Thursday, February 29, 2024
Homeಕ್ರೀಡಾ ಸುದ್ದಿಫೀಲ್ಡಿಂಗ್ ವೇಳೆ ಕನ್ನಡಲ್ಲೇ 'ಕೈಗೆ ಹಾಕಲೋ' ಎಂದ ಕೆ.ಎಲ್.ರಾಹುಲ್ ವಿಡಿಯೋ ವೈರಲ್

ಫೀಲ್ಡಿಂಗ್ ವೇಳೆ ಕನ್ನಡಲ್ಲೇ ‘ಕೈಗೆ ಹಾಕಲೋ’ ಎಂದ ಕೆ.ಎಲ್.ರಾಹುಲ್ ವಿಡಿಯೋ ವೈರಲ್

ಸೆಂಚೂರಿಯನ್, ಡಿ. 28- ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಉತ್ತಮ ಕ್ಷೇತ್ರ ಮಾಡದ ಕನ್ನಡಿಗ ಪ್ರಸಿಧ್ ಕೃಷ್ಣ ಅವರನ್ನು ಕೆ.ಎಲ್. ರಾಹುಲ್ ಅವರು ಕನ್ನಡದಲ್ಲೇ ಬೈದ್ದಿರುವುದು ಸ್ಟಂಪ್ಸ್‍ಗೆ ಅಳವಡಿಸಿರುವ ಮೈಕ್‍ನಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ಅನುಭವಿ ವೇಗಿ ಮೊಹಮ್ಮದ್ ಶಮಿ ಪಾದದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಹರಿಣಿಗಳ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದು, ಕನ್ನಡಿಗ ಪ್ರಸಿಧ್ ಕೃಷ್ಣ ಟೆಸ್ಟ್‍ಗೆ ಪದಾರ್ಪಣೆ ಮಾಡಿದ್ದಾರೆ.

ಟೆಸ್ಟ್‍ನ 2ನೇ ದಿನದಾಟದ ವೇಳೆ ವೇಗಿ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‍ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೀನ್ ಎಲ್ಗರ್ ಚೆಂಡನ್ನು ಡೀಪ್ ಮಿಡ್ ವಿಕೆಟ್ ಕಡೆ ಚೆಂಡನ್ನು ಬಾರಿಸಿದರು. ಈ ವೇಳೆ ಅಲ್ಲಿ ಕ್ಷೇತ್ರಕ್ಷಣೆ ಮಾಡುತ್ತಿದ್ದ ಪ್ರಸಿಧ್‍ಕೃಷ್ಣ ವಿಕೆಟ್ ಕೀಪರ್ ಕಡೆ ಚೆಂಡನ್ನು ಎಸೆದಿದ್ದಾರೆ.

ಮಾನವೀಯ ಮೌಲ್ಯದ ಮೇರು ಸಂತ, ಧರ್ಮಪ್ರಭು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ

ಈ ಸಮಯದಲ್ಲಿ ರಾಹುಲ್ ಕನ್ನಡದಲ್ಲೇ `ಚೆಂಡನ್ನು ಸರಿಯಾಗಿ ಕೈಗೆ ಹಾಕೋಲೋ’ ಎಂದು ಪ್ರಸಿಧ್‍ಕೃಷ್ಣರನ್ನು ಪ್ರೀತಿಯಿಂದ ಬೈದಿರುವುದು ಮೈಕ್‍ನಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಮೊದಲ ಇನ್ನಿಂಗ್ಸ್‍ನಲ್ಲಿ ಪ್ರಸಿಧ್ ಕೃಷ್ಣ ವಿಕೆಟ್ ಕೀಪರ್ ಕೈಲ್ ವೆರಿಯನ್ ಅವರ ವಿಕೆಟ್ ಪಡೆದಿದ್ದಾರೆ.

RELATED ARTICLES

Latest News