Thursday, December 12, 2024
Homeರಾಷ್ಟ್ರೀಯ | Nationalಕುತೂಹಲ ಕೆರಳಿಸಿದ ಚಿರಂಜಿವಿ-ರೇವಂತ್‍ರೆಡ್ಡಿ ಭೇಟಿ

ಕುತೂಹಲ ಕೆರಳಿಸಿದ ಚಿರಂಜಿವಿ-ರೇವಂತ್‍ರೆಡ್ಡಿ ಭೇಟಿ

ಹೈದರಾಬಾದ್,ಡಿ.26- ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕೂತುಹಲ ಕೆರಳಿಸಿದೆ. ಚಿರಂಜಿವಿ ಮತ್ತು ರೇವಂತ್ ರೆಡ್ಡಿ ಮಾತುಕತೆ ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಚಿರಂಜಿವ ಅವರು ಹೊಸ ಸಿಎಂಗೆ ಶುಭಾಷಯ ತಿಳಿಸಲಷ್ಟೇ ಭೇಟಿ ಮಾಡಿದ್ದೇ ಎಂದು ಸ್ಪಷ್ಟನೆ ನೀಡಿದ್ದಾರೆ.

ನೀಲಿ ಜೀನ್ಸ್‍ನೊಂದಿಗೆ ಬಿಳಿ ಶರ್ಟ್ ಧರಿಸಿ ಚಿರಂಜಿವಿ ಮಿಂಚುತ್ತಿದ್ದರೆ, ಸಿಎಂ ರೆಡ್ಡಿ ಬಿಳಿ ಶರ್ಟ್ ಧರಿಸಿ ಕಪ್ಪು ಪ್ಯಾಂಟ್ ಹಾಕಿಕೊಂಡಿದ್ದರು. ಏತನ್ಮಧ್ಯೆ, ಚಿರಂಜೀವಿ ಅವರು ಮೆಗಾ 156 ಎಂಬ ಫ್ಯಾಂಟಸಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುದಿನಗಳ ನಂತರ ಮೆಗಾಸ್ಟಾರ್ ಸಹಿ ಹಾಕಿರುವ ಈ ರೀತಿಯ ಫ್ಯಾಂಟಸಿ ಫ್ಲಿಕ್ ಅನ್ನು ಬಿಂಬಿಸಾರ ಚಿತ್ರದ ಮೂಲಕ ನಿರ್ದೇಶನದ ಚೊಚ್ಚಲ ನಿರ್ದೇಶಕ ವಸಿಷ್ಠ ನಿರ್ದೇಶಿಸಲಿದ್ದಾರೆ.

ಕಣಿವೆಯಲ್ಲಿ ಮೂವರು ಶಂಕಿತರ ಬಂಧನ

ಮೆಗಾ 156 ಚಿತ್ರವನ್ನು ಯುವಿ ಕ್ರಿಯೇಷನ್ಸ ಬ್ಯಾನರ್ ಅಡಿಯಲ್ಲಿ ವಿ ವಂಶಿ ಕೃಷ್ಣಾ ರೆಡ್ಡಿ, ಪ್ರಮೋದ್ ಉಪ್ಪಲಪತಿ ಮತ್ತು ವಿಕ್ರಮ್ ರೆಡ್ಡಿ ಅವರು ಬೃಹತ್ ಪ್ರಮಾಣದಲ್ಲಿ ಚಿತ್ರೀಕರಿಸಲಿದ್ದಾರೆ.

RELATED ARTICLES

Latest News