Thursday, February 22, 2024
Homeರಾಷ್ಟ್ರೀಯಅತ್ಯಾಚಾರ ಆರೋಪ: ಬಿಜೆಪಿಯಿಂದ ಕಮಲ್‍ರಾವತ್ ಉಚ್ಛಾಟನೆ

ಅತ್ಯಾಚಾರ ಆರೋಪ: ಬಿಜೆಪಿಯಿಂದ ಕಮಲ್‍ರಾವತ್ ಉಚ್ಛಾಟನೆ

ಚಂಪಾವತ್,ಜ.1-ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ಉಚ್ಚಾಟಿತ ನಾಯಕ ಕಮಲ್ ರಾವತ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾವತ್ ಅವರನ್ನು ಚಂಪಾವತ್‍ನಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಯೋಗೇಶ್ ಉಪಾಧ್ಯಾಯ ತಿಳಿಸಿದ್ದಾರೆ.

ನಿತೀಶ್‍ಕುಮಾರ್ ಆಸ್ತಿ ಮೌಲ್ಯ 1.64 ಕೋಟಿ

ಈ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ಪ್ರತಿಕೃತಿ ದಹಿಸಿತು. ಪೊಲೀಸರು ರಾವತ್ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾವತ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿಯ ಚಂಪಾವತ್ ಜಿಲ್ಲಾಧ್ಯಕ್ಷ ನಿರ್ಮಲ್ ಮೆಹ್ರಾ ಹೇಳಿದ್ದಾರೆ.

RELATED ARTICLES

Latest News