Sunday, January 19, 2025
Homeಬೆಂಗಳೂರುಬೆಂಗಳೂರು : ಮಹಡಿಯಿಂದ ಬಿದ್ದು ಜಿಮ್ ಟ್ರೈನರ್ ಸಾವು

ಬೆಂಗಳೂರು : ಮಹಡಿಯಿಂದ ಬಿದ್ದು ಜಿಮ್ ಟ್ರೈನರ್ ಸಾವು

ಬೆಂಗಳೂರು,ಡಿ.25- ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಬಿದ್ದು ಜಿಮ್ ತರಬೇತುದಾರ ಸಾವನ್ನಪ್ಪಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಹರಳೂರು -ಸರ್ಜಾಪುರ ರಸ್ತೆಯಲ್ಲಿನ ಅಪಾರ್ಟ್ಮೆಂಟ್ನಲ್ಲಿ ಗಣೇಶಪಾಂಡು ಅವರು ವಾಸವಾಗಿದ್ದರು.

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಅವರು ಅಷ್ಟಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ರಾತ್ರಿ 11.45ರ ಸುಮಾರಿನಲ್ಲಿ ಗಣೇಶಪಾಂಡು ಅವರು 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ. ಇವರ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ರೈತರಬಗ್ಗೆ ಕೀಳಾಗಿ ಮಾತಾಡಿದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಕೆರಳಿದ ಕಮಲಪಡೆ

ಸುದ್ದಿ ತಿಳಿದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News