Sunday, May 19, 2024
Homeರಾಷ್ಟ್ರೀಯ5 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ

5 ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ

ಪಾಟ್ನಾ, ಮೇ6- ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡಿರುವುದನ್ನೇ ಕೇಳಿದ್ದೇವೆ. ಆದರೆ ಬಿಹಾರದ ಪಾಟ್ನಾದಲ್ಲಿ ಮಹಿಳೆಯೊಬ್ಬರು ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಜನಿಸಿದ ಅಷ್ಟೂ ಮಕ್ಕಳು ಹೆಣ್ಣು ಶಿಶುಗಳಾಗಿವೆ.

ಠಾಕೂರ್‌ಗಂಜ್‌ ಕನಕಪುರ ಪಂಚಾಯತ್‌ನ ಜಲ್ಮಿಲಿಕ್‌ ಗ್ರಾಮದ ನಿವಾಸಿ ತಾಹಿರಾ ಬೇಗಂ(20) ಎಂಬ ಮಹಿಳೆ ಬರೋಬ್ಬರಿ ಐದು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಶಿಶುಗಳು 1 ಕೆಜಿಗಿಂತ ಕಡಿಮೆ ಹೊಂದಿವೆ. ಸದ್ಯ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಅಂದಹಾಗೆ ಈ ಬಾರಿ ತಾಹಿರಾ ಎರಡನೇ ಬಾರಿಗೆ ತಾಯಿಯಾಗಿದ್ದು, ಈಗಾಗಲೇ ಮೂರು ವರ್ಷದ ಮಗ ಇದ್ದಾನೆ. ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.

ಕಿಶನ್‌ಗಂಜ್‌ ಜಿಲ್ಲೆಯ ಪೋಥಿಯಾ ಬ್ಲಾಕ್‌ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾಹಿರಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಬಳಿಕ ವೈದ್ಯರ ಬಳಿ ತಪಾಸಣೆಗೆ ಹೋದಾಗ ನಾಲ್ಕಲ್ಲ ಐದು ಮಕ್ಕಳಿರುವುದು ಗೊತ್ತಾಯಿತು.

ಈ ಪ್ರಕರಣ ಸವಾಲಿನದ್ದಾಗಿದ್ದು, ಇಂತಹ ಪ್ರಕರಣಗಳು ತೀರಾ ವಿರಳ. ಅಚ್ಚರಿಯ ವಿಷಯ ಎಂದರೆ ಎಲ್ಲಾ ಮಕ್ಕಳು ಶಸ್ತ್ರ ಚಿಕಿತ್ಸೆ ಇಲ್ಲದೆ ಸಾಮಾನ್ಯ ಹೆರಿಗೆಯ ಮೂಲಕ ಜನಿಸಿವೆ ಎಂದು ಇವೈದ್ಯೆ ಡಾ.ಫರ್ಜಾನಾ ಹೇಳಿದ್ದಾರೆ.

RELATED ARTICLES

Latest News