Monday, November 25, 2024
Homeರಾಜ್ಯಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.1- ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ವೃದ್ಧಾಪ್ಯ ವೇತನವನ್ನು ಹೆಚ್ಚಿಸಿ ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಹಿಳೆಯರ ಮಕ್ಕಳ ಹಾಗೂ ಹಿರಿಯ ಹಿರಿಯ ನಾಗರಿಕರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದರು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ತಾವು ಬಜೆಟ್ ಮಂಡಿಸುತ್ತಿದ್ದು, ಆ ವೇಳೆ ಮಾಸಿಕವಾಗಿ ನೀಡಲಾಗುತ್ತಿರುವ 1,200 ರೂ.ಗಳ ವೃದ್ಧಾಪ್ಯ ವೇತನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ ಎಷ್ಟು ಹೆಚ್ಚಿಸಲಾಗುತ್ತದೆ ಎಂದು ಈಗಲೇ ಸ್ಪಷ್ಟಪಡಿಸುವುದಿಲ್ಲ ಎಂದರು.

ಹಿರಿಯರ ಚೈತನ್ಯ, ಮಾರ್ಗದರ್ಶನಗಳು ಸಮಾಜಕ್ಕೆ ಅಗತ್ಯವಾಗಿವೆ. ಇಂದಿನ ಕಾರ್ಯಕ್ರಮದಲ್ಲಿ ಸನ್ಮಾನಿತರಾದವರು ಸಮಾಜಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಸೂರ್ತಿದಾಯಕ ಕೆಲಸ ಮಾಡಿದ್ದಾರೆ. ಅವರನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ. ಭವಿಷ್ಯದಲ್ಲೂ ಹೆಚ್ಚಿನ ಆರೋಗ್ಯ, ಆಯುಷ್ಯದೊಂದಿಗೆ ಹಿರಿಯರು ಜೀವಿಸಲಿ ಎಂದು ಹಾರೈಸಿದರು.

ಗೋದಾಮಿನಲ್ಲಿ ಬೆಂಕಿ : ಅಪಾರ ಪ್ರಮಾಣದ ಸುಗಂಧದ್ರವ್ಯಗಳು ನಾಶ

ಹಣ್ಣಿನ ವ್ಯಾಪಾರ ಮಾಡಿ ಬಂದ ಎಲ್ಲಾ ದುಡ್ಡನ್ನು ಶೈಕ್ಷಣಿಕ ಅಭಿವೃದ್ಧಿಗಾಗಿ ಖರ್ಚು ಮಾಡಿದ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಪ್ಪ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಂದಾಯವಾಗಲಿ ಎಂದು ಹೇಳಿದರು. ಪ್ರತಿಯೊಂದು ಮಗುವೂ ವಿಶ್ವಮಾನವನಾಗಿಯೇ ಭೂಮಿಗೆ ಬರುತ್ತದೆ. ಆದರೆ ಸಾಯುವಾಗ ಸಮಾಜದಿಂದ ಪ್ರಭಾವಿತವಾಗಿ ಬದಲಾವಣೆ ಕಾಣುವುದು ನೋವಿನ ಸಂಗತಿ. ಇಂತಹುದೇ ಧರ್ಮದಲ್ಲಿ ಹುಟ್ಟಬೇಕು ಎಂದು ನಾವ್ಯಾರು ಬಯಸುವುದಿಲ್ಲ. ಧರ್ಮ, ಜಾತಿ ಇರುವುದಕ್ಕಾಗಿ ಅದರಲ್ಲಿ ಹುಟ್ಟುತ್ತೇವೆ, ಅಲ್ಲಿನ ಪದ್ಧತಿಗಳನ್ನು ಆಚರಣೆ ಮಾಡುತ್ತೇವೆ. ನಮ್ಮ ಧರ್ಮಗಳನ್ನು ಪ್ರೀತಿಸುವುದು ಒಳ್ಳೆಯದು. ಹಾಗೆಯೇ ಮತ್ತೊಂದು ಧರ್ಮವನ್ನೂ ಗೌರವಿಸಬೇಕು. ಸಹಿಷ್ಣುತೆ, ಸಾಮರಸ್ಯದಲ್ಲಿ ಬದುಕಿದಾಗ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು.

