Sunday, September 15, 2024
Homeಬೆಂಗಳೂರುಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ, ವೋಲ್ವೊ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ, ವೋಲ್ವೊ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

BMTC Volvo-Bus

ಬೆಂಗಳೂರು,ಆ.31- ಬುಲೆಟ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದ ಸವಾರನಿಗೆ ಹಿಂದಿನಿಂದ ಬಿಎಂಟಿಸಿ ವೋಲ್ವೊ ಬಸ್ ಡಿಕ್ಕಿ ಹೊಡೆದುಕೊಂಡು ಹೋಗಿ ಟ್ಯಾಂಕರ್ಗೆ ಅಪ್ಪಳಿಸಿದ ಪರಿಣಾಮ ಈ ಎರಡು ವಾಹನಗಳ ಮಧ್ಯೆ ಸಿಲುಕಿ ಸವಾರ ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಮೈಸೂರು ಮೂಲದ ಸುಪ್ರೀತ್ (27) ಮೃತಪಟ್ಟ ಸವಾರ. ಕೆ.ಆರ್.ಪುರದಲ್ಲಿ ವಾಸವಾಗಿದ್ದ ಈತ ಮಾಲ್ ಆಫ್ ಏಷ್ಯಾದಲ್ಲಿ ಉದ್ಯೋಗಿಯಾಗಿದ್ದರು.ರಾತ್ರಿ 9.45 ರ ಸುಮಾರಿನಲ್ಲಿ ಹಳೆ ಮದ್ರಾಸ್ ರಸ್ತೆಯ ಐಟಿಐ ಜಂಕ್ಷನ್ ಬಳಿ ಸುಪ್ರೀತ್ ತನ್ನ ಬುಲೆಟ್ ಬೈಕ್ ನಿಲ್ಲಿಸಿಕೊಂಡು ನಿಂತಿದ್ದನು.

ಈತನ ಮುಂದೆ ಟ್ಯಾಂಕರ್ ನಿಂತಿತ್ತು. ಆ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಬಿಎಂಟಿಸಿ ವೋಲ್ವೊ ಬಸ್ ಈತನಿಗೆ ಡಿಕ್ಕಿ ಹೊಡೆದುಕೊಂಡು ಹೋಗಿ ಟ್ಯಾಂಕರ್ ಅಪ್ಪಳಿಸಿ ನಿಂತಿದೆ.

ಪರಿಣಾಮ ಬಸ್ ಹಾಗೂ ಟ್ಯಾಂಕರ್ ಮಧ್ಯೆ ಸಿಲುಕಿಕೊಂಡ ಸುಪ್ರೀತ್ ಗಂಭೀರ ಗಾಯಗೊಂಡನು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರಿಶೀಲಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಬಿಎಂಟಿಸಿ ವೋಲ್ವೊ ಬಸ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸುದ್ದಿ ತಿಳಿದು ಕೆ.ಆರ್.ಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News