Friday, December 6, 2024
Homeಕ್ರೀಡಾ ಸುದ್ದಿ | Sportsಟೆಸ್ಟ್‌ಗೆ ಕನ್ನಡಿಗ ಪ್ರಸಿಧ್ ಕೃಷ್ಣ ಎಂಟ್ರಿ

ಟೆಸ್ಟ್‌ಗೆ ಕನ್ನಡಿಗ ಪ್ರಸಿಧ್ ಕೃಷ್ಣ ಎಂಟ್ರಿ

ಸೆಂಚೂರಿಯನ್, ಡಿ.26- ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಕನ್ನಡಿಗ, ಯುವ ವೇಗಿ ಪ್ರಸಿಧ್ ಕೃಷ್ಣ ಅವರು ರೆಡ್ ಬಾಲ್ ಸ್ವರೂಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಪಾದದ ಗಾಯದಿಂದ ಬಳಲಿ ಟೂರ್ನಿಯಿಂದ ಹೊರಗುಳಿದಿದ್ದರಿಂದ ಯುವ ವೇಗಿ ಪ್ರಸಿಧ್ ಕೃಷ್ಣಗೆ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಲಭಿಸಿದೆ.

ಮಳೆಯಿಂದಾಗಿ ಸ್ವಲ್ಪ ತಡವಾಗಿ ಆರಂಭಗೊಂಡ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು , ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಿಂದ ಹೊರಗುಳಿದಿದ್ದ ರವಿಚಂದ್ರನ್ ಅಶ್ವಿನ್ ಅವರು ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದರೆ, ರವೀಂದ್ರ ಜಡೇಜಾರನ್ನು ತಂಡದಿಂದ ಹೊರಗಿಡಲಾಗಿದೆ.

ಫ್ರಾನ್ಸ್ ನಲ್ಲಿ ಸಿಲುಕಿಕೊಂಡಿದ್ದ 276 ಭಾರತೀಯರು ಮುಂಬೈಗೆ ವಾಪಸ್

ದಕ್ಷಿಣ ಆಫ್ರಿಕಾದ ಪಿಚ್‍ಗಳು ಹೆಚ್ಚು ಬೌನ್ಸ್ ಆಗುವುದರಿಂದ ಟೀಮ್ ಇಂಡಿಯಾ ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಪ್ರಸಿಧ್ ಕೃಷ್ಣ ಹಾಗೂ ಮೊಹಮ್ಮದ್ ಸಿರಾಜ್ ನಾಲ್ವರು ವೇಗಿಗಳೊಂದಿಗೆ ಅಖಾಡಕ್ಕೆ ಇಳಿದಿದೆ.

RELATED ARTICLES

Latest News