Saturday, December 6, 2025
Homeರಾಷ್ಟ್ರೀಯಡಾಲರ್ ಎದುರು ರೂಪಾಯಿ ಕುಸಿದರೂ ದೇಶದ ಆರ್ಥಿಕ ಪ್ರಗತಿಗಿಲ್ಲ ಅಡ್ಡಿ

ಡಾಲರ್ ಎದುರು ರೂಪಾಯಿ ಕುಸಿದರೂ ದೇಶದ ಆರ್ಥಿಕ ಪ್ರಗತಿಗಿಲ್ಲ ಅಡ್ಡಿ

Indian rupee collapses past 90 per US dollar for first time ever

ಬೆಂಗಳೂರು/ನವದೆಹಲಿ, ಡಿ.4- ಡಾಲರ್‌ ಮೌಲ್ಯ ಹೆಚ್ಚುತ್ತಿರುವ ನಡುವೆ ಕೆಲವರು ಆತಂಕ ಹೆಚ್ಚಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಭಾರತಕ್ಕೆ ಇದು ಲಾಭದಾಯಕವಾಗಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.ಪ್ರಸ್ತುತ ರೂಪಾಯಿ ಮೌಲ್ಯ ಡಾಲರ್‌ ಎದುರು 90.24 ರೂ.ಗೆ ಸಾರ್ವಕಾಲಿಕ ಕುಸಿತ ಕಂಡಿದ್ದರೂ ದೇಶದ ಪ್ರಮುಖ ಆರ್ಥಿಕತೆಯ ಬೆನ್ನುಲುಬಾಗಿರುವ ಸೇವಾವಲಯ ಇದರಿಂದ ಭಾರೀ ಲಾಭವನ್ನು ಗಳಿಸುತ್ತದೆ.

ಮೇಕ್‌ ಇನ್‌ ಇಂಡಿಯಾ ನೀತಿಯನ್ವಯ ದೇಶದಲ್ಲಿ ತಯಾರಿಸುವ ಉತ್ಪನ್ನಗಳನ್ನು ಸ್ಥಳೀಯ ಸಂಪನೂಲಗಳನ್ನು ಬಳಸಿ ಕೊಳ್ಳುತ್ತಿರುವುದರಿಂದ ಮತ್ತು ಅದನ್ನು ಜಾಗತಿಕ
ಮಟ್ಟದಲ್ಲಿ ಪ್ರದರ್ಶಿಸಿ ರಫ್ತು ಮಾಡುತ್ತಿರುವುದರಿಂದ ದೇಶದ ಆರ್ಥಿಕತೆಗೆ ಹೊಸ ಆಯಾಮ ಸಿಗುತ್ತಿದೆ.

ಬಹುಮುಖ್ಯವಾಗಿ ಕೇಂದ್ರ ಸರ್ಕಾರ ರಫ್ತನ್ನು ಹೆಚ್ಚಿಸಿ ಆಮದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಮಾರ್ಗೋಪಾಯಗಳನ್ನು ಕಂಡುಹಿಡಿಯುತ್ತಿರುವ ನಡುವೆಯೇ ಪ್ರಸ್ತುತ ಎದುರಾಗಿರುವ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಹೊಸಹೊಸ ವ್ಯಾಖ್ಯಾನಗಳು ಮೂಡಿಬರುತ್ತಿವೆ.

ಇದರ ನಡುವೆ ಆರ್ಥಿಕ ತಜ್ಞರು ನಾವು ಎಷ್ಟು ರಫ್ತು ಮಾಡುತ್ತೇವೋ ಅಷ್ಟು ಪ್ರಮಾಣದಲ್ಲಿ ನಮಗೆ ಲಾಭದಾಯಕವಾಗುತ್ತದೆ. ಡಾಲರ್‌ ಮೌಲ್ಯ ಹೆಚ್ಚುತ್ತಿರುವುದು ಅಮೆರಿಕದಲ್ಲಿನ ಹಣದುಬ್ಬರ, ಕೊರತೆ ಮತ್ತಿತರ ಜಾಗತಿಕ ಗೊಂದಲಗಳಿಂದ ಎಂದು ವಿಶ್ಲೇಷಿಸಿದ್ದಾರೆ.

