Monday, January 13, 2025
Homeರಾಜ್ಯರಾಜಕೀಯ ಲಾಭಕ್ಕಾಗಿ ರಾಮನ ಹೆಸರು ದುರ್ಬಳಕೆ : ಸಚಿವ ಡಿ.ಸುಧಾಕರ್

ರಾಜಕೀಯ ಲಾಭಕ್ಕಾಗಿ ರಾಮನ ಹೆಸರು ದುರ್ಬಳಕೆ : ಸಚಿವ ಡಿ.ಸುಧಾಕರ್

ಚಿತ್ರದುರ್ಗ,ಡಿ.31- ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸರ್ಕಾರವು ರಾಜಕೀಯ ಲಾಭಕ್ಕಾಗಿ ಪುಲ್ವಾಮಾ ಘಟನೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿರುವ ಸಚಿವ ಡಿ.ಸುಧಾಕರ್ ಅವರು, ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನ ಮಂದಿರದ ಉದ್ಘಾಟನೆಯೊಂದಿಗೆ ಇದೇ ತಂತ್ರವನ್ನು ಬಳಸುತ್ತಿದೆ ಎಂದು ದೂರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಗಳಿಸಲು ಬಿಜೆಪಿ ಸರ್ಕಾರ ಪುಲ್ವಾಮಾ ದಾಳಿಯನ್ನು ಬಳಸಿಕೊಂಡಿದ್ದು, ಈ ಬಾರಿ ರಾಮನ ಫೋಟೋ ಹಿಡಿದಿದೆ ಎಂದು ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಒಂದು ಸ್ಟಂಟ್, ಜನರು ಮೂರ್ಖರಲ್ಲ, ನಾವು ಎರಡು ಬಾರಿ ಮೂರ್ಖರಾಗಿದ್ದೇವೆ, ಮೂರನೇ ಬಾರಿಗೆ ಮೋಸ ಹೋಗುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಮುಂಬೈನಲ್ಲಿ 2.4 ಕೋಟಿ ರೂ ಮೌಲ್ಯದ ಕಳ್ಳಸಾಗಣೆ ಸಿಗರೇಟ್ ದಾಸ್ತಾನು ವಶಕ್ಕೆ

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿರುವುದು ನಿಜ, ನಾನು ಮತ್ತು ಶಾಸಕ ರಘುಮೂರ್ತಿ ರಾಮಮಂದಿರಕ್ಕೆ ಹಣ ನೀಡಿದ್ದೆವು, ಈ ಹಿಂದೆಯೂ ಇಟ್ಟಿಗೆ ನೀಡಿದ್ದೇವೆ. ಶ್ರೀರಾಮ ಎಲ್ಲರಿಗೂ ದೇವರು ಎಂದು ಒತ್ತಿ ಹೇಳಿದ ಸುಧಾಕರ್, ಚುನಾವಣಾ ಸಮಯದಲ್ಲಿ ದೇವಸ್ಥಾನದ ಉದ್ಘಾಟನೆಯನ್ನು ಗಿಮಿಕ್ ಎಂದು ಜರಿದಿದ್ದಾರೆ.

ಭಾರತದ ಧಾರ್ಮಿಕ ನಂಬಿಕೆಗಳನ್ನು ಬಿಜೆಪಿ ಮತ ಸೆಳೆಯಲು ಬಳಸುತ್ತಿದೆ. ಕಳೆದ ಚುನಾವಣೆಯಲ್ಲಿ ರಾಮಮಂದಿರ ಎಲ್ಲಿತ್ತು? ಎಂದು ಸುಧಾಕರ್ ಪ್ರಶ್ನಿಸಿದರು.

RELATED ARTICLES

Latest News