Monday, October 14, 2024
Homeರಾಷ್ಟ್ರೀಯ | Nationalಅಯೋಧ್ಯೆಯಲ್ಲಿ ಜೈಶ್ರೀರಾಮ್ ಘೋಷಣೆಯೊಂದಿಗೆ ಹೊಸ ವರ್ಚಾಚರಣೆ

ಅಯೋಧ್ಯೆಯಲ್ಲಿ ಜೈಶ್ರೀರಾಮ್ ಘೋಷಣೆಯೊಂದಿಗೆ ಹೊಸ ವರ್ಚಾಚರಣೆ

ಅಯೋಧ್ಯೆ, ಜ. 1 (ಪಿಟಿಐ) ಅಯೋಧ್ಯೆಯ ಪ್ರಸಿದ್ಧ ಲತಾ ಮಂಗೇಶ್ಕರ್ ಚೌಕ್‍ನಲ್ಲಿ ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಹೊಸ ವರ್ಷವನ್ನು ಆಚರಿಸಲಾಯಿತು. ಸ್ಥಳೀಯ ನಿವಾಸಿಗಳು ತಡರಾತ್ರಿ 11 ಗಂಟೆಗೆ ಐಕಾನಿಕ್ ವೃತ್ತದಲ್ಲಿ ಜಮಾಯಿಸಿ, ಗಡಿಯಾರ 12 ಗಂಟೆ ಬಾರಿಸಿದ ಕೂಡಲೆ ಜೈ ಶ್ರೀರಾಮ್ ಘೋಷಣೆ ಕೂಗುತ್ತ ಹೊಸ ವರ್ಷವನ್ನು ಬರಮಾಡಿಕೊಂಡರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆಲಿ ಕ್ಲಿಕ್ಕಿಸಿಕೊಂಡ ನಂತರ ಲತಾ ಮಂಗೇಶ್ಕರ್ ಚೌಕ ಜನರು ಸೆಲ್ಫಿ ತೆಗೆದುಕೊಳ್ಳುವ ಪ್ರಸಿದ್ದ ಸ್ಥಳವಾಗಿ ಮಾರ್ಪಡಾಗಿದೆ. ಲತಾ ಮಂಗೇಶ್ಕರ್ ಚೌಕ್ ಸೇರಿದಂತೆ ಆಯೋಧ್ಯೆಯ ಪ್ರಮುಖ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಪರೀಕ್ಷಾ ಪೇ ಚರ್ಚಾ: ನೋಂದಾಯಿಸಿಕೊಳ್ಳಲು ಜ.12ರವರೆಗೆ ಅವಕಾಶ

ನಾವು ನಮ್ಮ ಪೂಜ್ಯ ಶ್ರೀ ರಾಮನ ಪವಿತ್ರ ಜನ್ಮಸ್ಥಳದಲ್ಲಿ ಹೊಸ ವರ್ಷವನ್ನು ಆಚರಿಸಲು ಬಂದಿದ್ದೇವೆ. ಅದೇ ರೀತಿ ನಾವು ಪವಿತ್ರ ಸ್ನಾನ ಮಾಡಲು ಸರಯೂ ನದಿಗೆ ಹೋಗುತ್ತೇವೆ, ಶಿವ ದೇವಾಲಯಕ್ಕೆ ಭೇಟಿ ನೀಡುತ್ತೇವೆ ಮತ್ತು ನಂತರ ರಾಮಜನ್ಮಭೂಮಿಯಲ್ಲಿ ರಾಮ್ ಲಲ್ಲಾ ಅವರ ಆಶೀರ್ವಾದ ಪಡೆಯುತ್ತೇವೆ ಎಂದು ಕೆಲವರು ತಿಳಿಸಿದರು.

ನಯಾ ಘಾಟ್ ಬಳಿಯ ಲತಾ ಮಂಗೇಶ್ಕರ್ ಚೌಕ್‍ನ ಹೊರವಲಯದಲ್ಲಿ ಹಲವಾರು ಜನರು, ಮುಖ್ಯವಾಗಿ ಯುವಕರು ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿತು.

RELATED ARTICLES

Latest News