Tuesday, May 7, 2024
Homeರಾಷ್ಟ್ರೀಯವರ್ಷದ ಮೊದಲ ದಿನವೇ ಇಸ್ರೋ ಯಶಸ್ಸು : ಕಪ್ಪುಕುಳಿಗಳ ಅಧ್ಯಯನಕ್ಕೆ ಹೊರಟ ಎಕ್ಸ್‌ಪೋಸ್ಯಾಟ್‌

ವರ್ಷದ ಮೊದಲ ದಿನವೇ ಇಸ್ರೋ ಯಶಸ್ಸು : ಕಪ್ಪುಕುಳಿಗಳ ಅಧ್ಯಯನಕ್ಕೆ ಹೊರಟ ಎಕ್ಸ್‌ಪೋಸ್ಯಾಟ್‌

ಶ್ರೀಹರಿಕೋಟಾ,ಜ.1- ಹೊಸ ವರ್ಷದ ಮೊದಲ ದಿನವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ಸ್ಟಾರ್‍ಗಳ ಬಗ್ಗೆ ಅಧ್ಯಯನ ನಡೆಸಲು ಎಕ್ಸ್ – ರೇ ಪೋಲಾಮೀಟರ್ ಉಪಗ್ರಹವನ್ನು (ಎಕ್ಸ್ಪೋಸ್ಯಾಟ್) ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಚಂದ್ರಯಾನ-3, ಆದಿತ್ಯ ಎಲ್-1 ಯಶಸ್ಸಿನ ಬೆನ್ನಿಗೆ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಸಂಶೋಧನೆಗೆ ಮುಂದಾಗಿರುವ ಇಸ್ರೋದ ಈ ಮಹತ್ತರ ಪ್ರಯತ್ನದಿಂದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಬಳಿಕ ಕಪ್ಪು ಕುಳಿಗಳ ಅಧ್ಯಯನಕ್ಕೆ ಮುಂದಾದ ಎರಡನೇ ದೇಶ ಎಂಬ ಶ್ರೇಯ ಭಾರತಕ್ಕೆ ಸೇರಿದೆ. ಬ್ರಹ್ಮಾಂಡದ ಕುರಿತು ಶತಮಾನಗಳಿಂದ ಇರುವ ನಿಗೂಢತೆಯನ್ನು ಭೇದಿಸುವ ಹೊಸ ಯೋಜನೆಯೊಂದಿಗೆ ಇಸ್ರೋ ಮತ್ತೆ ಜಗತ್ತಿನ ಗಮನ ಸೆಳೆದಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಗಿದ್ದು, ಇದರ ಜೊತೆಗೆ ಪಿಎಸ್‍ಎಲ್‍ವಿ ಇತರ ಹತ್ತು ಉಪಗ್ರಹಗಳನ್ನು ಹೊತ್ತೊಯ್ದಿದೆ.
ಈ ಉಪಗ್ರಹಗಳನ್ನು ಸ್ಟಾರ್ಟ್‍ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಾಣ ಮಾಡಿದ್ದು, ಪಲ್ಸಾರ, ಕಪ್ಪು ಕುಳಿ ,ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್‍ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸೂಪರ್‍ನೋವಾ ಅವಶೇಷಗಳ ಅಧ್ಯಯನ ನಡೆಸಲಿದೆ. ಈ ಮಿಷನ್ ಕನಿಷ್ಠ ಐದು ವರ್ಷಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ.

ಪಿಒಎಲ್‍ಐಎಕ್ಸ್(ಎಕ್ಸ್-ರೇಗಳಲ್ಲಿ ಪೋಲಾರಿಮೀಟರ್ ಉಪಕರಣ) ಮತ್ತು ಎಕ್ಸ್‍ಪಿಇಸಿಟಿ(ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್ ಪೇಲೋಡ್‍ಗಳಾಗಿವೆ) ಪಿಒಎಲ್‍ಐಎಕ್ಸ್‍ನ್ನು ರಾಮನ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದೆ. ಎಕ್ಸ್‍ಪಿಇಸಿಟಿನ್ನು ಬೆಂಗಳೂರಿನ ಯುಆರೆಸ್‍ಸಿಯ ಬಾಹ್ಯಾಕಾಶ ಖಗೋಳ ವಿಜ್ಞಾನಿಗಳ ತಂಡ ಅಭಿವೃದ್ಧಿಪಡಿಸಿದೆ.

