ಬೆಂಗಳೂರು,ಅ.1- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜಕಾರಣ ಮೀರಿ ಬೆಳೆದಿದ್ದಾರೆ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಭಿಪ್ರಾಪಟ್ಟರು. ಚಿತ್ರಕಲಾ ಪರಿಷತ್‍ನಲ್ಲಿಂದು ಹಮ್ಮಿಕೊಂಡಿದ್ದ ಸ್ವಪ್ನ ಬುಕ್‍ಹೌಸ್ ಪ್ರಕಾಶನದಿಂದ ಪ್ರಕಟಗೊಂಡ ಡಾ.ಎನ್.ಜಗದೀಶ್ ಕೊಪ್ಪ ಅವರು ರಚಿಸಿರುವ ಎಸ್.ಎಂ.ಕೃಷ್ಣ ಅವರ ಜೀವನಗಾಥೆ ಆಧರಿಸಿದ ನೆಲದ ಸಿರಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರಕಲಾ ಪರಿಷತ್‍ಗೆ ಜಾಗ ಸಿಕ್ಕಿದ್ದೇ ಎಸ್.ಎಂ.ಕೃಷ್ಣ ಅವರಿಂದ. ಸಾಂಸ್ಕøತಿಕ ನಾಯಕರೂ ಹೌದು. ಆಕರ್ಷಕ ವ್ಯಕ್ತಿತ್ವ ಉಳ್ಳವರು ಕೂಡ. ಕೃಷ್ಣ ಪಥದಲ್ಲಿ ಇಲ್ಲದ ಅನೇಕ ಅಂಶಗಳು ನೆಲದ ಸಿರಿಯಲ್ಲಿವೆ ಎಂದರು.
ನಾನು ವಿಧಾನಪರಿಷತ್ ಸಭಾಪತಿಯಾಗಲು ಹಾಗೂ ಚಿತ್ರಕಲಾ ಪರಿಷತ್‍ನ ಅಧ್ಯಕ್ಷನಾಗಲು ಕೃಷ್ಣ ಅವರೇ ಕಾರಣ ಎಂದು ಹೇಳಿದರು. ಮಾಡದ ಕೆಲಸಗಳಿಗೆ ಹೆಸರು ಪಡೆಯುವ ರಾಜಕಾರಣಿಗಳ ನಡುವೆ ಮಾಡಿದ ಕೆಲಸಗಳಿಗೆ ಕ್ರೆಡಿಟ್ ತೆಗೆದುಕೊಳ್ಳದ ವ್ಯಕ್ತಿತ್ವ ಕೃಷ್ಣ ಅವರದು ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ
ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಎಸ್.ಎಂ.ಕೃಷ್ಣ ಅವರು ದೂರದೃಷ್ಟಿಯುಳ್ಳ ನಾಯಕರು. ನನ್ನ ರಾಜಕೀಯ ಗುರುಗಳು. ಬೆಂಗಳೂರಿನ ಐಟಿಬಿಟಿಗೆ ಭದ್ರ ಬುನಾದಿ ಹಾಕಿದವರು. ಕರ್ನಾಟಕ ಮಾತ್ರವಲ್ಲ ಭಾರತದ ಚರಿತ್ರೆಯಲ್ಲಿ ಅಜರಾಮರಾಗಿ ನಿಲ್ಲುತ್ತಾರೆ. ರೈತಪರ ಬದ್ದತೆಯಿಂದ ಮುಖ್ಯಮಂತ್ರಿಯಾಗಿದ್ದರು. ಕಾವೇರಿಗಾಗಿ ಪಾದಯಾತ್ರೆ ಮಾಡಿದವರು ಎಂದು ಬಣ್ಣಿಸಿದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಾತನಾಡಿ, ನೆಲದ ಸಿರಿ ಪುಸ್ತಕ ರಚನೆ ಮಾಡುವಾಗ ಲೇಖಕರಾದ ಜಗದೀಶ್ ಕೊಪ್ಪ ಅವರು ನಮ್ಮನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.