Wednesday, May 1, 2024
Homeರಾಜಕೀಯರೈತರಬಗ್ಗೆ ಕೀಳಾಗಿ ಮಾತಾಡಿದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಕೆರಳಿದ ಕಮಲಪಡೆ

ರೈತರಬಗ್ಗೆ ಕೀಳಾಗಿ ಮಾತಾಡಿದ ಸಚಿವ ಶಿವಾನಂದ ಪಾಟೀಲ್ ವಿರುದ್ಧ ಕೆರಳಿದ ಕಮಲಪಡೆ

ಚಿಕ್ಕೋಡಿ,ಡಿ.25- ಪದೇ ಪದೇ ಬರಗಾಲ ಬರಲಿ ಎಂಬುದೇ ರೈತರ ಆಸೆನಾ? ಕೃಷ್ಣಾ ನದಿ ನೀರು ಪುಕ್ಸಟ್ಟೆ ಇದೆ, ಕರೆಂಟ್ ಕೂಡ ಪುಕ್ಸಟ್ಟೆ ಇದೆ. ಬಹಳಷ್ಟು ಮುಖ್ಯಮಂತ್ರಿಗಳು ಬಿತ್ತನೆ ಬೀಜ ಕೊಟ್ಟರು, ಗೊಬ್ಬರನೂ ಕೊಟ್ಟರು. ಬರಗಾಲ ಬಂದರೇ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಉಡಾಫೆಯ ಮಾತನ್ನಾಡಿದ್ದಾರೆ.

ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ತೀವ್ರವಾಗಿ ವಿರೋಸಿದ್ದು, ಪ್ರತಿಪಕ್ಷ ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಳಕಳಿ ಇದ್ದರೆ ಮೊದಲು ಅವರನ್ನು ಸಂಪುಟದಿಂದ ವಜಾಗೊಳಿಸಲಿ ಎಂದು ಒತ್ತಾಯಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಸಹಕಾರಿ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ್ದ ಶಿವಾನಂದ ಪಾಟೀಲ್, ಹಿಂದಿನ ಸರ್ಕಾರಗಳು ಸಾಲಮನ್ನಾ ಮಾಡಿವೆ. ಆದರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ರೈತರ ಸಾಲಮನ್ನಾ ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.

ಬರಗಾಲ ಬರಲೆಂದು ರೈತರಿಗೆ ಅದೊಂದೇ ಆಸೆ ಇರುತ್ತೆ. ಬರಗಾಲ ಬಂದರೆ ರೈತರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹಿಂದಿನ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಆದರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆ ಬೆಳೆಯಬೇಕು ಎಂದಿದ್ದಾರೆ.

ಕುಡಿದು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಎಂದು ದೂರು ಕೊಟ್ಟರೇ ಪರಿಹಾರ ಸಿಗುತ್ತದೆ ಎಂಬ ದುರಾಸೆ ಸಂಬಂಕರದ್ದು. ರೈತರು ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವು 2015ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಪರಿಹಾರ ಸಿಗಬಹುದು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಮುಂದಿನ ಕಬ್ಬು ಕಟಾವು ಹಂಗಾಮಿಗೆ ಸರ್ಕಾರದ ವತಿಯಿಂದ ತೂಕದ ಮಷಿನ್ ಅಳವಡಿಕೆ ಮಾಡಲಾಗುವುದು. ನಿನ್ನೆ ಸರ್ಕಾರದಿಂದ ಒಂದು ಆದೇಶ ಮಾಡಲಾಗಿದೆ. ತಾಲೂಕಿನ ಎಪಿಎಂಸಿ ತೂಕದ ಮಷಿನ್ ಮುಖಾಂತರ ತೂಕವನ್ನು ಮಾಡಿಕೊಂಡು ಕಾರ್ಖಾನೆಗಳಿಗೆ ರೈತರು ಕಬ್ಬು ಸರಬರಾಜು ಮಾಡಬೇಕು ಎಂದಿದ್ದಾರೆ.