ಹೊಸ ವರ್ಷದ ದಿನವೇ ಸಿಹಿ ಸುದ್ದಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

260 ಟನ್ ತೂಕದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‍ಎಲ್ವಿ) ತನ್ನ 60ನೇ ಹಾರಾಟವನ್ನು ಆರಂಭಿಸಿತು. ಈ ರಾಕೆಟ್ ಅತ್ಯಾಧುನಿಕ ಖಗೋಳ ವೀಕ್ಷಣಾ ತಂತ್ರಜ್ಞಾನವನ್ನು ಒಳಗೊಂಡಿದ್ದು, ಇದು ಕಪ್ಪು ಕುಳಿಗಳು ಮತ್ತು ನ್ಯೂಟ್ರಾನ್ ನಕ್ಷತ್ರಗಳ ಅಧ್ಯಯನಕ್ಕೆ ಮೀಸಲಾಗಿದೆ.

ಎಕ್ಸ್ – ರೇ ಪೋಟಾನ್‍ಗಳು ಮತ್ತು ಅವುಗಳ ಧ್ರುವೀಕರಣವನ್ನು ಬಳಸಿಕೊಂಡು, ಕಪ್ಪು ಕುಳಿಗಳು ಹಾಗೂ ನ್ಯೂಟ್ರಾನ್ ಸ್ಟಾರ್‍ಗಳ ಸಮೀಪದಿಂದ ವಿಕಿರಣಗಳ ಅಧ್ಯಯನಕ್ಕೆ ಎಕ್ಸ್ಪೋ ಸ್ಯಾಟ್ ಸಹಾಯ ಮಾಡಲಿದೆ. ಇದು ಪೋಲಿಕ್ಸ್ (ಪೋಲಾರಿಮೀಟರ್ ಇನ್ಸ್ಟ್ರುಮೆಂಟ್ ಇನ್ ಎಕ್ಸ್ ರೇ) ಮತ್ತು ಎಕ್ಸ್ಪೆಕ್ಟ್ (ಎಕ್ಸ್- ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್) ಎಂಬ ಎರಡು ಪೇ ಲೋಡ್‍ಗಳನ್ನು ಕೊಂಡೊಯ್ದಿದೆ.

10 ಉಪಗ್ರಹಗಳ ಯಶಸ್ವಿ ಉಡಾವಣೆ
ಸ್ಟಾರ್ಟ್‍ಅಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ಅಭಿವೃದ್ಧಿಪಡಿಸಿರುವ ಇತರ 10 ಉಪಗ್ರಹಗಳನ್ನೂ ಈ ಪಿಎಸ್‍ಎಲ್ ಹೊತ್ತೊಯ್ದಿದೆ. ಟೇಕ್ಮೀ2ಸ್ಪೇಸ್‍ನ ರೇಡಿಯೇಶನ್ ಶೀಲ್ಡಿಂಗ್ ಎಕ್ಸ್ಪೆರಿಮೆಂಟಲ್ ಮಾಡ್ಯೂಲ್ , ಮಹಿಳೆಯರಿಗಾಗಿ ಎಲ್ಬಿಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಯಾರಿಸಲಾಗಿರುವ ವುಮೆನ್ ಇಂಜಿನಿಯರ್ಡ್ ಸ್ಯಾಟಲೈಟ್ (ವೆಸ್ಯಾಟ್), ಕೆ.ಜೆ.ಸೋಮಯ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅವರ ಬಿಲೀಫ್ಸಾ-ಟಿ0 ಹವ್ಯಾಸಿ ರೇಡಿಯೋ ಉಪಗ್ರಹ, ಇನ್ಸ್ಪೆಕ್ಟಿಟಿ ಸ್ಪೇಸ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‍ನ ಗ್ರೀನ್ ಇಂಪಲ್ಸ್ ಟ್ರಾನ್ಸ್ಮಿಟರ್ , ಧ್ರುವಾ ಸ್ಪೇಸ್ ಪ್ರೈವೇಟ್ ಲಿಮಿಟೆಡ್‍ನಿಂದ ಲಾಂಚಿಂಗ್ ಎಸ್ಪಿಎಡಿಷನ್ಸ್ ಫಾರ್ ಅಸ್ಪಿರಿಂಗ್ ಟೆಕ್ನಾಲಜೀಸ್ -ಟೆಕ್ನಾಲಜಿ ಡೆಮೋನ್ಸ್ಟ್ರಾಟೋರ್, ಬೆಲಟ್ರಿಕ್ಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ನಿಂದ ರುದ್ರ 0.3 ಮತ್ತು ಅರ್ಕಾ-200, ಪಿಆರೆಲ್‍ನಿಂದ ಡಸ್ಟ್ ಎಕ್ಸ್ಪರಿಮೆಂಟ್, ವಿಎಸ್‍ಎಸ್ಸಿ ಮ್ತತು ಇಸ್ರೋದಿಂದ ಇಸ್ರೋ ಫುಯೆಲ್ ಸೆಲ್ ಪವರ್ ಸಿಸ್ಟಮ್ ಹಾಗೂ ಹೈ ಎನರ್ಜಿ ಸೆಬ್ ಉಪಗ್ರಹಗಳನ್ನು ಪಿಎಸ್‍ಎಲ್ವಿ ಹೊತ್ತೊಯ್ದಿದೆ.

