Friday, June 21, 2024
Homeಬೆಂಗಳೂರುಉಸಿರುಗಟ್ಟಿಸಿ ತನ್ನಿಬ್ಬರು ಮಕ್ಕಳನ್ನು ಕ್ರೂರ ತಾಯಿ

ಉಸಿರುಗಟ್ಟಿಸಿ ತನ್ನಿಬ್ಬರು ಮಕ್ಕಳನ್ನು ಕ್ರೂರ ತಾಯಿ

ಬೆಂಗಳೂರು, ಏ.10- ಪತಿಯ ಮನಸ್ಥಿತಿಯಿಂದ ನೊಂದಿದ್ದ ಮಹಿಳೆ ತನ್ನಿಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಮಧ್ಯರಾತ್ರಿ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ತಾಯಿಯ ದುಡುಕಿನ ನಿರ್ಧಾರ,ಕ್ರೂರತೆಗೆ ಮೃತಪಟ್ಟ ಮಕ್ಕಳನ್ನು ಲಕ್ಷ್ಮೀ (7) ಹಾಗೂ ಗೌತಮ್(9) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂ„ಸಿದಂತೆ ಮಕ್ಕಳ ತಾಯಿ ಗಂಗಾದೇವಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಮೂಲತಃ ಆಂಧ್ರದವರಾದ ಗಂಗಾದೇವಿ ಹಾಗೂ ಗುತ್ತಿಗೆ ಆಧಾರದ ಪೌರ ಕಾರ್ಮಿಕ ನರೇಶ್ ಜೊತೆ ವಿವಾಹವಾಗಿತ್ತು.ಜಾಲಹಳ್ಳಿಯ ರಾಮ್ಭೋವಿ ಕಾಲೋನಿಯ ಮನೆಯೊಂದರಲ್ಲಿ ದಂಪತಿ ನೆಲೆಸಿದ್ದರು.

ಗಂಗಾದೇವಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಇತ್ತೀಚೆಗೆ ಸಾಂಸಾರಿಕ ಕಲಹ ಉಂಟಾಗಿತ್ತು. ಇದು ತಾರಕಕ್ಕೇರಿ ಕಳೆದ ಮಾರ್ಚ್ನಲ್ಲಿ ಪತಿ ನರೇಶ್ ತನ್ನ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆಸುತ್ತಿದ್ದಾರೆಂದು ಜಾಲಹಳ್ಳಿ ಪೊಲೀಸ್ ಠಾಣೆಗೆ ಗಂಗಾದೇವಿ ದೂರು ನೀಡಿದ್ದರು. ಈ ಸಂಬಂಧ ಪೊಕ್ಸೋ ಪ್ರಕರಣ ದಾಖಲಿಸಿದ್ದ ಪೊಲೀಸರು ನರೇಶನನ್ನು ಬಂ„ಸಿ ಜೈಲಿಗೆ ಅಟ್ಟಿದ್ದರು.

ದಿನ ಕಳೆದಂತೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು, ನಿನ್ನೆ ಮಕ್ಕಳೊಂದಿಗೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿದ್ದು, ಎಲ್ಲರೂ ರಾತ್ರಿ ,ಮಲಗಿದ್ದರು. ಅದೇನಾಯ್ತೋ ಗೊತ್ತಿಲ್ಲ. ಮಧ್ಯರಾತ್ರಿ 12.30ರ ಸಮಯದಲ್ಲಿ ಮಲಗಿದ್ದ ಇಬ್ಬರು ಮಕ್ಕಳ ಮುಖಕ್ಕೆ ದಿಂಬಿನಿಂದ ಅದಮಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಗಂಗಾದೇವಿ ನಂತರ ಪಶ್ಚಾತಾಪ ಪಟ್ಟು ಸುಮಾರು 1 ಗಂಟೆಯಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ ಗಲಾಟೆಯಾಗುತ್ತಿದೆ ಎಂದು ಹೇಳಿದ್ದಳು.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮಕ್ಕಳು ಕೊನೆಉಸಿರು ಎಳೆದಿದ್ರು. ಏನಾಯ್ತು ಎಂದು ವಿಚಾರಿಸಿದಾಗ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಬೆಂಗಳೂರು ತ್ತರ ವಿಭಾಗದ ಡಿಸಿಪಿ ಸೈದಲು ಅಡಾವತ್ ಈ ಸಂಜೆಗೆ ತಿಳಿಸಿದ್ದಾರೆ.ಖಿನ್ನತೆಗೆ ಒಳಗಾಗಿ ಮಕ್ಕಳನ್ನು ಈಕೆ ಕೊಂದಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಆರೋಪಿತೆಯನ್ನು ಜಾಲಹಳ್ಳಿ ಪೊಲೀಸರು ಬಂ„ಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

RELATED ARTICLES

Latest News