ಹಿರಿಯ ನಾಗರಿಕ ಕಲ್ಯಾಣ ಇಲಾಖೆಯಿಂದ ಸಾಂಸ್ಕøತಿಕ ಚಟುವಟಿಕೆ ಹಾಗೂ ಹಿರಿಯರ ಸಕ್ರಿಯತೆಗೆ ಹಲವು ಚಟುವಟಿಕೆಗಳನ್ನು ಆಯೋಜನೆಗೊಂಡಿರುವುದು ಸ್ವಾಗತಾರ್ಹ. ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಿಸಲು ಮತ್ತು ಅಲ್ಲಿನ ಪರಿಸ್ಥಿತಿ ಸುಧಾರಿಸುವಲ್ಲಿ ನಮ್ಮ ಸರ್ಕಾರ ಆದ್ಯತೆ ನೀಡಲಿದೆ ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರಾಜ್ಯದಲ್ಲಿ 59 ಲಕ್ಷ ಹಿರಿಯ ನಾಗರಿಕರಿದ್ದಾರೆ. ಅವರಲ್ಲಿ 49 ಲಕ್ಷ ಮಂದಿಗೆ ಮಾಸಿಕ 1,200 ರೂ. ವೃದ್ಧಾಪ್ಯ ವೇತನ ನೀಡುತ್ತಿದ್ದೇವೆ. ಪ್ರಸ್ತುತ ದಿನಮಾನದಲ್ಲಿ ಮಹಿಳಾ ಸಬಲೀಕರಣ ಸೇರಿದಂತೆ ಪಂಚಖಾತ್ರಿ ಯೋಜನೆಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಮುಖ್ಯಮಂತ್ರಿಯವರು ಹಿರಿಯ ನಾಗರಿಕರಿಗೆ ಮಾಸಾಶನವನ್ನು 2,000 ರೂ.ಗಳಿಗೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಸಾಂಸ್ಕøತಿಕ, ಕ್ರೀಡೆ, ಆರೋಗ್ಯ, ಆರೈಕೆ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನೂ ಒಂದೇ ಸೂರಿನಡಿ ಕಲ್ಪಿಸಿ, ಜಿಲ್ಲೆಗೊಂದರಂತೆ ಹಿರಿಯರ ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಕೇಂದ್ರದಿಂದ ಶೇ. 60 ರಷ್ಟು, ರಾಜ್ಯಸರ್ಕಾರ ಶೇ.40 ರಷ್ಟು ಅನುದಾನ ಬಳಸಿಕೊಳ್ಳಲಾಗುವುದು. ವೃದ್ಧಾಶ್ರಮಗಳಲ್ಲಿ ಸಾಕಷ್ಟು ನ್ಯೂನತೆಗಳಿರುವುದನ್ನು ತಾವು ಗಮನಿಸಿದ್ದು, ಅವುಗಳನ್ನು ಸರಿಪಡಿಸಲು ಹಂತಹಂತವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

“ಪಕ್ಷ ತೊರೆಯುತ್ತಿರುವವರ ಸಮಾಧಾನಕ್ಕೆ ಹೆಚ್ಡಿಕೆ ಹಿಟ್ ಅಂಡ್ ರನ್ ಹೇಳಿಕೆ ನೀಡಿದ್ದಾರೆ”

ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ನಾಗರಿಕರ ಜೊತೆ ಸಮಾಲೋಚನೆ ನಡೆಸಿದರು. ಸಂಚಾರಿ ಆರೋಗ್ಯ ತಪಾಸಣಾ ಘಟಕದಲ್ಲಿ ತಮ್ಮ ರಕ್ತದೊತ್ತಡ ಹಾಗೂ ಇತರ ಪರೀಕ್ಷೆಗಳನ್ನು ಮಾಡಿಸಿಕೊಂಡರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕøತ ಹರೇಕಳ ಹಾಜಪ್ಪ, ಹಿರಿಯ ನ್ಯಾಯವಾದಿ ಪಿ.ಎಸ್.ರಾಜಗೋಪಾಲï, ಯೋಗಪಟು ಡಿ.ನಾಗರಾಜ್, ಸಂಬಾಳ ವಾದಕ ಹಣಮಂತ ಗೋವಿಂದಪ್ಪ ಹೂಗಾರ, ನಿವೃತ್ತ ಕುಲಪತಿ ಆರ್.ಆರ್.ಹಂಚಿನಾಳ, ಸಮಾಜ ಸೇವಕ ವೀರಭದ್ರಪ್ಪ ಶರಣಪ್ಪ ಉಪ್ಪಿನ, ನಿವೃತ್ತ ಶಿಕ್ಷಕರಾದ ಎಚ್.ಎಸ್.ಗಿರಿರಾಜ್ ಅವರನ್ನು ಸನ್ಮಾನಿಸಲಾಯಿತು.

RELATED ARTICLES

Latest News