Monday, May 6, 2024
Homeರಾಷ್ಟ್ರೀಯಪರೀಕ್ಷಾ ಪೇ ಚರ್ಚಾ: ನೋಂದಾಯಿಸಿಕೊಳ್ಳಲು ಜ.12ರವರೆಗೆ ಅವಕಾಶ

ಪರೀಕ್ಷಾ ಪೇ ಚರ್ಚಾ: ನೋಂದಾಯಿಸಿಕೊಳ್ಳಲು ಜ.12ರವರೆಗೆ ಅವಕಾಶ

ನವದೆಹಲಿ,ಜ.1-ಪರೀಕ್ಷಾ ಪೇ ಚರ್ಚಾದ ಏಳನೇ ಆವೃತ್ತಿಯ ನೋಂದಣಿಗಳು ಆರಂಭಗೊಂಡಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವ ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಬಹುದಾಗಿದೆ.

ಜ.12ರವರೆಗೆ ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷೆಯ ಒತ್ತಡಕ್ಕೆ ವಿದಾಯ ಹೇಳಲು ಮತ್ತು ಯಶಸ್ಸಿನ ಸೂರ್ತಿ ತುಂಬುವ ಉದ್ದೇಶದಿಂದ ಪರೀಕ್ಷಾ ಪೇ ಚರ್ಚಾ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವಾಲಯವು ತಿಳಿಸಿದೆ. ಚರ್ಚೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದವನ್ನು ನಡೆಸಲಾಗುತ್ತದೆ ಮತ್ತು ಅವರಿಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಮತ್ತು ಸಂವಾದಿಸಲು ಅವಕಾಶವನ್ನು ನೀಡಲಾಗುತ್ತದೆ.

ಹೊಸ ವರ್ಷದ ದಿನವೇ ಸಿಹಿ ಸುದ್ದಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಥಿ (ಸ್ವಯಂ ಭಾಗವಹಿಸುವಿಕೆ) ಮತ್ತು ಶಿಕ್ಷಕರ ಲಾಗಿನ್ ಮೂಲಕ ಭಾಗವಹಿಸಬಹುದಾಗಿದೆ. 6 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಮುಕ್ತವಾಗಿದೆ.

ಏತನ್ಮಧ್ಯೆ, ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳನ್ನು ಪ್ರಧಾನ ಮಂತ್ರಿಗೆ ಗರಿಷ್ಠ 500 ಅಕ್ಷರಗಳಲ್ಲಿ ಸಲ್ಲಿಸಬಹುದು. ಪಾಲಕರು ಮತ್ತು ಶಿಕ್ಷಕರು ಕೂಡ ಭಾಗವಹಿಸಬಹುದು ಮತ್ತು ಅವರಿಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಆನ್‍ಲೈನ್ ಚಟುವಟಿಕೆಗಳಲ್ಲಿ ತಮ್ಮ ನಮೂದುಗಳನ್ನು ಸಲ್ಲಿಸಬಹುದು.

ಪರೀಕ್ಷಾ ಪೇ ಚರ್ಚಾವು ಯುವಜನರಿಗೆ ಒತ್ತಡ-ಮುಕ್ತ ವಾತಾವರಣವನ್ನು ಸೃಷ್ಟಿಸಲು ಪ್ರಧಾನಿ ಮೋದಿ ನೇತೃತ್ವದ ಎಕ್ಸಾಮ್ ವಾರಿಯರ್ಸ್ ಎಂಬ ಬೃಹತ್ ಆಂದೋಲನದ ಭಾಗವಾಗಿದೆ. ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಬೋರ್ಡ್ ಪರೀಕ್ಷೆಗಳು ಮತ್ತು ಪ್ರವೇಶ ಪರೀಕ್ಷೆಗಳನ್ನು ಒತ್ತಡ ರಹಿತ ರೀತಿಯಲ್ಲಿ ಭೇದಿಸಲು ಸಲಹೆಗಳನ್ನು ನೀಡಲಿದ್ದಾರೆ.

ಸ್ಪರ್ಧೆಗಳ ಮೂಲಕ ಆಯ್ಕೆಯಾದ ಸುಮಾರು 2050 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಶಿಕ್ಷಣ ಸಚಿವಾಲಯದಿಂದ ಪಿಪಿಸಿ ಕಿಟ್‍ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

RELATED ARTICLES

Latest News