಾಣಿ

ಕಾಂತಾರ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನ ಘನತೆಯನ್ನು ಹೆಚ್ಚಿಸಿರುವ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ , ಕೆಜಿಎಫ್ ಸಿನಿಮಾ ಮೂಲಕ ವಲ್ರ್ಡ್ ವೈಡ್ ನಟರಾಗಿರುವ ರಾಕಿಂಗ್ ಸ್ಟಾರ್ ಯಶ್‍ಗೂ ಆಮಂತ್ರಣ ನೀಡಲಾಗಿದೆ. ಮಹಾ ಕಲಾವಿದರ ಸಂಗಮದಿಂದ ಅಂದಿನ ಕಾರ್ಯಕ್ರಮ ಮತ್ತಷ್ಟು ವರ್ಣರಂಜಿತವಾಗಲಿದೆ.

RELATED ARTICLES

Latest News