Friday, June 21, 2024
Homeರಾಷ್ಟ್ರೀಯಎಎಪಿಯಿಂದ "ಜೈಲ್‌ ಕಾ ಜವಾಬ್‌ ವೋಟ್‌ ಸೆ" ಅಭಿಯಾನ

ಎಎಪಿಯಿಂದ “ಜೈಲ್‌ ಕಾ ಜವಾಬ್‌ ವೋಟ್‌ ಸೆ” ಅಭಿಯಾನ

ನವದೆಹಲಿ,ಏ. 27 (ಪಿಟಿಐ) : ಅರವಿಂದ್‌ ಕೇಜ್ರಿವಾಲ್‌ ಬಂಧನ ಖಂಡಿಸಿ ಎಎಪಿ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯ ಲಕ್ಷ್ಮೀನಗರದಲ್ಲಿ ಇಂದು ಬೃಹತ್‌ ಪ್ರತಿಭಟನೆ ನಡೆಸಿದರು.ಕೇಜ್ರಿ ಅವರ ಗೈರಿನಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್‌ ಅವರು ಪ್ರಚಾರದ ನೇತೃತ್ವ ವಹಿಸಿರುವ ಸಂದರ್ಭದಲ್ಲೇ ಎಎಪಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಆಮ್‌ ಆದ್ಮಿ ಪಕ್ಷದ (ಎಎಪಿ) ಜೈಲ್‌ ಕಾ ಜವಾಬ್‌ ವೋಟ್‌ ಸೆ ಅಭಿಯಾನದ ಭಾಗವಾಗಿ ಪೂರ್ವ ದೆಹಲಿ ಪ್ರದೇಶದ ಟ್‌ ಓವರ್‌ ಬ್ರಿಡ್ಜ್‌‍ ಬಳಿ ಈ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಿಜೆಪಿ ತೋರಿದ ಸರ್ವಾಧಿಕಾರ ಮತ್ತು ಕೇಜ್ರಿವಾಲ್‌ ಬಂಧನಕ್ಕೆ ತಕ್ಕ ಉತ್ತರ ನೀಡಲು ದೆಹಲಿಯ ಜನತೆ ಸಿದ್ಧರಾಗಿದ್ದಾರೆ ಎಂದು ಸುನೀತಾ ಕೇಜ್ರಿವಾಲ್‌ ಶನಿವಾರ ಪ್ರಚಾರ ನಡೆಸಲಿರುವ ಎಎಪಿಯ ಪೂರ್ವ ದೆಹಲಿ ಲೋಕಸಭಾ ಚುನಾವಣಾ ಅಭ್ಯರ್ಥಿ ಕುಲದೀಪ್‌ ಕುಮಾರ್‌ ತಿಳಿಸಿದ್ದಾರೆ.

ಕುಮಾರ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಎಪಿ ಕಾರ್ಯಕರ್ತರು ಭಿತ್ತಿಪತ್ರಗಳನ್ನು ಹಿಡಿದು ಜೈಲ್‌ ಕಾ ಜವಾಬ್‌ ವೋಟ್‌ ಸೇ ಘೋಷಣೆ ಕೂಗಿದರು.

ಪ್ರಸ್ತುತ ತಿಹಾರ್‌ ಜೈಲಿನಲ್ಲಿರುವ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21 ರಂದು ಜಾರಿ ನಿರ್ದೇಶನಾಲಯ (ಇಡಿ) ಈಗ ರದ್ದುಗೊಳಿಸಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು.

ಸುನೀತಾ ಕೇಜ್ರಿವಾಲ್‌ ರಾಷ್ಟ್ರ ರಾಜಧಾನಿ ಮತ್ತು ಇತರ ರಾಜ್ಯಗಳಲ್ಲಿ ಎಎಪಿಯ ಲೋಕಸಭಾ ಪ್ರಚಾರವನ್ನು ಮುನ್ನಡೆಸಲಿದ್ದಾರೆ ಮತ್ತು ಪೂರ್ವ ದೆಹಲಿಯಲ್ಲಿ ಕುಮಾರ್‌ ಅವರನ್ನು ಬೆಂಬಲಿಸುವ ರೋಡ್‌ಶೋ ಮೂಲಕ ಪಕ್ಷದ ಪ್ರಚಾರ ಕಾರ್ಯವು ಪ್ರಾರಂಭವಾಗುತ್ತದೆ.

RELATED ARTICLES

Latest News