Friday, November 22, 2024
Homeರಾಜ್ಯಕನ್ನಡ ಸಂಘಟನೆಗಳಿಗೆ ಗೃಹಸಚಿವ ಪರಮೇಶ್ವರ್ ಎಚ್ಚರಿಕೆ

ಕನ್ನಡ ಸಂಘಟನೆಗಳಿಗೆ ಗೃಹಸಚಿವ ಪರಮೇಶ್ವರ್ ಎಚ್ಚರಿಕೆ

ಬೆಂಗಳೂರು,ಡಿ.28- ಕನ್ನಡ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಂಘಟನೆಗಳಿಗೆ ಅಧಿಕಾರ ಇದೆ. ಹಾಗೆಂದ ಮಾತ್ರಕ್ಕೆ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸರ್ಕಾರ ಕನ್ನಡದ ಪರವಾಗಿದೆ, ಕನ್ನಡದಲ್ಲೇ ಆಡಳಿತ ನಡೆಸಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದು ಅದನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಕನ್ನಡ ನಾಮಫಲಕಗಳ ಬಗ್ಗೆ ಪರವಾನಗಿ ನೀಡುವ ವೇಳೆ ಷರತ್ತು ವಿಧಿಸಲಾಗುತ್ತದೆ ಎಂದರು.

ಇದರ ನಡುವೆ ಕರ್ನಾಟಕ ರಕ್ಷಣಾ ವೇದಿಕೆಯವರು ಬಲವಂತವಾಗಿ ದಾಳಿ ಮಾಡುತ್ತಿರುವುದು ಸರಿಯಲ್ಲ. ಬಿಬಿಎಂಪಿ ಮತ್ತು ಸರ್ಕಾರದ ಗಮನಕ್ಕೆ ವಿಷಯ ತರಬಹುದಿತ್ತು. ನಮ್ಮಿಂದಲೂ ಸರಿಯಾದ ಕ್ರಮಗಳಾಗದೇ ಇದ್ದರೆ ಆಗ ಅವರು ಹೋರಾಟ ನಡೆಸಬಹುದಿತ್ತು. ಆದರೆ ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಕಾನೂನು ಸುವ್ಯವಸ್ಥೆ ಪಾಲನೆ ಸರ್ಕಾರ ಪೊಲೀಸರಿಗೆ ನೀಡಿರುವ ಜವಾಬ್ದಾರಿ. ಅದನ್ನು ಅವರು ಪ್ರಾಮಾಣಿಕವಾಗಿ ಮಾಡಿದ್ದಾರೆ. ಆಸ್ತಿಪಾಸ್ತಿಗಳ ಹಾನಿಯಾಗುತ್ತಿದ್ದರೂ ಪೊಲೀಸರು ಸುಮ್ಮನಿರಬೇಕೆಂದು ಬಯಸುವುದು ತಪ್ಪು ಎಂದು ಹೇಳಿದರು.

ಯಾರೇ ಆದರೂ ಹಿಂಸಾತ್ಮಕ ಹೋರಾಟ ನಡೆಸಬಾರದು. ಬೆಂಗಳೂರು ವಿಶ್ವದಲ್ಲೇ ಪ್ರಖ್ಯಾತ ನಗರ. ಇದರ ಬಗ್ಗೆ ನಮಗೆ ಹೆಮ್ಮೆಯಿರಬೇಕು. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಿಂದಲೂ ಇಲ್ಲಿಗೆ ಜನ ಬರುತ್ತಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಬೆಂಗಳೂರಿನ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದರು.

ಉತ್ತರ ಭಾರತದಲ್ಲಿ ಕವಿದ ಮಂಜು, 134 ವಿಮಾನ, 22 ರೈಲು ಸಂಚಾರದಲ್ಲಿ ವ್ಯತ್ಯಯ

ಪ್ರತಿಭಟನೆ ವೇಳೆ ಪೊಲೀಸರು ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದರೆ ಏನರ್ಥ? ಯಾವುದೇ ಸಂಘಟನೆಯಾದರೂ ಪ್ರತಿಭಟನೆ ನಡೆಸಲು ಒಂದಿಷ್ಟು ಕಾಲಾವಕಾಶ ನೀಡಲಾಗುತ್ತದೆ. ಅದರ ನಂತರ ಶಾಪಿಂಗ್ ಮಾಲ್‍ಗಳಿಗೆ ಹೋಗಿ ನಾಮಫಲಕಗಳನ್ನು ಕಿತ್ತು ಹಾಕುವುದು ಹೇಗೆ ನೋಡಿಕೊಂಡಿರಲು ಸಾಧ್ಯ. ಭದ್ರತೆ ನೀಡುವಂತೆ ಅಂಗಡಿ ಹಾಗೂ ಮಾಲ್‍ಗಳ ಮಾಲಿಕರು ಮನವಿ ಸಲ್ಲಿಸಿದ್ದಾರೆ. ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯವಲ್ಲವೇ ಎಂದರು.

ಮಧ್ಯಪ್ರದೇಶದಲ್ಲಿ ಬಸ್-ಟ್ರಕ್ ನಡುವೆ ಭೀಕರ ಅಪಘಾತ : 12 ಮಂದಿ ಸಜೀವ ದಹನ

ಕನ್ನಡ ಕಡ್ಡಾಯವನ್ನು ಜಾರಿಗೆ ತರುವಂತೆ ನಮ್ಮ ಮೇಲೆ ಒತ್ತಡ ಹಾಕುವುದು, ಪ್ರತಿಭಟನೆ ಮಾಡುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಸುತ್ತಿದೆ ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಸಾಕಷ್ಟು ಪಾಠ ಕಲಿತಿದ್ದೇವೆ, ಇನ್ನು ಕಲಿಯಲು ಏನೂ ಇಲ್ಲ, ಕಾನೂನು ಕುರಿತು ಪಕ್ಷ ಎಷ್ಟು ಪಾಠ ಕಲಿತಿದೆ ಎಂದರೆ ಕಲಿತು, ಕಲಿತು ದೇಶದಲ್ಲಿ ಬೇರೆಯವರಿಗೆ ಪಾಠ ಮಾಡುವಷ್ಟು ತಜ್ಞತೆ ಬೆಳೆಸಿಕೊಂಡಿದ್ದೇವೆ ಎಂದರು. ಸರ್ಕಾರ ಯಾವುದೇ ಮಾಲ್‍ಗಳ ಪರವಾಗಿಲ್ಲ. ಕಾನೂನು ರಕ್ಷಣೆಯಷ್ಟೇ ನಮ್ಮ ಆದ್ಯತೆ ಎಂದು ಹೇಳಿದರು.

RELATED ARTICLES

Latest News