ಮೂಡಿಗೆರೆ,ಡಿ.31- ಹೆರಿಗೆಗೆಂದು ತುಂಬುಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಆಕೆ ಆಂಬ್ಯುಲೆನ್ಸ್‍ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಳಗೋಡು ಗ್ರಾಮದಲ್ಲಿ ನಡೆದಿದೆ.
ಬೆಳಗೋಡು ಗ್ರಾಮದ ನಿವಾಸಿ ತುಂಬು ಗರ್ಭಿಣಿಗೆ ಕಳೆದ ರಾತ್ರಿಹೆರಿಗೆ ನೋವು ಕಾಣಿಸಿಕೊಂಡಿದೆ ನಂತರ ಮನೆಯವರು ಆಂಬ್ಯುಲೆನ್ಸ್‍ಗೆ ಕರೆ ಮಾಡಿದ್ದಾರೆ ಕೆಲವೇ ನಿಮಿಷದಲ್ಲಿ 108 ಆಂಬ್ಯುಲೆನ್ಸ್ ಬಂದು ಆಕೆಯನ್ನು ಮೂಡಿಗೆರೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು ಆಸ್ಪತ್ರೆ ತಲುಪಲು ಇನ್ನೂ 15 ಕಿ.ಮೀ. ದೂರವಿರುವಾಗಲೇ ಆಕೆಗೆ ನೋವು ಹೆಚ್ಚಾಗಿದ್ದರಿಂದ ಚಾಲಕ ಗಂಗಾಧರನಾಯ್ಕ ವಾಹನವನ್ನು ಅತಿವೇಗವಾಗಿ ಚಲಾಯಿಸಿದ್ದಾರೆ.
ರೈತರ ಹಿತ ರಾಜ್ಯ ಸರ್ಕಾರದ ಆದ್ಯತೆ : ಸಚಿವ ಚಲುವರಾಯಸ್ವಾಮಿ
ಆದರೆ, ಗರ್ಭೀಣಿ ಮಹಿಳೆಯನ್ನ ನೋವು ತಡೆಯಲಾಗದೆ ಮಹಿಳೆ ಕಿರುಚಿಕೊಂಡಿದ್ದಾಳೆ ಆಗ ಚಾಲಕ ವಾಹನವನ್ನು ನಿಲ್ಲಿಸಿದ್ದು ಬೇರೆ ದಾರಿ ಕಾಣದೆ ಶುಶ್ರೂಕಿ ಮಂಜುಳಾ ಆಂಬ್ಯುಲೆನ್ಸ್‍ನಲ್ಲೇ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ,ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತು. ತಾಯಿ ಮಗು ಆರೋಗ್ಯವಾಗಿದ್ದಾರೆಂದು ಮಹಿಳೆಯ ಜೊತೆಗಿದ್ದ ಅವರ ಪತಿ ಹೇಳಿದ್ದಾರೆ. ಶುಶ್ರೂಕಿ ಮಂಜುಳಾ ಮತ್ತು ಚಾಲಕ ಗಂಗಾಧರ್ ಅವರ ಸಮಯ ಹಾಗೂ ಕರ್ತವ್ಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.