ಹೊಸೂರು,ಡಿ.26- ಚುಕ್ಕೆ ಜಿಂಕೆಗಳನ್ನು ಬೇಟೆಯಾಡಿ ಮಾಂಸ ಮಾರಾಟ ಮಾಡುತ್ತಿದ್ದ ಏಳು ಮಂದಿಗೆ ತಲಾ 50 ಸಾವಿರ ದಂಡ ವಿಧಿಸಲಾಗಿದೆ ಎಂದು ಡೆಂಕಣಿಕೋಟೆ ಅರಣ್ಯ ಇಲಾಖೆ ತಿಳಿಸಿದೆ. ಆರೋಪಿಗಳನ್ನು ಚೆಲ್ಲಪ್ಪನ್ (65), ರಾಮರಾಜ್ (31), ರಾಜೀವ್ (31), ನಾಗರಾಜ್ (28), ಶಿವರಾಜಕುಮಾರ್ (31), ಮರಿಯಪ್ಪನ್ (65) ಮತ್ತು 18 ವರ್ಷದ ಬಾಲಕ ಎಂದು ಗುರುತಿಸಲಾಗಿದೆ.
ಹೊಸೂರು ಸಮೀಪದ ಜುಜುವಾಡಿ ಗ್ರಾಮದ ಸಾರ್ವಜನಿಕ ಕೆರೆಯಲ್ಲಿ ಚುಕ್ಕೆ ಜಿಂಕೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿದೆ. ಇದಾದ ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ತೆರಳಿ ಚುಕ್ಕೆ ಜಿಂಕೆಯ ಮೃತದೇಹವನ್ನು ಹೊರತೆಗೆದಿದೆ.
ಅರಣ್ಯ ಇಲಾಖೆಯವರು ಅಲ್ಲಿಗೆ ತಲುಪುವ ಮೊದಲೇ ಆರೋಪಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಚುಕ್ಕೆ ಜಿಂಕೆಯ ಶವವನ್ನು ಹೊರತೆಗೆದು ತುಂಡರಿಸಿದ್ದರು. ಚುಕ್ಕೆ ಜಿಂಕೆಯನ್ನು ಬೇಟೆಯಾಡಿರುವುದು ಅರಣ್ಯ ಇಲಾಖೆಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೋಲ್ಕತ್ತಾದಲ್ಲಿ ಅಮಿತ್ ಶಾ, ನಡ್ಡಾ ಸರಣಿ ಸಭೆ
ಇದಾದ ಬಳಿಕ ಅರಣ್ಯ ಇಲಾಖೆ ಏಳು ಮಂದಿಯನ್ನು ಹಿಡಿದು ತಲಾ 50 ಸಾವಿರ ರೂ. ದಂಡ ವಿಧಿಸಿದ್ದಾರೆ. ಕಾಡು ಪ್ರಾಣಿಗಳನ್ನು ಬೇಟೆಯಾಡಿದರೆ ಅಥವಾ ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದರೆ ವನ್ಯಜೀವಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಎಲ್ಲರಿಗೂ ಎಚ್ಚರಿಕೆ ನೀಡಿದೆ.