Sunday, April 28, 2024
Homeಬೆಂಗಳೂರುರೈಲ್ವೆ ಪೊಲೀಸರಿಂದ 7 ಮಂದಿ ಬಂಧನ, 60 ಲಕ್ಷ ಮೌಲ್ಯದ ಗಾಂಜಾ ವಶ

ರೈಲ್ವೆ ಪೊಲೀಸರಿಂದ 7 ಮಂದಿ ಬಂಧನ, 60 ಲಕ್ಷ ಮೌಲ್ಯದ ಗಾಂಜಾ ವಶ

ಬೆಂಗಳೂರು,ಡಿ.30- ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡುತ್ತಿದ್ದ 7 ಮಂದಿ ಅಂತರಾಜ್ಯ ಆರೋಪಿಗಳನ್ನು ಬಂಧಿಸಿರುವ ರೈಲ್ವೆ ಪೊಲೀಸ್ ಘಟಕದ ವಿಶೇಷ ತಂಡ 60 ಲಕ್ಷ ರೂ. ಮೌಲ್ಯದ 60.965 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದೆ.

ಒಡಿಸ್ಸಾದ ಸಿಮುಲಿಯಾಬಲೇಶ್ವರ ವಾಸಿ ನಿತ್ಯಾನಾನದ್ ದಾಸ್, (37), ತ್ರಿಪುರದ ನಾರ್ಥ್ ಭಾಗನ್‍ನ ರಾಜೇಶ್ ದಾಸ್(25), ಬಿಹಾರದ ಕುಮ್ರಾವಿಷ್ಣುಪುರದ ಅಮರ್‍ಜಿತ್ (23), ಒಡಿಸ್ಸಾದ ಬಾಲಾಂಗಿರ್ ಜಿಲ್ಲೆಯ ನಿಕೇಶ್ ರಾಣಾ (23), ಒಡಿಸ್ಸಾದ ಕೊಂದಮಾಲ್‍ನ ಜಲಂಧರ್ ಕನ್ಹರ್(20) ಹಾಗೂ ಬೈಕುಂಟಾ ಕನ್ಹರ್, ಸಾಗರ್ ಕನ್ಹರ್ ಬಂಧಿತ ಆರೋಪಿಗಳಾಗಿದ್ದಾರೆ.

ಹೊಸ ವರ್ಷ ಹಿನ್ನೆಲೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆ ತಡೆಗೆ ರೈಲ್ವೆ ಪೊಲೀಸರು ಕಳೆದ ಡಿಸೆಂಬರ್ 22 ರಿಂದ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ಒಡಿಸ್ಸಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಾಡಿಗಳ ಬಗ್ಗೆ ನಿಗಾ ವಹಿಸಿ ತಪಾಸಣೆ ಕೈಗೊಂಡಾಗ ಪ್ರಶಾಂತಿ ಎಕ್ಸ್‍ಪ್ರೆಸ್, ಶೇಷಾದ್ರಿ ಎಕ್ಸ್‍ಪ್ರೆಸ್, ಶಾಲಿಮಾರ್ ವಾಸ್ಕೊ ಎಕ್ಸ್‍ಪ್ರೆಸ್ ರೈಲುಗಳಲ್ಲಿ ಈ ಆರೋಪಿಗಳು ಅಕ್ರಮವಾಗಿ ಗಾಂಜಾವನ್ನು ಸಾಗಿಸುತ್ತಿದ್ದುದು ಪತ್ತೆಯಾಗಿದೆ.

ಭಾರತದ ಆಟಗಾರರ ಬರುವಿಕೆಯನ್ನು ಕಾಯುತ್ತದೆಯಂತೆ ಪಾಕ್

ಈ ಸಂಬಂಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ 1, ಬೈಯ್ಯಪ್ಪನಹಳ್ಳಿಯಲ್ಲಿ 1, ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಹುಬ್ಬಳ್ಳಿಯಲ್ಲಿ 1 ಪ್ರಕರಣ ದಾಖಲಾಗಿದೆ. 7 ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈ ವಿಶೇಷ ತಂಡದ ಕಾರ್ಯಾಚರಣೆಗೆ ಡಿಐಜಿಪಿ ಹಾಗೂ ಎಸ್‍ಪಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News