Friday, November 22, 2024
Homeಮನರಂಜನೆಕಾಟೇರನ ಆಕ್ರೋಶಕ್ಕೆ ಬಾಕ್ಸ್ ಆಫೀಸ್ ಪೀಸ್ ಪೀಸ್

ಕಾಟೇರನ ಆಕ್ರೋಶಕ್ಕೆ ಬಾಕ್ಸ್ ಆಫೀಸ್ ಪೀಸ್ ಪೀಸ್

ಒಂದಷ್ಟು ಹಿರಿಯ ಜೀವಗಳು, ಪತ್ರಕರ್ತರು, ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಈಗಿನ ಚಿತ್ರಗಳನ್ನು ನೋಡಿದಾಗ ಡಾ. ರಾಜಕುಮಾರ್ ಕಾಲದ ಸಿನಿಮಾಗಳು ಈಗ ಬರುವುದಿಲ್ಲ ಬಿಡಿ. ಆಗಿನ ಜಮಾನವೇ ಬೇರೆ. ಚಿತ್ರ ನೋಡುತ್ತಿದ್ದರೆ ಕಥೆ ಇಷ್ಟು ಬೇಗ ಮುಗಿದು ಹೋಯ್ತಾ ? ಎಂತಹ ಅದ್ಭುತವಾದ ಕಥೆ ಮನರಂಜನೆಯ ಜೊತೆಗೆ ಸಾಮಾಜಿಕ ಬದ್ಧತೆಯನ್ನು ತೋರುತ್ತಿದ್ದವು ಎಂದು ಪ್ರತಭಾರಿ ಹೇಳುತ್ತಿರುತ್ತಾರೆ.ಅದಕ್ಕೆ ಉದಾಹರಣೆಯಾಗಿ ಬಂಗಾರದ ಮನುಷ್ಯ ಅಂತಹ ಸಿನಿಮಾಗಳನ್ನ ತೋರಿಸುತ್ತಾರೆ. ಆ ಸಿನಿಮಾ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಎಬ್ಬಿಸಿತ್ತು. ಈಗ ಈ ವಿಷಯ ಬಂದಿರುವುದು ಕಳೆದ ವರ್ಷ, ಕಳೆದ ವಾರ ತೆರೆಕಂಡು ಪ್ರತಿಯೊಬ್ಬರನ್ನ ಸೆಳೆಯುತ್ತಿರುವ ಕಾಟೇರ ಚಿತ್ರ ಅಂತಹ ಕ್ರಾಂತಿಯ ಮನೋಭಾವವನ್ನು ಯುವ ಪೀಳಿಗೆಯಲ್ಲಿ ಮೂಡಿಸಲು ಬಂದಂತಿದೆ.

3 ಮಹತ್ವದ ಹೊಸ ಕ್ರಿಮಿನಲ್ ಕಾನೂನು ಮಸೂದೆಗಳಲ್ಲಿ ಏನಿದೆ..?

ದರ್ಶನ್ ಇಲ್ಲಿಯತನಕ ಆಕ್ಷನ್ ರೋಮ್ಯಾಂಟಿಕ್ ಪಾತ್ರೆಗಳಲ್ಲಿ ಅದ್ಭುತವಾಗಿ ನಟಿಸಿ ಅಭಿಮಾನಿಗಳ ಎದೆಯೊಳಗೆ ಎದೆಯ ಮೇಲೆ ಡಿ ಬಾಸ್ ಆಗಿ ಮುದ್ರೆ ಒತ್ತಿದ್ದಾರೆ. ಆದರೆ ಕಾಟೇರ ಚಿತ್ರ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಬೇರೆಯದ್ದೇ ತೂಕವನ್ನು ಪಡೆಯುತ್ತದೆ. ಎಲ್ಲಾ ಕ್ಯಾಟಗರಿ ಪ್ರೇಕ್ಷಕರಿಗೆ ಎಲ್ಲಾ ರೀತಿಯ ಮನರಂಜನೆಯನ್ನು ನೀಡುತ್ತದೆ. ನಿರ್ದೇಶಕ ತರುಣ್ ಸುದೀರ್ ಪ್ರಸ್ತುತ ಸಮಾಜಕ್ಕೆ ಬೇಕಾಗಿರುವ ವಸ್ತುವನ್ನು ಅದ್ಭುತವಾಗಿ ಸಿಂಗರಿಸಿ ದೊಡ್ಡ ಮಟ್ಟದಲ್ಲಿ ಸಂದೇಶವನ್ನು ತಂದು ಯುವ ಮನಗಳಲ್ಲಿ ತುಂಬುವ ಪ್ರಯತ್ನ ಮಾಡಿದ್ದಾರೆ. 70 -80 ರ ಕಾಲಘಟ್ಟದ ಕಥೆಗೆ ಪ್ರಸ್ತುತತೆಯ ಅನಿವಾರ್ಯತೆಯನ್ನು ಮಿಳಿತ ಮಾಡಿದ್ದಾರೆ.

ಇಂದಿರಾ ಗಾಂಧಿ ತಂದ ಉಳುವವನೆ ಭೂಮಿಯ ಒಡೆಯ ಕಾಯ್ದೆಯನ್ನು ದೇವರಾಜ ಅರಸು ಕಠಿಣವಾಗಿ ಜಾರಿಗೆ ತಂದಾಗ, ಜಮೀನ್ದಾರರು ನೂರಾರು ಎಕರೆಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾದಾಗ, ಬಡವರಿಗೆ ಮತ್ತು ಶ್ರೀಮಂತರಿಗೆ ನಡೆಯುವ ವರ್ಗ ಸಂದರ್ಶ ಮತ್ತು ಜಾತಿ ಸಂಘರ್ಷ ಕಥೆಯನ್ನು ಗಟ್ಟಿಯಾಗಿ ಆವರಿಸಿವೆ.

107 ತಲೆ ಬುರುಡೆಗಳು ಉತ್ಕನನದ ರಹಸ್ಯದಿಂದ ಶುರುವಾಗುವ ಚಿತ್ರ, ಹೊಲೆಮಾರಿ ಎಂಬ ಅದ್ಭುತ ಕಲ್ಪನೆ, ಇದರ ಸುಳಿಯಲಿ ಬಡವರನ್ನ, ಕೆಳ ಜಾತಿಯವರನ್ನು ಸಿಲುಕಿಸಿ ಬಂಡಾಯದ ಬಿಸಿಯನ್ನ ನೆಲಮಟ್ಟದಲ್ಲಿ ತುಳಿಯಬೇಕೆಂಬ ಜಮೀನ್ದಾರಿ ವ್ಯವಸ್ಥೆ, ಕೆಳ ಜಾತಿಯ ನೆರಳು ಬಿದ್ದರೆ ತಕ್ಷಣ ಸ್ನಾನ ಮಾಡಿಕೊಳ್ಳುವ ಬ್ರಾಹ್ಮಣನ ಮಗಳ ಕುಲುಮೆ ಕೆಲಸ ಮಾಡುವವನೊಂದಿಗನ ಪ್ರೀತಿ, ಮರ್ಯಾದೆ ಹತ್ಯೆ, ದಬ್ಬಾಳಿಕೆಗೆ ಸಿಕ್ಕಿ ಎಷ್ಟೇ ನಲುಗಿದರು ನಮ್ಮ ಹಕ್ಕುಗಳನ್ನು ನಾವು ಪಡೆದೆ ತೀರಬೇಕು ಎಂಬ ಬಡವರ ಕೂಗು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಕಾರಣವಾಗಿ ಕಾಟೇರನ ಇಂದಿನ ವಿಜಯಕ್ಕೆ ಕಾರಣವಾಗಿದೆ.

ಊರಿಗೆಲ್ಲ ಕೃಷಿ ಉಪಕರಣಗಳನ್ನು ಮಾಡಿಕೊಡುವ ಕುಲುಮೆ ಕೆಲಸಗಾರನಾಗಿ ದರ್ಶನ್, ತಾನು ಮಾಡಿದ ಕತ್ತಿ ಕುಡುಗೋಲನ್ನು ಹಿಡಿದು ಜಮೀನ್ದಾರು ವ್ಯವಸ್ಥೆಯ ವಿರುದ್ಧ ಹೋರಾಡುವ ಪರಿ ಹಿಂದಿನ ಚಿತ್ರಗಳಲ್ಲಿ ಹಿಡಿದ ಲಾಂಗಿನ ಮಹತ್ವಕ್ಕಿಂತ ಹೆಚ್ಚಿನದ್ದು. ದಿಮುಖ ಪಾತ್ರವನ್ನು ಮಾಡಿರುವ ಇವರನ್ನು ಅಭಿಮಾನಿಗಳ ಶಿಲ್ಲೆ ಚಪ್ಪಾಳೆಗಳಿಂದ ಸ್ವಾಗತಿಸುತ್ತಾರೆ. ಗಡ್ಡ ದಾರಿಯಾಗಿ ಮಾಡಿರುವ ಅಭಿನಯಕ್ಕೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಯಾಕೆ ಈ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಬರಬಾರದೆಂಬದು. ಅಷ್ಟರಮಟ್ಟಿಗೆ ತನ್ನ ಅಭಿನಯದಲ್ಲಿ ಪ್ರೌಢತೆಯನ್ನು ಮೆರೆದಿದ್ದಾರೆ ದರ್ಶನ್. ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ನಾಯಕಿ ಪಾತ್ರದಲ್ಲಿ ಮಾಲಾಶ್ರೀ ಪುತ್ರಿ ಆರಾಧನಾ ಮೊದಲ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅದೇ ರೀತಿ ಶೃತಿ ಬಿರಾದಾರ್, ಕುಮಾರ್ ಗೋವಿಂದ್, ವಿನೋದ್ ಆಳ್ವ, ಜಗಪತಿ ಬಾಬು ಇವರ ಅಭಿನಯ ಇಡೀ ಸಿನಿಮಾಕ್ಕೆ ಮಹತ್ವವನ್ನು ತಂದು ಕೊಟ್ಟಿದೆ

ಕಥೆ ಸಂಪೂರ್ಣ ಸಾಮಾಜಿಕ ಬದ್ಧತೆಯುಳ್ಳದ್ದು. ಇದನ್ನೇ ಪರದೆಯ ಮೇಲೆ ತೋರಿಸುವ ಧೈರ್ಯ ನಿರ್ಮಾಪಕನಿಗಿರಬೇಕಾಗುತ್ತದೆ ಅಂತಹ ಗುಂಡಿಗೆಯನ್ನು ಮೆರೆದಿರುವುದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ಸಲ್ಲುತ್ತದೆ. ಕಾಟೇರ ಚಿತ್ರಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಡೈಲಾಗ್ಸ್. ಪ್ರತಿಯೊಂದು ಮಾತು, ಪ್ರತಿಯೊಂದು ವಾಕ್ಯ, ಪ್ರತಿಯೊಂದು ದೃಶ್ಯದಲ್ಲೂ ಅದು ರಾರಾಜಿಸಿದೆ ಅದಕ್ಕೆ ಕಾರಣ ಮಾಸ್ತಿಯ ಮೊನಚಾದ ಸಂಭಾಷಣೆ. ವಿ ಹರಿಕೃಷ್ಣ ಅವರ ಸಾಂಗ್ ಸಂಗೀತ ಸಂಯೋಜನೆ ಪ್ರತಿಯೊಂದು ಹಾಡಲ್ಲು ಎದ್ದು ಕಾಣುತ್ತದೆ.

ಈಗಿನ ಸಿನಿಮಾಗಳಲ್ಲಿ ಸೋಶಿಯಲ್ ಎಲಿಮೆಂಟ್ಸ್ ಇಲ್ಲ, ಮನರಂಜನೆ ಇಲ್ಲ, ಕಥೆ ಚೆನ್ನಾಗಿಲ್ಲ, ತೆಲುಗು ತಮಿಳು ಹಿಂದಿ ಚಿತ್ರಗಳಂತೆ ಕ್ವಾಲಿಟಿ ಇಲ್ಲ. ಹೀರೋ ಚೆನ್ನಾಗಿಲ್ಲ, ಹೀರೋಯಿನ್ ಚೆನ್ನಾಗಿಲ್ಲ. ಬೇರೆ ಸಿನಿಮಾಗಳ ರೇಂಜೇ ಬೇರೆ ಅಂತ ಮನೆಯಲ್ಲೇ ಕೂತು ಮಾತನಾಡುವ ಮಂದಿ ಒಂದು ಬಾರಿ ಕಾಟಿರ ದರ್ಶನ ಮಾಡಿ ಬನ್ನಿ. ಆಮೇಲೆ ಮಾತನಾಡಿ.ಯಾಕಂದ್ರೇ ಈಗಾಗಲೇ 60 ಕೋಟಿಗಿಂತಲೂ ಹೆಚ್ಚು ಹಣ ಬಾಚಿಕೊಂಡಿದೆ.

RELATED ARTICLES

Latest News