ಅಯೋಧ್ಯೆ,ಜ.1- ಹಿಂದೂಗಳ ಆರಾಧ್ಯದೈವ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ , ದೇವಸ್ಥಾನಕ್ಕೆ ಬಾಂಬ್ ಹಾಕುವುದಾಗಿ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶವೊಂದು ಬಂದಿದೆ. ಬಾಂಬ್ ದಾಳಿ ಬೆದರಿಕೆ ಸಂದೇಶದ ಇ-ಮೇಲ್‍ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಎಸ್ಟಿಎಫ್ ಎಡಿಜಿ
ಅಮಿತಾಬ್ ಯಶ್ ಅವರ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವ್ಯಕ್ತಿ, ತನ್ನನ್ನು ಜುಬೈರ್ ಹುಸೇನ್ ಖಾನ್ ಎಂದು ಗುರುತಿಸಿಕೊಂಡಿದ್ದು, ಐಎಸ್‍ಐ ಜತೆ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾನೆ. ಬೆದರಿಕೆ ಸಂದೇಶ ಕಳುಹಿಸಿದವರು ಐಎಸ್‍ಐ ಜೊತೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ಪೊಲೀಸರು ಕೂಡಲೇ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದರಲ್ಲಿ ಆಕ್ಷೇಪಾರ್ಹ ಭಾಷೆಯನ್ನು ಬಳಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕಳುಹಿಸುವವರು ಜುಬೇರ್ ಹುಸೇನ್ ಖಾನ್ ಎಂದು ಬರೆದಿದ್ದಾರೆ. ಈ ಅಪರಿಚಿತ ಸಂದೇಶದಾರ ದೇವಸ್ಥಾನಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಸ್ವತಃ ದೇವೇಂದ್ರ ತಿವಾರಿಗೂ ಬೆದರಿಕೆ ಹಾಕಿದ್ದಾನೆ.
ನಾನೂ ಹಿಂದೂ ಆದರೆ, ಬಿಜೆಪಿಯವರಂತೆ ಪ್ರದರ್ಶಿಸುವುದಿಲ್ಲ; ರಂಜನ್ ಸಿಂಗ್
ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರು ತನಿಖೆಯ ಭರವಸೆ ಮಾತ್ರ ನೀಡಿದ್ದರು. ಬಳಿಕ ಮೌನ ವಹಿಸಿದ್ದರು ಎಂದು ಎಂದು ದೇವೇಂದ್ರ ತಿವಾರಿ ಆರೋಪಿಸಿದ್ದಾರೆ.
ಇದೀಗ ರಾಮ ಮಂದಿರ, ಸಿಎಂ ಅವರನ್ನೂ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಡಿಸೆಂಬರ್ 27ರ ಸಂಜೆ ದೇವೇಂದ್ರ ಅವರ ಮೇಲ್ ಐಡಿಗೆ ಬೆದರಿಕೆಯ ಇ-ಮೇಲ್ ಸಂದೇಶ ಬಂದಿತ್ತು. ತನಗೆ ಇಂತಹ ಬೆದರಿಕೆಗಳು ಬರುತ್ತಿರುವುದು ಇದೇ ಮೊದಲಲ್ಲ. ಹಿಂದಿನ ಸಂದರ್ಭದಲ್ಲಿ ಎಫ್‍ಐಆರ್ ದಾಖಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಖಚಿತವಾದ ಕ್ರಮಗಳನ್ನು ತೆಗೆದುಕೊಳ್ಳದೆ ಭರವಸೆಯನ್ನು ಮಾತ್ರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ಶಂಕುಸ್ಥಾಪನೆ ಸಂದರ್ಭದಲ್ಲಿ ಏಕತೆಗಾಗಿ ಮನವಿ ಆರೆಸ್‍ಎಸ್-ಸಂಯೋಜಿತ ಮುಸ್ಲಿಂ ರಾಷ್ಟ್ರೀಯ ಮಂಚ್ನ ಮುಖ್ಯ ಪೋಷಕರಾದ ಇಂದ್ರೇಶ್ ಕುಮಾರ್, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಮುಸ್ಲಿಮರು ಮತ್ತು ವಿವಿಧ ಧರ್ಮಗಳ ಜನರು ಶಾಂತಿಯುತವಾಗಿರಲು ಒತ್ತಾಯಿಸಿದರು.
ಗಣರಾಜ್ಯೋತ್ಸವ ಟ್ಯಾಬ್ಲೋ ಪಾಲ್ಗೊಳ್ಳುವಿಕೆ ಬಗ್ಗೆ ತಾರತಮ್ಯ ಮಾಡಿಲ್ಲ
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ನಡೆಯುವ ಪ್ರಯುಕ್ತ ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್ ಎಂಬ ಮಂತ್ರ ಪಠಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್ ಮುಖ್ಯ ಪೋಷಕ ಮತ್ತು ಆರ್‍ಎಸ್‍ಎಸ್‍ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಅವರು ಮುಸ್ಲಿಮರು ಮತ್ತು ಇತರರಿಗೆ ಕರೆ ನೀಡಿದ್ದಾರೆ.