Monday, November 25, 2024
Homeರಾಜ್ಯಪದವೀಧರ, ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

ಪದವೀಧರ, ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ

ಬೆಂಗಳೂರು,ಡಿ.30- ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ, ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಮೂರು ವಿಧಾನಪರಿಷತ್ ಹಾಗೂ ನಾಲ್ಕು ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಆಯೋಗ ಪ್ರಕಟಿಸಿದೆ. 1-11-2023ನ್ನು ಅರ್ಹತಾ ದಿನಾಂಕವೆಂದು ಉಲ್ಲೇಖಿಸಿ ಪರಿಷತ್‍ನಲ್ಲಿ ಖಾಲಿ ಇರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಆಯೋಗ ಪ್ರಕಟಿಸಿರುವ ಪಟ್ಟಿಯಂತೆ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 1,50,184 ಮತದಾರರು ಇದ್ದಾರೆ. 95,104 ಪುರುಷರು, 55,061 ಮಹಿಳೆಯರು ಮತ್ತು 19 ಇತರೆ ಮತದಾರರು ಇದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಲ್ಲಿ 74,118 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. 38,051 ಪುರುಷರು, 36,162 ಮಹಿಳೆಯರು, ಇತರೆ 5 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ 1,00,100 ಈ ಬಾರಿ ಮತ ಚಲಾಯಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದಾರೆ. 45,236 ಪುರುಷರ ಮತದಾರರು ಇದ್ದರೆ, 51,852 ಮಹಿಳೆಯರು, ಇತರ 12 ಮಂದಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಇನ್ನು ಶಿಕ್ಷಕರ ಕ್ಷೇತ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 23,565 ಮತದಾರರು ಮತ ಚಲಾಯಿಸಲಿದ್ದಾರೆ. ಇದರಲ್ಲಿ 14,714 ಪುರುಷರು, 8,851 ಮಹಿಳೆಯರು ಇದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 19,837 ಮತದಾರರು ಇದ್ದಾರೆ. 9,042 ಪುರಷರು, 10,795 ಮಹಿಳೆಯರು ಇದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 18,475 ಒಟ್ಟು ಮತದಾರರು ಇದ್ದರೆ, ಇದರಲ್ಲಿ 10,386 ಪುರಷರು ಹಾಗೂ 8,087 ಮಹಿಳಾ ಮತದಾರರು ಇದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 16,063 ಮತದಾರರು ಮತ ಚಲಾಯಿಸಲಿದ್ದು, 5,952 ಪುರುಷರು, 10,106 ಮಹಿಳಾ ಮತದಾರರು ಇದ್ದಾರೆ.

ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸದಿದ್ದರೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ

ಯಾರ್ಯಾರು ನಿವೃತ್ತಿ: ಕಳೆದ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಕೆಲವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಡಾ.ಚಂದ್ರಶೇಖರ್.ಬಿ ಪಾಟೀಲ್-ಈಶಾನ್ಯ ಪದವೀಧರ ಕ್ಷೇತ್ರ
ಆಯನೂರು ಮಂಜುನಾಥ್- ನೈರುತ್ಯ ಪದವೀಧರ ಕ್ಷೇತ್ರ
ಹಾಲಿ ಸದಸ್ಯರಾದ ಎ.ದೇವೇಗೌಡ – ಬೆಂಗಳೂರು ಪದವೀಧರ ಕ್ಷೇತ್ರ
ಡಾ.ವೈ.ಎ.ನಾರಾಯಣಸ್ವಾಮಿ -ಆಗ್ನೇಯ ಶಿಕ್ಷಕರ ಕ್ಷೇತ್ರ
ಎಸ್.ಎಲ್.ಭೋಜೇಗೌಡ – ನೈರುತ್ಯ ಶಿಕ್ಷಕರ ಕ್ಷೇತ್ರ
ಮರಿತಿಬ್ಬೇಗೌಡ- ದಕ್ಷಿಣ ಶಿಕ್ಷಕರ ಕ್ಷೇತ್ರ
ಇವರ ಅಧಿಕಾರಾವ 2024ರ ಜೂನ್ 21ಕ್ಕೆ ಕೊನೆಗೊಳ್ಳಲಿದೆ. ಬಿಜೆಪಿಯಿಂದ ಗೆದ್ದು ವಿಧಾನಪರಿಷತ್ ಸದಸ್ಯರಾಗಿದ್ದ ಪುಟ್ಟಣ ಅವರು ಪ್ರತಿನಿಧಿಸುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಅವಧಿ 2026 ನವೆಂಬರ್ 11ಕ್ಕೆ ಕೊನೆಗೊಳ್ಳಲಿದೆ.

ಈಶಾನ್ಯ ಪದವೀಧರ ಕ್ಷೇತ್ರ- ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ನೈರುತ್ಯ ಪದವೀಧರ ಕ್ಷೇತ್ರ -ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ತಾಲ್ಲೂಕು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡುಗು ಜಿಲ್ಲೆ.

ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ

ಬೆಂಗಳೂರು ಪದವೀಧರ- ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ.
ಆಗ್ನೇಯ ಶಿಕ್ಷಕರ ಕ್ಷೇತ್ರ- ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, (ಹೊನ್ನಾಳಿ, ಚನ್ನಗಿರಿ) ಹೊರತುಪಡಿಸಿ.
ನೈರುತ್ಯ ಶಿಕ್ಷಕರ ಕ್ಷೇತ್ರ- ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, (ಹೊನ್ನಾಳಿ, ಚನ್ನಗಿರಿ ಸೇರಿ)
ದಕ್ಷಿಣ ಶಿಕ್ಷಕರ ಕ್ಷೇತ್ರ- ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ
ಬೆಂಗಳೂರು ಶಿಕ್ಷಕರ ಕ್ಷೇತ್ರ – ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ.

RELATED ARTICLES

Latest News