ಏನಿದು ಎಕ್ಸ್ಪೋಸ್ಯಾಟ್?
ಎಕ್ಸ್ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ತನಿಖೆ ಮಾಡಲು ವಿನ್ಯಾಸಗೊಳಿಸಲಾಗಿದ್ದು, 2021ರಲ್ಲಿ ಬಿಡುಗಡೆಯಾದ ನಾಸಾದ ಇಮೇಜಿಂಗ್ ಎಕ್ಸ್-ರೇ ಪೊಲರಿಮೆಟ್ರಿ ಎಕ್ಸ್‍ಪಿಎಲ್‍ರ್ ನಂತರ ಈ ಮಿಷನ್ ಭಾರತದ ಮೊದಲ ಮೀಸಲಾದ ಪೋಲರಿಮೀಟರ್ ಮಿಷನ್ ಮಾತ್ರವಲ್ಲದೆ ವಿಶ್ವದ ಎರಡನೆಯ ಉಪಗ್ರಹವಾಗಿದೆ.

ಎಕ್ಸ್ಪೋಸ್ಯಾಟ್ ವಿಶೇಷತೆಗಳೇನು?:
ಯು ಆರ್ ರಾವ್ ಉಪಗ್ರಹ ಕೇಂದ್ರದ ಸಹಯೋಗದೊಂದಿಗೆ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ (ಆರಾರೈ) ಅಭಿವೃದ್ಧಿಪಡಿಸಿದ ಈ ಉಪಕರಣಗಳು ಆಕಾಶ ವಸ್ತುಗಳ ಭೌತಶಾಸ್ತ್ರದ ಬಗ್ಗೆ ಹೊಸ ಒಳನೋಟಗಳನ್ನು ನೀಡುವ ನಿರೀಕ್ಷೆಯಿದೆ. ಕ್ಷ ಕಿರಣಗಳ ಧ್ರುವೀಕರಣವನ್ನು ಅಳೆಯುವ ಮೂಲಕ, ವಿಜ್ಞಾನಿಗಳು ಈ ದೂರದ ಮೂಲಗಳ ರೇಖಾಗಣಿತ ಮತ್ತು ಹೊರಸೂಸುವಿಕೆಯ ಕಾರ್ಯವಿಧಾನಗಳ ಬಗ್ಗೆ ನಿರ್ಣಾಯಕ ಮಾಹಿತಿಯನ್ನು ಊಹಿಸಬಹುದಾಗಿದೆ.

ಅತ್ಯಾಚಾರ ಆರೋಪ: ಬಿಜೆಪಿಯಿಂದ ಕಮಲ್‍ರಾವತ್ ಉಚ್ಛಾಟನೆ

ಏನಿದರ ಕೆಲಸ?:
ಪಲ್ಸಾರ, ಕಪ್ಪು ಕುಳಿ ಎಕ್ಸ್-ರೇ ಬೈನರಿಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್ಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಉಷ್ಣವಲ್ಲದ ಸೂಪರ್ನೋವಾ ಅವಶೇಷಗಳನ್ನು ಒಳಗೊಂಡಂತೆ ವಿಶ್ವದಲ್ಲಿ ತಿಳಿದಿರುವ 50 ಪ್ರಕಾಶಮಾನವಾದ ಮೂಲಗಳನ್ನು ಅಧ್ಯಯನ ಮಾಡುವ ಗುರಿಯನ್ನು ಎಕ್ಸ್ಪೋಸ್ಯಾಟ್ ಮಿಷನ್ ಹೊಂದಿದೆ. ಉಪಗ್ರಹವನ್ನು 500-700 ಕಿಮೀ ವೃತ್ತಾಕಾರದ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುವುದು, ಕನಿಷ್ಠ ಐದು ವರ್ಷಗಳ ಮಿಷನ್ ಸಕ್ರಿಯವಾಗಿರಲಿದೆ. ಕಪ್ಪು ಕುಳಿಗಳ ಕುರಿತು ಇದು ಅಧ್ಯಯನ ಮಾಡಲಿದೆ.

RELATED ARTICLES

Latest News