ಪ್ರಮುಖವಾಗಿ ನಾವು ನೋಡುವುದಾದರೆ ದೇಶದ ಪ್ರಮುಖ ರಫ್ತುವಲಯದಲ್ಲಿ ಮೊದಲನೆಯದಾಗಿ ನಮ ಔಷಧ ತಯಾರಿಕೆ, ಸಾಫ್ಟ್ ವೇರ್‌ ಉಪಕರಣಗಳು ಮತ್ತು ಜವಳಿ ಮತ್ತು ಉಡುಪು ಪ್ರಮುಖ ಲಾಭದಾಯಕ ಕ್ಷೇತ್ರವಾಗಿದೆ. ಇಲ್ಲಿ ತಯಾರಿಸುವ ಉತ್ಪನ್ನಗಳನ್ನು ಸ್ಥಳೀಯ ಮಟ್ಟದಲ್ಲೇ ಖರೀದಿಸುವುದರಿಂದ ಅಲ್ಲಿ ಉದ್ಯೋಗ ಸೇರಿದಂತೆ ಸಣ್ಣ ಮತ್ತು ಮಧ್ಯಮ ಉದ್ಯಮವೂ ಕೂಡ ಪ್ರಗತಿ ಸಾಧಿಸುತ್ತಿದೆ.

ಅಂಕಿ ಅಂಶಗಳ ಪ್ರಕಾರ, ಜವಳಿ ಮತ್ತು ಉಡುಪುಗಳಲ್ಲಿ ಜಾಗತಿಕ ವ್ಯಾಪಾರದಲ್ಲಿ ಭಾರತದ ಪಾಲು 3.9% ರಷ್ಟಿದೆ. ಕಳೆದ 2024-25ರ ಹಣಕಾಸು ವರ್ಷದ ಏಪ್ರಿಲ್‌‍-ಅಕ್ಟೋಬರ್‌ ಅವಧಿಯಲ್ಲಿ ಒಟ್ಟು ರಫ್ತಿನಲ್ಲಿ ಸಿದ್ಧ ಉಡುಪುಗಳು ಅತಿ ದೊಡ್ಡ ಪಾಲನ್ನು ( 8,733 ಮಿಲಿಯನ್‌ ಡಾಲರ್‌) ಹೊಂದಿವೆ (41%). ನಂತರ ಹತ್ತಿ ಜವಳಿ (33%, 7,082 ಮಿಲಿಯನ್‌), ಮಾನವ ನಿರ್ಮಿತ ಜವಳಿ (15%, 3,105 ಮಿಲಿಯನ್‌) ಹೊಂದಿದೆ.

ಇದರ ನಡುವೆ ಇಂಡಿಯನ್‌ ಟೆಕ್‌್ಸಪ್ರೆನಿಯರ್ಸ್‌ ಫೆಡರೇಶನ್‌ನ ಅಂಕಿಅಂಶಗಳ ಪ್ರಕಾರ, ಭಾರತವು ಏಪ್ರಿಲ್‌ ಮತ್ತು ಅಕ್ಟೋಬರ್‌ 2024 ರ ನಡುವೆ ಸುಮಾರು 8,900 ಕೋಟಿ (ಅಥವಾ 951 ಮಿಲಿಯನ್‌) ಸಿದ್ಧ ಉಡುಪುಗಳನ್ನು ಆಮದು ಮಾಡಿಕೊಂಡಿದೆ. ಇದನ್ನು ಬಾಂಗ್ಲಾದೇಶ, ಚೀನಾ ಮತ್ತು ವಿಯೆಟ್ನಾಂನಿಂದ ತರಿಸಿಕೊಳ್ಳಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಇದು ಬಹಳಷ್ಟು ಕುಸಿದಿದೆ ಎಂದು ತಿಳಿಸಿದೆ.

ಪ್ರಸ್ತುತ ಪಟ್ಟಿಯಲ್ಲಿ ಚೀನಾ ಅಗ್ರಸ್ಥಾನ ಪಡೆದಿದ್ದು, ಜಾಗತಿಕ ಜವಳಿ ಮತ್ತು ಉಡುಪು ರಫ್ತಿನ 40% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ದೇಶವು ವ್ಯಾಪಕವಾದ ಮೂಲಸೌಕರ್ಯ, ನುರಿತ ಕಾರ್ಯಪಡೆ, ವೈವಿಧ್ಯಮಯ ಉತ್ಪಾದನಾ ಸಾಮರ್ಥ್ಯಗಳು, ಪರಿಣಾಮಕಾರಿ ಪೂರೈಕೆ ಸರಪಳಿಯನ್ನು ಹೊಂದಿದೆ.

