Friday, November 22, 2024
Homeರಾಜ್ಯತಮ್ಮನ ಬಂಧನದ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ ಏನು..?

ತಮ್ಮನ ಬಂಧನದ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ ಏನು..?

ಬೆಂಗಳೂರು,ಡಿ.31- ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಸಂಸದ ಪ್ರತಾಪ್ ಸಿಂಹ ಮೌನ ಮುರಿದಿದ್ದಾರೆ. ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯ 10 ಎಕರೆಯಲ್ಲಿ ಬೆಳೆದಿದ್ದ 126 ಮರಗಳನ್ನು ಅರಣ್ಯ ಇಲಾಖೆಯ ಗಮನಕ್ಕೂ ತರದೇ ಕಡಿಯಲಾಗಿದೆ ಎಂಬ ದೂರಿನ ಆಧಾರದ ಮೇಲೆ ಸಂಸದ ಪ್ರತಾಪ್ ಸಿಂಹ ಸಹೋದರನ ಮೇಲೆ ಎಫ್‍ಐಆರ್ ದಾಖಲಾಗಿತ್ತು. ಅಲ್ಲದೇ ಜಮೀನಿನ ಮಾಲೀಕರಾದ ಜಯಮ್ಮ ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು..

ಅಪ್ರಾಪ್ತೆ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ್ದ ಆರೋಪಿ ಅರೆಸ್ಟ್

ಪ್ರಕರಣ ತನಿಖೆಗೆ ಇಳಿದ ವೇಳೆ ವಿಕ್ರಂ ಸಿಂಹ ಹಾಸನದಿಂದ ಬೆಂಗಳೂರಿಗೆ ಶಿಫ್ಟ ಆದ ಬಗ್ಗೆ ಮಾಹಿತಿ ಪಡೆದ ಬೇಲೂರು ಪೊಲೀಸರ ತಂಡ, ನಿನ್ನೆ ಅಷ್ಟೇ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹನನ್ನು ವಶಕ್ಕೆ ಪಡೆಯಿತು. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಾಪ್ ಸಿಂಹ ಕುಟುಕಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್ ನಲ್ಲಿ ಎಫ್‍ಐಆರ್ ಎಂಬ ಟ್ಯಾಗ್ ಲೈನ್ ನೀಡಿದ ಸಂಸದರು, ಪ್ರಮುಖ ಆರೋಪಿಗಳ ಹೆಸರನ್ನು ಅಂಡರ್ ಲೈನ್ ಮಾಡಿದ್ದಾರೆ. ಎಫ್‍ಐಆರ್ ಪ್ರತಿಯಲ್ಲಿ ಪ್ರಕರಣದ ಮೊದಲ ಆರೋಪಿ ರಾಕೇಶ್ ಶೆಟ್ಟಿ ಎಂದಿದ್ದು, 2ನೇ ಆರೋಪಿ ಜಯಮ್ಮ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿ ಅಲ್ಲದೇ ಇದ್ದರೂ ವಿಕ್ರಂ ಬಂಧನ ಎಂದು ಮಾರ್ಮಿಕವಾಗಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

RELATED ARTICLES

Latest News