ಸಕ್ಕರೆ ಕಾರ್ಖಾನೆ ಮೋಸ ಮಾಡಿದರೆ ಅವರ ಲೈಸೆನ್ಸ್ ರದ್ಧತಿ ಮಾಡಲಾಗುವುದು. ಮುಂದಿನ ವರ್ಷ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಡಿಜಿಟಲ್ ತೂಕದ ಮಷಿನ್ ಅಳವಡಿಕೆ ಮಾಡಲಾಗುವುದು, ಕಳೆದ ಬಾರಿ ಸಕ್ಕರೆ ಕಾರ್ಖಾನೆಗಳು 19 ಸಾವಿರ ಕೋಟಿ ರೂಪಾಯಿ ಬಾಕಿ ಹಣ ಉಳಿಸಿಕೊಂಡಿದ್ದರು. ನಾನು ಸಚಿವನಾದ ಬಳಿಕ 20 ಸಾವಿರ ಕೋಟಿ ರೂಪಾಯಿ ಕೊಡಿಸಲಾಗಿದೆ. ಹೆಚ್ಚು ಲಾಭದಲ್ಲಿರುವ ಕಂಪನಿಗಳಿಂದ 50 ರಿಂದ 100 ರೂ ವರೆಗೆ ಹೆಚ್ಚುವರಿ ಹಣವನ್ನು ಕೊಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಖಂಡನೆ: ಸಚಿವ ಶಿವಾನಂದ ಪಾಟೀಲ್ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಸಿ.ಟಿ.ರವಿ, ಅಶ್ವಥ್ನಾರಾಯಣ ಸೇರಿದಂತೆ ಅನೇಕರು ತೀವ್ರವಾಗಿ ಖಂಡಿಸಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ 196 ತಾಲ್ಲೂಕುಗಳು ಬರಕ್ಕೆ ತುತ್ತಾಗಿದೆ ರೈತರು ಸಂಕಷ್ಟದಲ್ಲಿ ಇದ್ದಾರೆ. ಒಂದು ಕಡೆ ಸಚಿವರು ಮುಖ್ಯಮಂತ್ರಿಗಳು ಐಷಾರಾಮಿ ವಿಮಾನದಲ್ಲಿ ಮಜಾ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸಚಿವರು ದಿನಕ್ಕೊಂದು ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಇದೇ ಸಚಿವರು ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅಂದೇ ಇವರ ವಿರುದ್ಧ ಕ್ರಮ ಕೈಗೊಂಡಿದ್ದರೆ ಈ ರೀತಿಯ ಹೇಳಿಕೆಗಳು ಬರುತ್ತಿರಲಿಲ್ಲ. ಕೂಡಲೇ ಸಚಿವರು ರೈತರಲ್ಲಿ ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ವಿಧಾನಪರಿಷತ್‍ ವಿಪಕ್ಷ ನಾಯಕ-ಉಪನಾಯಕರನ್ನು ನೇಮಿಸಿದ ಬಿಜೆಪಿ, ಯತ್ನಾಳ್‌ಗೆ ಮತ್ತೆ ಹಿನ್ನಡೆ

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ. ಸಚಿವ ಶಿವಾನಂದ ಪಾಟೀಲ್ ಹಿಂದೆಯೂ ಸಹ ರೈತರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮೊದಲು ಒಂದು ಲಕ್ಷ ಪರಿಹಾರ ಇತ್ತು, ಈಗ 5 ಲಕ್ಷ ರೂ. ಕೊಡುತ್ತಾರೆ. ಅದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತ ವಿರೋ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ.ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂತ್ರಿಮಂಡಲದಲ್ಲಿ ಅವರು ಮುಂದುವರಿಯಬಾರದು. ಪ್ರತಿ ಬಾರಿಯೂ ಈ ರೀತಿಯ ಯಡವಟ್ಟು ಮಾಡಿಕೊಂಡಿಕೊಳ್ಳುತ್ತಿದ್ದಾರೆ. ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಇವರ ಮನೆಯ ಹಣ, ರೈತರಿಗೆ ಧಾನ-ಧರ್ಮ ಮಾಡುವ ರೀತಿ ದುರಹಂಕಾರದ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೇ ಈ ರೀತಿಯ ಹಗುರವಾದ ಹೇಳಿಕೆ ಕೊಟ್ಟಿದ್ದರು. ಹಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಅನ್ನದಾತರು ಎಲ್ಲರಿಗೂ ಅನ್ನ ಕೊಡುವವರು. ರೈತರಿಗೆ ಸಮಾಜದಲ್ಲಿ ಮೊದಲ ಗೌರವ ಸಲ್ಲುವುದು ಎಂದು ಹೇಳಿದ್ದಾರೆ.

ಶಾಸಕ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಶಿವಾನಂದ್ ಪಾಟೀಲ್ ಸ್ವತಃ ಒಬ್ಬ ರೈತರಾಗಿ ಇಂತ ಹೇಳಿಕೆ ದುರದೃಷ್ಟಕರ. ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು. ಇದು ರೈತ ವಿರೋ ಸರ್ಕಾರ. ಸಾಲಮನ್ನಾಕ್ಕಾಗಿ ರೈತರು ಬರಗಾಲಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ಸೂಕ್ತವಲ್ಲ. ಅವರು ಮಾನಸಿಕರಾಗಿ ಅಸ್ವತ್ಥರಾಗಿದ್ದಾರೆ. ಕರ್ನಾಟಕಕ್ಕೆ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಸ್ಥಾನದಿಂದ ವಜಾ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಮಾತನಾಡಿ, ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ. ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ. ಇದು ಸರ್ಕಾರದ ಅಹಂಕಾರದ ಒಂದು ಭಾವನೆ. ಸಿಎಂಗೆ ಮನವಿ ಮಾಡುತ್ತೇನೆ, ನೀವೇ ನಿಮ್ಮ ಸಚಿವರ ಮದ ಇಳಿಸಿ. ಇಲ್ಲವಾದರೆ ಜನ ನಿಮ್ಮನ್ನೂ ಸೇರಿಸಿ ಎಲ್ಲಾ ಸಚಿವರ ಮದ ಇಳಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News