Monday, September 16, 2024
Homeಬೆಂಗಳೂರುಡ್ರಿಂಕ್ ಅಂಡ್ ಡ್ರೈವ್ : ಬೆಂಗಳೂರಲ್ಲಿ 297 ಪ್ರಕರಣ ದಾಖಲು

ಡ್ರಿಂಕ್ ಅಂಡ್ ಡ್ರೈವ್ : ಬೆಂಗಳೂರಲ್ಲಿ 297 ಪ್ರಕರಣ ದಾಖಲು

Drink and drive: 297 cases registered in Bangalore

ಬೆಂಗಳೂರು,ಆ.31- ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಚಾಲಕರು ಹಾಗೂ ಸವಾರರ ವಿರುದ್ಧ 297 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಗರಾದ್ಯಂತ ನಡೆಸಿದ್ದ ವಿಶೇಷ ಕಾರ್ಯಾಚರಣೆಯಲ್ಲಿ 50 ಸಂಚಾರಿ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಪೈಕಿ 84 ಅಧಿಕಾರಿಗಳು ಹಾಗೂ 392 ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು 16,483 ವಾಹನಗಳನ್ನು ಪರಿಶೀಲಿಸಿ 297 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವ ಹಾವಳಿಯನ್ನು ತಡೆಗಟ್ಟಲು ಹಾಗೂ ರಸ್ತೆ ಸುರಕ್ಷತೆಗಾಗಿ ಮುಂದಿನ ದಿನಗಳಲ್ಲಿಯೂ ಸಹ ಇಂತಹ ಕಾರ್ಯಾಚರಣೆಯನ್ನು ಹಮಿಕೊಳ್ಳಲಾಗುವುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News