ಮುಂಬೈ,ಡಿ.31-ಇಲ್ಲಿನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಏರ್ ಕಾರ್ಗೋ ಕಾಂಪ್ಲೆಕ್ಸ್‍ನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 2.4 ಕೋಟಿ ರೂ ಮೌಲ್ಯದ ಸಿಗರೇಟ್‍ಗಳನ್ನು ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
ಏರ್ ಕಾರ್ಗೋ ಮಾರ್ಗದ ಮೂಲಕ ದುಬೈನಿಂದ ಬಂದ ಸರಕುಗಳನ್ನು ಪರಿಶೀಲಿಸಿದಾಗ ಬೆಡ್‍ಶೀಟ್‍ಗಳು ಮತ್ತು ಡ್ರೆಸ್ ಮೆಟೀರಿಯಲ್‍ಗಳಲ್ಲಿ ಆಡಗಿಸಿಟ್ಟಿದ್ದ ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಪರೀಕ್ಷೆಯ ಸಮಯದಲ್ಲಿ, ಸಿಗರೇಟ್ ಪೆಟ್ಟಿಗೆಗಳನ್ನು ಮರೆಮಾಡಲಾಗಿದೆ ಮತ್ತು ಬಟ್ಟೆಗಳ ಬಾಕ್ಸ್‍ಗಳಲ್ಲಿ ಅಂದವಾಗಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರ ಸಾವಿಗೆ ಕಾರಣನಾಗಿದ್ದ ವಾಟರ್ ಟ್ಯಾಂಕ್ ಚಾಲಕನಿಗೆ 1 ವರ್ಷ ಜೈಲು
ಕಳ್ಳಸಾಗಣೆಯಾದ ದಾಸ್ತಾನಲ್ಲಿ ಕೆಲವು ಜನಪ್ರಿಯ ಬ್ರಾಂಡ್‍ಗಳ 15,86,960 ಸಿಗರೇಟ್ ಪತ್ರಯಾಗಿದ್ದು ಇದರ ಮಾರುಕಟ್ಟೆ ಮೌಲ್ಯ ಸುಮಾರು 2.4 ಕೋಟಿ ರೂಪಾಯಿ ಎಂದು ಹೇಳಿದರು. ತನಿಖೆಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯನ್ನು ಕಳ್ಳಸಾಗಣೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ತಿಳಿದುಬಂದು ಆತನನ್ನು ಬಂಧಿಸಲಾಗಿದೆ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು