Monday, January 13, 2025
Homeರಾಷ್ಟ್ರೀಯ | Nationalಗಣರಾಜ್ಯೋತ್ಸವ ಟ್ಯಾಬ್ಲೋ ಪಾಲ್ಗೊಳ್ಳುವಿಕೆ ಬಗ್ಗೆ ತಾರತಮ್ಯ ಮಾಡಿಲ್ಲ

ಗಣರಾಜ್ಯೋತ್ಸವ ಟ್ಯಾಬ್ಲೋ ಪಾಲ್ಗೊಳ್ಳುವಿಕೆ ಬಗ್ಗೆ ತಾರತಮ್ಯ ಮಾಡಿಲ್ಲ

ನವದೆಹಲಿ,ಜ.1-ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳದಿರುವಂತೆ ಪಂಜಾಬ್ ಮತ್ತು ದೆಹಲಿಯ ಟ್ಯಾಬ್ಲೋಗಳನ್ನು ತಡೆಹಿಡಿದಿರುವ ಕ್ರಮ ತಾರತಮ್ಯದಿಂದ ಕೂಡಿದೆ ಎಂಬ ಆರೋಪವನ್ನು ರಕ್ಷಣಾ ಸಚಿವಾಲಯ ನಿರಾಕರಿಸಿದೆ.
ದೆಹಲಿ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಿಂದ ಗಣರಾಜ್ಯೋತ್ಸವ 2024 ರ ಟ್ಯಾಬ್ಲೋಗಳನ್ನು ತಿರಸ್ಕರಿಸಿದ ನಂತರ ಕೇಂದ್ರವು ತಾರತಮ್ಯದ ಆರೋಪಗಳನ್ನು ತಳ್ಳಿಹಾಕಿದೆ, ಈ ವರ್ಷದ ಸಂಭ್ರಮಾಚರಣೆಯ ಮೆರವಣಿಗೆಯ ವಿಶಾಲ ವಿಷಯ ದೊಂದಿಗೆ ಅವು ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಪಂಜಾಬ್ ಸಿಎಂ ಭಗವಂತ್ ಮಾನ್‍ಅವರು ಗಣರಾಜ್ಯೋತ್ಸವಕ್ಕಾಗಿ ರಾಜ್ಯದ ಟ್ಯಾಬ್ಲೋ ವಿರುದ್ಧ ಕೇಂದ್ರ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದರು. ಗಣರಾಜ್ಯೋತ್ಸವ 2024 ರ ಪರೇಡ್‍ನಲ್ಲಿ ಟ್ಯಾಬ್ಲೋಗಳ ಬಗ್ಗೆ ತರಾತಮ್ಯ ನೀತಿ ಅನುಸರಿಸಲಾಗಿದೆ ಎಂಬುದನ್ನು ನಿರಾಕರಿಸಿರುವ ರಕ್ಷಣಾ ಸಚಿವಾಲಯವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಸ್ತಾವನೆಗಳನ್ನು ವಿವಿಧ ಕೈಗಾರಿಕೆಗಳ ಕಲಾವಿದರ ತಜ್ಞ ಸಮಿತಿ ಪರಿಶೀಲಿಸಿದೆ ಮತ್ತು ಕೇಂದ್ರದಿಂದ ಯಾವುದೇ ಪಕ್ಷಪಾತವಿಲ್ಲ ಎಂದು ಹೇಳಿದೆ.

ಅಯೋಧ್ಯೆಯಲ್ಲಿ ಜೈಶ್ರೀರಾಮ್ ಘೋಷಣೆಯೊಂದಿಗೆ ಹೊಸ ವರ್ಚಾಚರಣೆ

ತಜ್ಞರ ಸಮಿತಿಯ ಮೊದಲ ಮೂರು ಸುತ್ತಿನ ಸಭೆಗಳಲ್ಲಿ ಪಂಜಾಬ್‍ನ ಟ್ಯಾಬ್ಲೋ ಪ್ರಸ್ತಾಪವನ್ನು ಪರಿಗಣಿಸಲಾಯಿತು, ಆದರೆ ಅಂತಿಮವಾಗಿ ವಿಷಯದೊಂದಿಗೆ ಹೊಂದಿಕೆಯಾಗದ ಕಾರಣ ತಿರಸ್ಕರಿಸಲಾಯಿತು. ಅದೇ ಕಾರಣಗಳಿಗಾಗಿ ಪಶ್ಚಿಮ ಬಂಗಾಳದ ಟ್ಯಾಬ್ಲೋಗಳನ್ನು ತಿರಸ್ಕರಿಸಲಾಗಿದೆ ಎಂದು ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಕೇಂದ್ರವು ಟ್ಯಾಬ್ಲೋ ಪರೀಕ್ಷೆಗಾಗಿ ತಜ್ಞರ ಸಮಿತಿಯು ಕಲೆ, ಸಂಸ್ಕøತಿ, ಚಿತ್ರಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಸಂಯೋಜನೆ, ಶಿಲ್ಪಕಲೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿನ ಗಣ್ಯ ವ್ಯಕ್ತಿಗಳನ್ನು ಒಳಗೊಂಡಿರುವ ಸಮಿತಿಯನ್ನು ಕೇಂದ್ರ ಸರ್ಕಾರ ತಿಳಿಸಿದೆ.

RELATED ARTICLES

Latest News