ಇನ್ನು 2024-25ನೇ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಾಫ್‌್ಟವೇರ್‌ ರಫ್ತು 224.4 ಬಿಲಿಯನ್‌ ತಲುಪುವ ನಿರೀಕ್ಷೆಯಿದೆ. ಇದು ಈ ಹಿಂದಿನ ವರ್ಷಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ.
ಈ ಅಂಕಿ ಅಂಶವು ವಿಶಾಲವಾದ ಮತ್ತು ಉದ್ಯಮದ ಒಟ್ಟು ಆದಾಯದ ಭಾಗವಾಗಿದೆ, 2023 ರಲ್ಲಿ 245 ಬಿಲಿಯನ್‌ ಡಾಲರ್‌ ಆಗಿತ್ತು, ರಫ್ತುಗಳು ಈ ಒಟ್ಟು ಆದಾಯದ ದೊಡ್ಡ ಭಾಗವನ್ನು ಹೊಂದಿವೆ.

2024-25 ಸಾಗರೋತ್ತರ ವಾಣಿಜ್ಯ ಉಪಸ್ಥಿತಿಯ ಮೂಲಕ ವಿತರಿಸಲಾದ ಒಟ್ಟು ಸಾಫ್‌್ಟವೇರ್‌ ರಫ್ತು ಸೇವೆಗಳು 224.4 ಬಿಲಿಯನ್‌ ಎಂದು ಅಂದಾಜಿಸಲಾಗಿದೆ.ವಾರ್ಷಿಕ ಬೆಳವಣಿಗೆ: 2024-25ರ ರಫ್ತು ಮೌಲ್ಯವು ಬಲವಾದ ಬೆಳವಣಿಗೆಯ ದರವನ್ನು ತೋರಿಸುತ್ತದೆ, ಇದು ಕಂಪ್ಯೂಟರ್‌ ಸೇವೆಗಳು ಮತ್ತು ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆ ಬೇಡಿಕೆಯಿಂದ ನಡೆಯುತ್ತದೆ.

ಸದ್ಯದ 2025-26ನೇ ಸಾಲಿನಲ್ಲಿ ಇದು ಮತ್ತಷ್ಟು ಎತ್ತರಕ್ಕೆ ಬೆಳೆಯುವ ಸಾಧ್ಯತೆ ಇರುವುದರಿಂದ ರಫ್ತಿನಲ್ಲಿ ಮತ್ತಷ್ಟು ಹೆಚ್ಚಳವಾಗುವ ಲಕ್ಷಣಗಳು ಗೋಚರಿಸುತ್ತಿವೆ.ಇನ್ನು ಭಾರತದ ಒಟ್ಟು ಔಷಧ ರಫ್ತು ಪ್ರಮಾಣ 30 ಶತಕೋಟಿಗಿಂತ ಹೆಚ್ಚಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 9% ಕ್ಕಿಂತ ಹೆಚ್ಚಿನ ಹೆಚ್ಚಳವಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿದೆ.

ಪ್ರಮುಖವಾಗಿ ಅಮೆರಿಕ, ಬ್ರಿಟನ್‌, ಬ್ರೆಜಿಲ್‌, ಫ್ರಾನ್‌್ಸ, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭಾರತದಿಂದ ಔಷಧ ಹೆಚ್ಚಾಗಿ ಪೂರೈಕೆಯಾಗುತ್ತಿದೆ.ಸದ್ಯದ 2026 ರ ಮಾರ್ಚ್‌ ವೇಳೆಗೆ 35 ಶತಕೋಟಿ ತಲುಪುವ ಅಂದಾಜು ಗುರಿಯನ್ನು ಹೊಂದಲಾಗಿದ್ದು, ಭಾರತೀಯ ಔಷಧ ಕಂಪನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಸಾಕಷ್ಟು ಲಾಭ ಮಾಡಿವೆ.

ಭಾರತವು ಜಾಗತಿಕವಾಗಿ ಜೆನೆರಿಕ್‌ ಔಷಧಿಗಳ ಅತಿದೊಡ್ಡ ಪೂರೈಕೆದಾರ ಎಂಬ ಹೆಗ್ಗಳಿಕೆ ಪಡೆದಿದೆ. ಇದಲ್ಲದೆ ಇದು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವಕ್ಕೆ ಲಸಿಕೆ ಅವಶ್ಯಕತೆಗಳಲ್ಲಿ ಸುಮಾರು 65-70% ರಷ್ಟು ಭಾರತವೇ ಪೂರೈಸುತ್ತದೆ.
ಈ ಎಲ್ಲಾ ಲಕ್ಷಣಗಳು ಭಾರತದ ಆರ್ಥಿಕತೆಗೆ ಹೊಸ ಶಕ್ತಿಯನ್ನು ನೀಡುತ್ತವೆ. ರೂಪಾಯಿ ಮೌಲ್ಯ ಕುಸಿದರೂ ಕೂಡ ಅದರ ಪರಿಣಾಮ ಅಷ್ಟಾಗಿ ಬಾಧಿಸುವುದಿಲ್ಲ.

RELATED ARTICLES

Latest News