Saturday, November 23, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-12-2023)

ನಿತ್ಯ ನೀತಿ : ಗೆಲುವು ಎಷ್ಟು ಸುಖದ ಅನುಭೂತಿ ಕೊಡುವುದೋ, ಸೋಲು ಕೂಡ ಹಾಗೆಯೇ ಒಂದು ಅನುಭವ. ಸೋಲು ಎನ್ನುವುದು ಮುಂದಿನ ಗೆಲುವಿನ ಹೆಜ್ಜೆ. ಎಂದಿಗೂ ಉತ್ಸಾಹ ಕಳೆದುಕೊಳ್ಳಬಾರದು.

ಪಂಚಾಂಗ ಬುಧವಾರ 27-12-2023
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಆರಿದ್ರಾ / ಯೋಗ: ಬ್ರಹ್ಮ ಕರಣ: ಬಾಲವ

ಸೂರ್ಯೋದಯ : ಬೆ.06.39
ಸೂರ್ಯಾಸ್ತ : 06.02
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ
ಮೇಷ
: ಗುತ್ತಿಗೆ ಆಧಾರಿತ ಉದ್ಯೋಗ ನಡೆಸುವವರಿಗೆ ಜನಬಲದ ಸಮಸ್ಯೆ ಎದುರಾಗಬಹುದು.
ವೃಷಭ: ಷೇರುಗಳನ್ನು ಖರೀದಿಸುವಲ್ಲಿ ನಿಮ್ಮ ಲೆಕ್ಕಾಚಾರ ವ್ಯತ್ಯಾಸವಾಗುವ ಬಗ್ಗೆ ಗಮನವಿರಲಿ.
ಮಿಥುನ: ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಅನವಶ್ಯಕ ಖರ್ಚು ನಿಯಂತ್ರಿಸುವುದು ಒಳಿತು.

ಕಟಕ: ಉನ್ನತ ಅಧಿಕಾರ ದೊರೆಯಲಿದೆ. ಮಾತಿನಿಂದ ಸಮಸ್ಯೆಗೆ ಸಿಲುಕುವಿರಿ. ಎಚ್ಚರದಿಂದಿರಿ.
ಸಿಂಹ: ಸಂಪನ್ಮೂಲ ವೃದ್ಧಿಗಾಗಿ ಹೊಸ ಮಾರ್ಗ ಕಂಡು ಕೊಳ್ಳುವಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರ ನಿರಾತಂಕವಾಗಿ ಮುಂದುವರಿಯಲಿದೆ.

ತುಲಾ: ವಿದ್ಯಾರ್ಥಿಗಳಿಗೆ ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ವೃಶ್ಚಿಕ: ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಮನೋವೈದ್ಯರಿಗೆ ಉತ್ತಮ ದಿನ.
ಧನುಸ್ಸು: ದೂರ ಪ್ರಯಾಣ ಮಾಡಬೇಕಾಗಬಹುದು. ಯುವಕರಿಗೆ ವೃತ್ತಿಯಲ್ಲಿ ಹಿನ್ನಡೆಯಾಗಲಿದೆ.

ಮಕರ: ಹೆಚ್ಚು ಶ್ರಮ ವಹಿಸಿದರೆ ಆದಾಯ ಹೆಚ್ಚಾಗ ಲಿದೆ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆಯಾಗಲಿದೆ.
ಕುಂಭ: ಎಲ್ಲ ಕೆಲಸ-ಕಾರ್ಯಗಳಿಗೂ ವಿರಾಮ ಹೇಳಿ ಪತ್ನಿ-ಮಕ್ಕಳೊಂದಿಗೆ ಸಮಯ ಕಳೆಯಿರಿ.
ಮೀನ: ನಾನಾ ರೀತಿಯ ತೊಂದರೆ ಎದುರಿಸ ಬೇಕಾಗುತ್ತದೆ. ಕೋಪ ನಿಯಂತ್ರಿಸಿದರೆ ಒಳಿತು.

RELATED ARTICLES

Latest News