Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ಹಾಸನ..?

ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಹಾಟ್ ಸ್ಪಾಟ್ ಆಗುತ್ತಿದೆಯೇ ಹಾಸನ..?

Aadhaar Card for Illegal Bangla Infiltrators in Hassan

ಹಾಸನ, ಆ.31- ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಆಧಾರ್‌ ಕಾರ್ಡ್‌ ಮಾಡಿ ಕೊಡುತ್ತಿದ್ದ ಸಿಬ್ಬಂದಿಯನ್ನು ಪತ್ತೆ ಹಚ್ಚಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಆವರಣದ ಸ್ಪಂದನ ಕೇಂದ್ರದಲ್ಲಿ ಇಂತಹ ನಕಲಿ ದಾಖಲೆಗಳನ್ನು ಪತ್ತೆ ಹಚ್ಚಿದ ಯುಡಿಐ ಬೆಂಗಳೂರು ವಿಚಕ್ಷಣ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಇದರ ಆಧಾರದ ಮೇಲೆ ಜಿಲ್ಲಾಧಿಕಾರಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಸನ ನಗರ ಠಾಣೆ ಸಬ್‌ ಇನ್ಸ್ ಪೆಕ್ಟರ್‌ ಕುಮಾರ್‌ ಸೂಚಿಸಿದ್ದಾರೆ.

ಇದರೊಂದಿಗೆ ಆಧಾರ್‌ ಕಾರ್ಡ್‌ ಮಾಡುವ ಆಪರೇಟರ್‌ ಜನನ-ಮರಣ ಪ್ರಮಾಣ ಪತ್ರದ ದಾಖಲೆಗಳನ್ನೇ ತಿರುಚಿ ಆಧಾರ್‌ಗೆ ಬೇಕಾದ ದಾಖಲೆಗಳಂತೆ ಪರಿವರ್ತಿಸಿ ಆಧಾರ್‌ ನೀಡಲಾಗುತ್ತಿದ್ದ ಬೆಳವಣಿಗೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಹಾಸನ ಜಿಲ್ಲೆಯಲ್ಲಿ ಇಂತಹ ಅದೆಷ್ಟು ಪ್ರಕರಣಗಳಿವೆ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.

ಜನನ ಮರಣ ಪತ್ರದಲ್ಲಿ ಹೆಸರುಗಳನ್ನು ಬದಲಾಯಿಸುವ ಮೂಲಕ ಈ ನಕಲಿ ಆಧಾರ್‌ ಸೃಷ್ಟಿಗೆ ಕಾರಣಕರ್ತರಾಗಿರುವ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಹಾಸನದ ಸಕಲೇಶಪುರ ಸೇರಿದಂತೆ ವಿವಿಧೆಡೆ ತೋಟದ ಕಾರ್ಮಿಕರಾಗಿ ಹಲವಾರು ಬಾಂಗ್ಲಾ ದೇಶಿ ಗರು ಕೆಲಸ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶಿಗರು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಕೆಲವು ಆಧಾರ್‌ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ ಮಾಡುವ ಐಡಿ ಪಾಸ್‌‍ವರ್ಡ್‌ ಇರುವ ಕೆಲ ಆಪ ರೇಟರ್‌ಗಳು ಬಾಂಗ್ಲಾ ನುಸುಳು ಕೋರರು ಇರುವ ಸ್ಥಳಗಳಿಗೆ ತೆರಳಿ ಅಲ್ಲಿಯೇ ಆಧಾರ್‌ ಕಾರ್ಡ್‌ ಮಾಡುವ ಮೂಲಕ ಕೆಲವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸುಧೀರ್ಘ ತನಿಖೆಯ ಅಗತ್ಯವಿದೆ ಎಂಬುದು ದೇಶ ಪ್ರೇಮಿಗಳ ಒತ್ತಾಯವಾಗಿದೆ.

2000 ಕೊಟ್ಟೆರ ಕೆಲ ಆಧಾರ್‌ ಕೇಂದ್ರದಲ್ಲಿ ನಕಲಿ ದಾಖಲೆಯುಕ್ತ ಆಧಾರ್‌:
ಹಾಸನ ಸೇರಿದಂತೆ ವಿವಿಧ ಆಧಾರ್‌ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ ಕೊಡುವ ವ್ಯವಸ್ಥೆ ಹಲವು ತಿಂಗಳುಗಳಿಂದ ನಡೆಯುತ್ತಿದ್ದು ನಕಲಿ ದಾಖಲಿ ಸೃಷ್ಟಿಸಿ ಅಸಲಿ ಆಧಾರ್‌ ಕಾರ್ಡ್‌ ಪಡೆಯುವ ವ್ಯವಸ್ಥೆ ಸದ್ದಿಲ್ಲದೆ ನಡೆಯುತ್ತಿದೆ. ಇದರ ಗಮನ ಹರಿಸಬೇಕಾದ ಪೊಲೀಸರ ಹಾಗೂ ಆಧಾರ್‌ ಕಾರ್ಡ್‌ ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ವಿಪರ್ಯಾಸ.

RELATED ARTICLES

Latest News