Friday, December 13, 2024
Homeಇದೀಗ ಬಂದ ಸುದ್ದಿಅಪ್ರಾಪ್ತೆ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ್ದ ಆರೋಪಿ ಅರೆಸ್ಟ್

ಅಪ್ರಾಪ್ತೆ ಅಪಹರಿಸಿ ನಿರಂತರ ಅತ್ಯಾಚಾರ ಮಾಡಿದ್ದ ಆರೋಪಿ ಅರೆಸ್ಟ್

ಭದೋಹಿ,ಡಿ.31- ಉತ್ತರ ಪ್ರದೇಶದಲ್ಲಿ 17 ವರ್ಷದ ಬಾಲಕಿಯನ್ನು ಅಪಹರಿಸಿ 10 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ. ನಿರಂತರ ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ರಕ್ಷಿಸಲಾಗಿದ್ದು, 30 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿ.18ರಂದು ಬೆಳಗ್ಗೆ ಕಾಲೇಜಿಗೆಂದು ಮನೆಯಿಂದ ಹೊರಟ ಬಾಲಕಿ ವಾಪಸ್ ಬಂದಿರಲಿಲ್ಲ. ಆಕೆಯ ಸಹೋದರ ಡಿಸೆಂಬರ್ 19 ರಂದು ಪೊಲೀಸ್ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಗಾಗಿ ಶೋಧ ನಡೆಸಿದಾಗ ಆಕೆಯನ್ನು ರಾಜೇಶ್ ದುಬೆ ಎಂಬಾತ ಅಪಹಸಿರುವ ಸುಳಿವು ಸಿಕ್ಕಿತ್ತು. ತಕ್ಷಣ ಕಾರ್ಯಚರಣೆಗಿಳಿದ ಪೆಪೊಲೀಸರು ಆರೋಪಿಯನ್ನು ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ

ಆತನ ವಶದಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಆಕೆಯನ್ನು ಪೋಷಕರಿಗೆ ಒಪ್ಪಿಸಿರುವ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 363 (ಅಪಹರಣ), 366 (ಮದುವೆಗೆ ಒತ್ತಾಯಿಸುವುದು), ಮತ್ತು 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Latest News