ಹ್ಯಾಂಗ್ಝೌ,ಅ.1- ಚೀನಾದಲ್ಲಿ ನಡೆಯುತ್ತಿರುವ 19ನೇ ಏಷ್ಯಾನ್ ಗೇಮ್ಸ್‍ನಲ್ಲಿ ಪದಕದ ಬೇಟೆಯನ್ನು ಮುಂದುವರಿಸಿರುವ ಭಾರತದ ಬತ್ತಳಿಕೆಗೆ ಕನ್ನಡತಿ ಅದಿತಿ ಅಶೋಕ್ ಅವರು ಬೆಳ್ಳಿ ಪದಕವನ್ನು ಸೇರ್ಪಡೆಗೊಳಿಸಿದ್ದಾರೆ.
ಮಹಿಳೆಯರ ವೈಯಕ್ತಿಕ ಗಾಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದ ಬೆಂಗಳೂರಿನ ಕುವರಿ ಅದಿತಿ ಅಶೋಕ್ ವೆಸ್ಟ್ ಲೇಕ್ ಇಂಟರ್‍ನ್ಯಾಷನಲ್ ಗಾಲ್ ಕೋರ್ಸ್‍ನಲ್ಲಿ ನಡೆದ ಪೈನಲ್ ಪಂದ್ಯದಲ್ಲಿ 67-66-61-73ರ ಸುತ್ತುಗಳೊಂದಿಗೆ 17 ಅಂಡರ್‍ಗಳೊಂದಿಗೆ 2ನೇ ಸ್ಥಾನ ಪಡೆದು ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ.
ಅದಿತಿ ಅಶೋಕ್‍ಗೆ ಪ್ರಬಲ ಪೈಪೋಟಿ ನೀಡಿದ ಥಾಯ್ಲೆಂಡ್‍ನ ಅರ್ಪಿಚಯಾ ಯುಬೋಲ್ ಅವರು 67-65-69-77ರ ಸುತ್ತುಗಳೊಂದಿಗೆ 19 ಅಂಡರ್‍ಗಳೊಂದಿಗೆ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರೆ, ದಕ್ಷಿಣ ಕೊರಿಯಾದ ಹ್ಯುಂಜೋ ಯೂ ಅವರು 67-67-68-65 ಸುತ್ತುಗಳೊಂದಿಗೆ 16 ಅಂಡರ್‍ಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟು ಕೊಂಡರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ
ದಾಖಲೆ ಬರೆದ ಅದಿತಿ:
ಏಷ್ಯಾನ್ ಗೇಮ್ಸ್ ನ ಮಹಿಳೆಯರ ಗಾಲ್‍ನಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಅದಿತಿ ಅಶೋಕ್ ಪದಕ ಗೆದ್ದ ಮೊದಲ ಹಾಗೂ 2ನೇ ಭಾರತೀಯಳು ಎಂಬ ದಾಖಲೆ ನಿರ್ಮಿಸಿದ್ದಾರೆ. 2002ರ ಬುಸಾನ್ ಏಷ್ಯಾಮ್ ಗೇಮ್ಸ್‍ನಲ್ಲಿ ಶಿವಕಪೂರ್ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದರು. ಟೊಕಿಯೋ ಒಲಿಂಪಿಕ್ಸ್‍ನಲ್ಲಿ ಅದಿತಿ 4ನೇ ಸ್ಥಾನ ಪಡೆದು ಪದಕ ಗೆಲ್ಲದೆ ನಿರಾಸೆ ಅನುಭವಿಸಿದ್ದರು.