Friday, February 23, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-12-2023)

ನಿತ್ಯ ನೀತಿ ; ಯೋಗವು ಮನಸ್ಸು ಹಾಗೂ ದೇಹದ ನಡುವೆ ಸಾಮರಸ್ಯವನ್ನು ತಂದು ಆತ್ಮದೊಂದಿಗೆ ಪರಮಾತ್ಮನ ಅನುಭೂತಿಯನ್ನುಂಟು ಮಾಡುವ ಆಧ್ಯಾತ್ಮ ಕೇಂದ್ರವಾಗಿದೆ.

ಪಂಚಾಂಗ ಭಾನುವಾರ 31-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯಣ / ಹೇಮಂತ ಋತು / ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಮಘಾ / ಯೋಗ: ಪ್ರೀತಿ / ಕರಣ: ಕೌಲವ

ಸೂರ್ಯೋದಯ ; ಬೆ.06.41
ಸೂರ್ಯಾಸ್ತ : 06.04
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ಒಂದೇ ಸಮಯಕ್ಕೆ ನಾನಾ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳಲ್ಲಿ ತೃಪ್ತಿಕರವಾಗಲಿದೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯ ಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರ ದಲ್ಲಿರುವ ಗೊಂದಲಗಳು ತಕ್ಕಮಟ್ಟಿಗೆ ಪರಿಹಾರವಾಗಲಿವೆ.
ಧನುಸ್ಸು: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

RELATED ARTICLES

Latest News